newsfirstkannada.com

×

ಕೊಹ್ಲಿ ಹೆಸರು ಹೇಳದೇ ಟಾಂಗ್ ಕೊಟ್ಟ ಬೂಮ್ರಾ; ಕೊಹ್ಲಿ ಕೊಹ್ಲಿ ಅನ್ನೋರಿಗೂ ಹೋಯ್ತು ಮೆಸೇಜ್..!

Share :

Published September 16, 2024 at 1:51pm

Update September 17, 2024 at 11:41am

    ಕೊಹ್ಲಿ ಟೀಮ್ ಇಂಡಿಯಾದ ಫಿಟ್ಟೆಸ್​ ಕ್ರಿಕೆಟರ್ ಅಲ್ಲ

    ಈತನೇ ರೋಹಿತ್​ ಬಳಗದ ಮೋಸ್ಟ್​​​​ ಫಿಟ್ಟೆಸ್ಟ್​ ಕ್ರಿಕೆಟರ್

    ಹಲ್​​ಚಲ್​ ಎಬ್ಬಿಸಿದ ವೇಗಿ ಜಸ್​ಪ್ರೀತ್ ಬೂಮ್ರಾ ಹೇಳಿಕೆ

ಫಿಟ್ನೆಸ್​​​..! ಕ್ರಿಕೆಟ್​ ಲೋಕದಲ್ಲಿ ಈ ಮೂರಕ್ಷರದ ಪದಕ ಕೇಳಿದ್ರೆ ತಕ್ಷಣ ನೆನಪಾಗೋದೆ ವಿರಾಟ್ ಕೊಹ್ಲಿ. ಟೀಮ್​ ಇಂಡಿಯಾದಲ್ಲಿ ಫಿಟ್​ನೆಸ್​​ ಕ್ರಾಂತಿ ಮಾಡಿದ ವೀರ. ಈ ಫಿಟ್ನೆಸ್​​​​​​​​​​​​​​​ ಕ್ರಾಂತಿಕಾರನನ್ನೇ ಮೀರಿಸೋ ಮತ್ತೊಬ್ಬ ಆಟಗಾರ ಟೀಮ್ ಇಂಡಿಯಾದಲ್ಲಿದ್ದಾನೆ.

ಕೊಹ್ಲಿ ಟೀಮ್ ಇಂಡಿಯಾದ ಫಿಟ್ಟೆಸ್​ ಕ್ರಿಕೆಟರ್ ಅಲ್ಲ..!

ಟೀಮ್ ಇಂಡಿಯಾದ ಮೋಸ್ಟ್​ ಫಿಟ್ಟೆಸ್ಟ್​ ಕ್ರಿಕೆಟರ್​​ ಯಾರು? ಕಿಂಗ್​ ಕೊಹ್ಲಿನಾ? ವೇಗಿ ಜಸ್​ಪ್ರೀತ್​ ಬೂಮ್ರಾನಾ? ಸದ್ಯ ಇದು ಹಾಟ್​ ಟಾಫಿಕ್ ಆಗಿದೆ. ಸೋಷಿಯಲ್ ಮೀಡಿಯಾ ಹಾಗೂ ಕ್ರಿಕೆಟ್​ ವಲಯದಲ್ಲಿ ಇಬ್ಬರ ಫಿಟ್ನೆಸ್​ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ. ಅದಕ್ಕೆ ಕಾರಣವೂ ಇದೆ.

