newsfirstkannada.com

KPSC ಇಲಾಖೆಯಲ್ಲಿ ಮತ್ತೊಂದು ಕರ್ಮಕಾಂಡ ಬಯಲು; ಏನದು?

Share :

Published March 31, 2024 at 6:39am

  ಆಯ್ಕೆಪಟ್ಟಿಯ ಕಡತಕ್ಕಾಗಿ ಎಲ್ಲ ಶಾಖೆಗಳಲ್ಲಿ ತಲಾಶ್

  ಜೂನಿಯರ್ ಇಂಜಿನಿಯರ್ ನೇಮಕಾತಿ ಪಟ್ಟಿ ಕಣ್ಮರೆ!

  ಕೊಳಗೇರಿ‌ ಮಂಡಳಿ ಜೂ. ಇಂಜಿನಿಯರ್ ನೇಮಕಾತಿ

ಬೆಂಗಳೂರು: ವಿವಾದಗಳಿಂದಲೇ ಸುದ್ದಿಯಾಗ್ತಿರೋ ಕೆಪಿಎಸ್‌ಸಿಯಲ್ಲಿ ಮತ್ತೊಂದು ಅಚ್ಚರಿ ನಡೆದಿದೆ. ಸಾವಿರಾರು ಜನರ ಭವಿಷ್ಯ ರೂಪಿಸೋ ಇಲಾಖೆಯಲ್ಲಿ ಇಂಪಾರ್ಟೆಂಟ್ ಫೈಲೇ ಮಾಯವಾಗಿ ಬಿಟ್ಟಿದೆ. ಇಡೀ KPSC ಬಿಲ್ಡಿಂಗ್ ಸರ್ಚ್​​​ ಮಾಡಿದ್ರೂ ನೋ ಯೂಸ್.

ಇದೀಗ ಫೈಲ್​​ಗಾಗಿ KPSC ಖಾಕಿ ಮೊರೆ ಹೋಗಿದೆ KPSC ಅಂದ್ರೆ ಕರ್ನಾಟಕ ಲೋಕಸೇವಾ ಆಯೋಗ. ಸಾವಿರಾರೂ ಜನರ ಭವಿಷ್ಯ ರೂಪಿಸೋ ಕಚೇರಿ. ಸರ್ಕಾರಿ ಉದ್ಯೋಗ ನೀಡೋ ಇಲಾಖೆ. ಇಂಥ ಇಲಾಖೆಯಲ್ಲೇ ಮತ್ತೆ ಕರ್ಮಕಾಂಡದ ವಾಸನೆ ಹೊಗೆಯಾಡ್ತಿದೆ. ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕಾತಿಯ ಆಯ್ಕೆಪಟ್ಟಿಯೇ ನಾಪತ್ತೆಯಾಗಿದೆ. ಇಡೀ ಕಚೇರಿ ತಡಕಾಡಿದರೂ ಆಯ್ಕೆಪಟ್ಟಿ ಕಡತ ಮಾತ್ರ ಸಿಕ್ಕೇ ಇಲ್ಲ. ಹೀಗಾಗಿ ಆ ಫೈಲ್​ ಹುಡುಕಿಕೊಡಿ ಅಂತ KPSC ಅಧಿಕಾರಿ ವಿಧಾನಸೌಧ ಠಾಣೆ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: ನ್ಯೂಟ್ರಲಲ್ಲಿ ಇಟ್ಟು ಚಹಾ ಕುಡಿಯಲು ಹೋದ ಚಾಲಕ.. ತನ್ನಷ್ಟಕ್ಕೇ ಚಲಿಸಿ ಪಲ್ಟಿ ಹೊಡೆದ ಗ್ಯಾಸ್​​ ಟ್ಯಾಂಕರ್

ಆಯ್ಕೆ ಪಟ್ಟಿಯೇ ನಾಪತ್ತೆ..!

2016ರ ಆಗಸ್ಟ್ ತಿಂಗಳಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಖಾಲಿ ಇರುವ 9 ಜೂನಿಯರ್‌ ಎಂಜಿನಿಯ‌ರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ನೇಮಕಾತಿ ಪ್ರಕ್ರಿಯೆ ನಡೆಸಿ, 2018ರ ನವೆಂಬರ್‌ ತಿಂಗಳಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ, ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಂತರ ಹೈಕೋರ್ಟ್ ಆದೇಶದಂತೆ ಕೆಪಿಎಸ್‌ಸಿಯ ಗೌಪ್ಯ ಶಾಖೆ-3ರಲ್ಲಿ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸಲಾಗಿತ್ತು. ಅಲ್ಲಿಂದ ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದ ಶಾಖೆಗೆ ರವಾನಿಸಲು 2024ರ ಜನವರಿ 22ರಂದು ಕೆಪಿಎಸ್‌ಸಿ ಕಾರ್ಯದರ್ಶಿಯವರ ಆಪ್ತ ಶಾಖೆಗೆ ಕಳುಹಿಸಲಾಗಿತ್ತು. ಅಲ್ಲಿಕಡತ ಸ್ವೀಕೃತವಾಗಿದ್ದು, ತದನಂತರ ಪತ್ತೆಯಾಗಿಲ್ಲ.

ಅಂತಿಮವಾಗಿ ಮಾರ್ಚ್​​ 13ರಂದು ಆಯೋಗದ ಸಭೆ ನಡೆಸಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲು ತೀರ್ಮಾನಿಸಲಾಗಿತ್ತು. ಈ ದೂರು ಸ್ವೀಕರಿಸಿದ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಸದ್ಯ ಪೊಲೀಸರು ಫೈಲ್ ನಾಪತ್ತೆ ಬಗ್ಗೆ ತನಿಖೆ ಶುರು ಮಾಡಿದ್ದಾರೆ. ಯಾವಾಗ, ಯಾರು ಫೈಲ್ ಕದ್ದಿದ್ದಾರೆ ಅಂತ ಸಿಸಿಟಿವಿ ಚೆಕ್ ಮಾಡ್ತಿದ್ದಾರೆ. ಆದ್ರೆ ಹೈಕೋರ್ಟ್​​​ನಲ್ಲಿರೋ ಕೇಸ್ ವಿಚಾರದ ಫೈಲ್, ಸರ್ಕಾರಿ ಕಚೇರಿಯಲ್ಲೇ ನಾಪತ್ತೆಯಾಗಿದೆ ಅಂದ್ರೆ ಇದರ ಹಿಂದೆ ಯಾರ ಕೈವಾಡ ಅನ್ನೋದೇ ಇಂಟ್ರೆಸ್ಟಿಂಗ್ ವಿಚಾರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KPSC ಇಲಾಖೆಯಲ್ಲಿ ಮತ್ತೊಂದು ಕರ್ಮಕಾಂಡ ಬಯಲು; ಏನದು?

https://newsfirstlive.com/wp-content/uploads/2024/03/kpsc.jpg

Load More