newsfirstkannada.com

×

ದರ್ಶನ್​​ಗೆ ಮತ್ತೊಂದು ಕೇಸ್​ನಲ್ಲಿ ಸಂಕಷ್ಟ.. ಪೊಲೀಸರಿಂದ ಬಿಗ್ ಪ್ಲಾನ್ ರೆಡಿ.. ಏನದು..?

Share :

Published September 16, 2024 at 2:42pm

    ಪೊಲೀಸ್ ತನಿಖೆ ವೇಳೆ ಜೈಲಾಧಿಕಾರಿಗಳ ಕಳ್ಳಾಟ ಬಯಲು

    ಸೆಪ್ಟೆಂಬರ್ 14ರ ರಾತ್ರಿ ಜೈಲು ಸಿಬ್ಬಂದಿಗೆ ಸಾರಾ ಫಾತಿಮಾ ಶಾಕ್

    18 ಮೊಬೈಲ್, 3 ಚಾರ್ಜರ್ ಇರೋದು ಪತ್ತೆ ಆಗಿದೆ

ಬೆಂಗಳೂರು: ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್ ಬಳ್ಳಾರಿ ಜೈಲು ಸೇರಿದ್ದಾರೆ. ಅದಕ್ಕೂ ಮೊದಲು ಅವರು ಪರಪ್ಪನ ಅಗ್ರಹಾರದಲ್ಲಿದ್ದರು. ಬೆಂಗಳೂರಲ್ಲಿ ಸಿಕ್ಕ ರಾಜಾತಿಥ್ಯದ ತಪ್ಪಿಗೆ ಬಳ್ಳಾರಿ ಜೈಲು ಸೇರಿದ್ದಾರೆ. ಇದೀಗ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ.

ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್​​ಗೆ ಸಿಕ್ಕಿರುವ ರಾಜಾತಿಥ್ಯ ವಿರುದ್ಧ ಕೇಸ್ ದಾಖಲಾಗಿದೆ. ಸಂಪೂರ್ಣ ತನಿಖೆ ನಡೆಸಿರುವ ಪೊಲೀಸರು ಕೋರ್ಟ್​ಗೆ ಚಾರ್ಜ್​​ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಒಂದು ತಿಂಗಳೊಳಗಾಗಿ ಚಾರ್ಜ್​ಶೀಟ್ ಸಲ್ಲಿಸಲು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ:ಕೊಹ್ಲಿ ಹೆಸರು ಹೇಳದೇ ಟಾಂಗ್ ಕೊಟ್ಟ ಬೂಮ್ರಾ; ಕೊಹ್ಲಿ ಕೊಹ್ಲಿ ಅನ್ನೋರಿಗೂ ಹೋಯ್ತು ಮೆಸೇಜ್..!

ದರ್ಶನ್ ಜೈಲಲ್ಲಿ ರಾಜಾತಿಥ್ಯ ಸಂಬಂಧ ಮೂರು ಎಫ್ಐಆರ್ ದಾಖಲಾಗಿತ್ತು. ಜೈಲಲ್ಲಿ ದರ್ಶನ್ ವಿಡಿಯೋ ಕಾಲ್ ಸಂಬಂಧ ನಟ ದರ್ಶನ್.. ಸಜಾ ಬಂಧಿ ಕುಳ್ಳ ಶ್ರೀನಿವಾಸ್, ವಿಲ್ಸನ್ ಗಾರ್ಡನ್ ನಾಗ, ಬೇಕರಿ ರಘು ಸೇರಿ 120 ಕ್ಕೂ ಹೆಚ್ಚು ಮಂದಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ವಿಡಿಯೋ ಕಾಲ್​ನಲ್ಲಿ ಮಾತನಾಡಿದ್ದ ಸತ್ಯ, ವಿಡಿಯೋ ಕಾಲ್ ಮಾಡಿದ್ದ ಧರ್ಮನ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಆದರೆ ತನಿಖಾಧಿಕಾರಿಗಳ ಕೈಗೆ ವಿಡಿಯೋ ಕಾಲ್​ನಲ್ಲಿ ಮಾತನಾಡಿದ್ದ ಮೊಬೈಲ್ ಸಿಕ್ಕಿಲ್ಲ. ಇನ್ನು ಅಲ್ಲದೇ ಪೊಲೀಸ್ ತನಿಖೆ ವೇಳೆ ಜೈಲಾಧಿಕಾರಿಗಳ ಕಳ್ಳಾಟ ಕೂಡ ಬಯಲಾಗಿದೆ. ಕಳೆದ ಶನಿವಾರ ರಾತ್ರಿ ಡಿಸಿಪಿ ಫಾತಿಮಾ ಜೈಲಿನ ಮೇಲೆ ದಿಢೀರ್ ದಾಳಿ ಮಾಡಿದ್ದರು. ದಾಳಿ ವೇಳೆ ವಿಲ್ಸನ್ ಗಾರ್ಡನ್ ನಾಗ ಇರುವ ಹೈ ಸೆಕ್ಯೂರಿಟಿ ಬ್ಯಾರಕ್ 1ರಲ್ಲಿ 18 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಮೂರು ಚಾರ್ಜರ್, 7 ಕರೆಂಟ್ ಸ್ಟವ್ ಇರೋದು ಪತ್ತೆಯಾಗಿದೆ.