ನನಗೆ ಗೊತ್ತಿದೆ ನೀವು ಯಾವ ಉತ್ತರವನ್ನ ಹುಡುಕುತ್ತಿದ್ದೀರಿ ಅಂತ. ಆದರೆ ನಾನು ನನ್ನ ಹೆಸರನ್ನೇ ಹೇಳಲು ಬಯಸುತ್ತೇನೆ, ಏಕೆಂದರೆ ನಾನೊಬ್ಬ ಫಾಸ್ಟ್​ ಬೌಲರ್​. ಸುದೀರ್ಘ ಸಮಯದಿಂದ ಆಡುತ್ತಿದ್ದೇನೆ.. ಫಾಸ್ಟ್​ ಬೌಲರ್​ ಆಗಿದ್ದುಕೊಂಡು ಈ ದೇಶದಲ್ಲಿ ಆಡುವುದು ಅಗತ್ಯವಿದೆ. ಹಾಗಾಗಿ ನಾನು ಯಾವಾಗಲೂ ಫಾಸ್ಟ್​​ ಬೌಲರ್​​​​​​​​​​​​​​ ನನ್ನ ಬೆಂಬಲಿಸುತ್ತೇನೆ-ಜಸ್​ಪ್ರಿತ್ ಬೂಮ್ರಾ, ಕ್ರಿಕೆಟಿಗ

ಇದನ್ನೂ ಓದಿ:IND vs BAN ಕ್ರಿಕೆಟ್​ ಸರಣಿ ರದ್ದು? ಕಾರಣ ಕೇಳಿದ್ರೆ ಶಾಕ್ ಆಗ್ತೀರಿ..!

ಕಿಂಗ್ ಕೊಹ್ಲಿಗಿಂತ ನಾನೇ ತುಂಬಾ ಫಿಟ್
‘ಕಿಂಗ್ ಕೊಹ್ಲಿಗಿಂತ ನಾನೇ ತುಂಬಾ ಫಿಟ್’​​​.. ಸ್ಟಾರ್ ವೇಗಿ ಜಸ್​ಪ್ರಿತ್ ಬೂಮ್ರಾರ ಈ ಹೇಳಿಕೆ ಸದ್ಯ ಹಲ್​ಚಲ್​ ಎಬ್ಬಿಸಿದೆ. ಸಂದರ್ಶನವೊಂದರಲ್ಲಿ ಬೂಮ್ರಾಗೆ ಪ್ರಸಕ್ತ ಟೀಂ ಇಂಡಿಯಾದಲ್ಲಿ ಯಾರು ಫಿಟ್ಟೆಸ್ಟ್​ ಕ್ರಿಕೆಟರ್​​​​​ ಅಂತ ಪ್ರಶ್ನೆಸಿದ್ದಾರೆ. ಆಗ ಬೂಮ್ರಾ ಕೊಹ್ಲಿ ಹೆಸರನ್ನ ಹೇಳದೇ ನಾನೇ ಎಂದಿದ್ದಾರೆ. ಆ ಮೂಲಕ ಫಿಟ್ನೆಸ್​ ಐಕಾನ್​​​​​​​​​​​​​​​ ಕಿಂಗ್ ಕೊಹ್ಲಿಗೆ ಯಾರ್ಕರ್ ಸ್ಪೆಷಲಿಸ್ಟ್​​ ಸಖತ್ ಟಕ್ಕರ್ ಕೊಟ್ಟಿದ್ದಾರೆ.

ಫಿಟ್ನೆಸ್​​​​​​​​​​ ಟ್ರೆಂಟ್​ ಸೆಟ್ಟರ್​ ವಿರಾಟ್ ಕೊಹ್ಲಿ
ಕಿಂಗ್ ಕೊಹ್ಲಿ ಮಾಡ್ರನ್​ ಕ್ರಿಕೆಟ್​​ನ ಫಿಟ್ನೆಸ್​ ಗುರು. ಟೀಮ್ ಇಂಡಿಯಾದಲ್ಲಿ ಫಿಟ್ನೆಸ್ ಕ್ರಾಂತಿ ಶುರುವಾಗಿದ್ದೆ ವಿರಾಟ್​​ರಿಂದ. ಕೊಹ್ಲಿ ವಿಶ್ವದ ನಂ.1 ಬ್ಯಾಟರ್ ಆಗಿ ಹೊರಹೊಮ್ಮಲು ಫಿಟ್ನೆಸ್​ ಮಾಂತ್ರವೇ ಕಾರಣ. ಪ್ರತಿ ಪಂದ್ಯ, ಸರಣಿ ಮುನ್ನ ಜಿಮ್​ನಲ್ಲಿ ಇನ್ನಿಲ್ಲದಂತೆ ಬೆವರು ಹರಿಸಿ ದೇಹವನ್ನ ಫುಲ್ ಫಿಟ್​​ ಅಂಡ್ ಫೈನ್ ಆಗಿ ಇಟ್ಟುಕೊಳ್ತಾರೆ. ಜೊತೆಗೆ ಪ್ರಾಕ್ಟೀಸ್​ ಸೆಷನ್​​​ ವೇಳೆ ವಿವಿಧ ವ್ಯಾಯಾಮಗಳನ್ನ ನಡೆಸಿ ಫಿಟ್ನೆಸ್​ ಕಡೆ ಒತ್ತು ನೀಡ್ತಾರೆ. ಪರಿಣಾಮವೇ ಕೊಹ್ಲಿಗೆ ಕಿಂಗ್ ಪಟ್ಟದಕ್ಕಿದೆ.

ಇದನ್ನೂ ಓದಿ:ಭಾರತಕ್ಕೆ ಬರ್ತಿದ್ದಂತೆ ರೋಹಿತ್ ಪಡೆಗೆ ವಾರ್ನಿಂಗ್.. ಬಾಂಗ್ಲಾ ಕ್ಯಾಪ್ಟನ್ ಕೊಟ್ಟ ಎಚ್ಚರಿಕೆ ಏನು?

ಬೂಮ್ರಾ ಸಕ್ಸಸ್​​ ಹಿಂದಿದೆ ಫಿಟ್ನೆಸ್​ ಮಂತ್ರ..!
ಒಂದೆಡೆ ಕಿಂಗ್ ಕೊಹ್ಲಿ ಗ್ರೇಟೆಸ್ಟ್​ ಬ್ಯಾಟ್ಸ್​​​ಮನ್ ಅನ್ನಿಸಿಕೊಂಡ್ರೆ ಜಸ್​ಪ್ರೀತ್ ಬೂಮ್ರಾ ವಿಶ್ವದ ನಂ.1 ಬೌಲರ್​ ಆಗಿ ಗುರುತಿಸಿಕೊಂಡಿದ್ದಾರೆ. ಈ ಯಶಸ್ಸಿಗೆ ಕಾರಣ ಫಿಟ್ನೆಸ್​​​​ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಬೂಮ್ರಾ ಕ್ರಿಕೆಟ್ ಆಟವನ್ನ ಎಷ್ಟು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೋ, ಫಿಟ್ನೆಸ್​​​​ ಅನ್ನ ಕೂಡ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪರಿಣಾಮವೇ ಬೂಮ್ರಾರನ್ನ ಯಾರು ಟಚ್​ ಮಾಡಲು ಸಾಧ್ಯವಾಗ್ತಿಲ್ಲ.