ಆಗಷ್ಟ್ 22 ರಂದು ಸಿಸಿಬಿ ಕೂಡ ಜೈಲಿನ ಮೇಲೆ ದಾಳಿ ನಡೆಸಿತ್ತು. ಜೈಲಿನ ಪ್ರವೇಶದ ಗೇಟ್ ಬಳಿ ಸಿಸಿಬಿ ಅಧಿಕಾರಿಗಳನ್ನ 45 ನಿಮಿಷ ಸಿಬ್ಬಂದಿ ಕಾಯ್ದಿರಿಸಿದ್ದರು. ಹಿರಿಯ ಅಧಿಕಾರಿಗಳು ಬಂದು ಸರ್ಚ್ ವಾರೆಂಟ್ ನೋಡಬೇಕೆಂದು ಜೈಲು ಸಿಬ್ಬಂದಿ ತಡೆದಿದ್ದರು. ಸಿಸಿಬಿ ದಾಳಿ ಮಾಡ್ತಿರೋ ವಿಚಾರ ಲೀಕ್ ಆಗಿ ನಿಷೇಧಿತ ವಸ್ತು ಪತ್ತೆಯಾಗದ ರೀತಿ ನೋಡಿಕೊಂಡಿದ್ದಾರೆ ಎಂಬ ಆರೋಪ ಇದೆ. ಅದೇ ಕಾರಣಕ್ಕೆ ಸೆಪ್ಟೆಂಬರ್ 14 ರ ರಾತ್ರಿ ಜೈಲು ಸಿಬ್ಬಂದಿಗೆ ದಿಢೀರ್​ ಶಾಕ್ ಕೊಟ್ಟಿದ್ದಾರೆ ಸಾರಾ ಫಾತಿಮಾ. ಡಿಸಿಪಿ ಸಾರಾ ಫಾತಿಮಾ, ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಮಂಜುನಾಥ್, ಹುಳಿಮಾವು ಇನ್ಸ್​ಪೆಕ್ಟರ್ ಕುಮಾರಸ್ವಾಮಿ, ಪರಪ್ಪನ ಅಗ್ರಹಾರ ಠಾಣೆಯ ಇನ್ಸ್​​ಪೆಕ್ಟರ್ ಸತೀಶ್ ಕುಮಾರ್ ದಾಳಿ ಮಾಡಿದ್ದರು.

ಇದನ್ನೂ ಓದಿ:IND vs BAN ಕ್ರಿಕೆಟ್​ ಸರಣಿ ರದ್ದು? ಕಾರಣ ಕೇಳಿದ್ರೆ ಶಾಕ್ ಆಗ್ತೀರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​​ಗೆ ಮತ್ತೊಂದು ಕೇಸ್​ನಲ್ಲಿ ಸಂಕಷ್ಟ.. ಪೊಲೀಸರಿಂದ ಬಿಗ್ ಪ್ಲಾನ್ ರೆಡಿ.. ಏನದು..?

https://newsfirstlive.com/wp-content/uploads/2024/08/darshan-2.jpg

Load More