ಇಬ್ಬರೂ ಫಿಟ್ನೆಸ್​ಗೆ ಒತ್ತು.. ಆನ್​​ಫೀಲ್ಡ್​​ನಲ್ಲಿ ದರ್ಬಾರ್​​..!
ಕೊಹ್ಲಿ ಹಾಗೂ ಬೂಮ್ರಾ ನಡುವಿನ ಫಿಟ್ನೆಸ್​ ಡಿಬೇಟ್​​​​​ ಬರೀ ಯಾರು ಹೆಚ್ಚು ವೇಯ್ಟ್​​​ ಎತ್ತುತ್ತಾರೆ ಅಥವಾ ವೇಗವಾಗಿ ಓಡ್ತಾರೆ ಅನ್ನೋದು ಅಲ್ಲ. ಇಬ್ಬರ ಫಿಟ್ನೆಸ್​​​ ಆನ್​ಫೀಲ್ಡ್​ನಲ್ಲಿ ರಿಪ್ಲೆಕ್ಟ್​​​​​​​ ಆಗ್ತಿದೆ. ಫಿಟ್ನೆಸ್ ನಿಂದ ವಿರಾಟ್​ಗೆ​​​​​ ಸುದೀರ್ಘ ಕಾಲ ಬ್ಯಾಟಿಂಗ್​​​, ಚುರುಕಾದ ಫೀಲ್ಡಿಂಗ್​ ಹಾಗೂ ವಿಕೆಟ್ ಮಧ್ಯೆ ಜೋರಾಗಿ ಓಡಲು ಸಹಾಯವಾಗುತ್ತೆ. ಇನ್ನೊಂದೆಡೆ ಬೂಮ್ರಾ ಫಿಟ್ನೆಸ್​ ಕಾಯ್ದುಕೊಳ್ಳುವುದರಿಂದ ಬೌಲಿಂಗ್​ ಸ್ಪೀಡ್​​, ACCURACY ಹಾಗೂ ಲಾಂಗ್​ಟೈಮ್ ಸ್ಪೆಲ್ ಮಾಡಲು ನೆರವಾಗ್ತಿದೆ.

ಬೂಮ್ರಾ ಬೌಲರ್ಸ್​ ದೃಷ್ಟಿಕೋನದಲ್ಲಿ ನಾನೇ ಫಿಟ್ಟೆಸ್ಟ್​ ಕ್ರಿಕೆಟ್ ಎಂದಿದ್ದಾರೆ ನಿಜ. ಹಾಗಂತ ವಿರಾಟ್​ ಫಿಟ್ನೆಸ್​​​​ ಟ್ರೆಂಡ್​ ಸೆಟ್ಟರ್​​​, ಹರಿಕಾರ ಅನ್ನೋದನ್ನ ಮರೆಯುವಂತಿಲ್ಲ. ಇಬ್ಬರ ನಡುವಿನ ಫಿಟ್ನೆಸ್​​ ಫೈಟ್​ ನಿಜಕ್ಕೂ ಆರೋಗ್ಯದಾಯಕ. ಇಬ್ಬರೂ ವಿಶ್ವದ ಸ್ಟಾರ್​ ಪ್ಲೇಯರ್​ಗಳಾಗಿ ಹೊರಹೊಮ್ಮಲು ಫಿಟ್ನೆಸ್​​​​​​​​​​ ಕಾರಣ. ಮುಂದೆಯೂ ಕೊಹ್ಲಿ-ಬೂಮ್ರಾ ಇದೇ ಫಿಟ್ನೆಸ್​ ಕಾಯ್ದುಕೊಳ್ಳಲಿ, ಮತ್ತಷ್ಟು ಪಂದ್ಯಗಳನ್ನ ಭಾರತಕ್ಕೆ ಗೆಲ್ಲಿಸಿಕೊಡುವಂತಾಗಲಿ.

ಇದನ್ನೂ ಓದಿ:4 ಪಂದ್ಯ.. ಕಿತ್ತಿರೋದು 30 ವಿಕೆಟ್.. ಚೆಪಾಕ್​​ನಲ್ಲಿ ಇವ್ರಿಗೆ ಸಾಟಿಯೇ ಇಲ್ಲ.. ಬಾಂಗ್ಲಾಗೆ ಢವಢವ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ ಹೆಸರು ಹೇಳದೇ ಟಾಂಗ್ ಕೊಟ್ಟ ಬೂಮ್ರಾ; ಕೊಹ್ಲಿ ಕೊಹ್ಲಿ ಅನ್ನೋರಿಗೂ ಹೋಯ್ತು ಮೆಸೇಜ್..!

https://newsfirstlive.com/wp-content/uploads/2024/07/Jasprit-bumrah.jpg

Load More