ಚೆಪಾಕ್ನಲ್ಲಿ ಬಾಂಗ್ಲಾ ಟೈಗರ್ಸ್ ಗಿರಿಗಿಟ್ಲೆ ಪಕ್ಕಾ
ಪಕ್ಕಾ ಕೇರಂ ಸ್ಪೆಷಲಿಸ್ಟ್ ಅಡ್ಡ ಕಣ್ರೋ ಎಂದ ಫ್ಯಾನ್ಸ್
ಚೆನ್ನೈನ ಆಪದ್ಬಾಂಧವ.. ಮ್ಯಾಚ್ ವಿನ್ನರ್ ಅಶ್ವಿನ್
ಅಶ್ವಿನ್, ಟೀಮ್ ಇಂಡಿಯಾದ ಆಫ್ ಸ್ಪಿನ್ನರ್. ಹಾಗೇ ಮ್ಯಾಚ್ ವಿನ್ನರ್. ರವಿಚಂದ್ರನ್ ಅಶ್ವಿನ್. ಸ್ಪಿನ್ ಮ್ಯಾಜಿಷಿಯನ್, ಮಾಡ್ರನ್ ಡೇ ಕ್ರಿಕೆಟ್ನ ಸ್ಪಿನ್ ಲೆಜೆಂಡ್. 37ರ ವಯಸ್ಸಿನಲ್ಲೂ ಎದುರಾಳಿಯನ್ನ ಗಿರಗಿಳ್ಲೆ ಹೊಡೆಸೋ ಪಂಟರ್. ಆದ್ರೀಗ ಇದೇ ಕೇರಂ ಸ್ಪೆಷಲಿಸ್ಟ್, ಬಾಂಗ್ಲಾ ಬೇಟೆಗೆ ಸಜ್ಜಾಗಿದ್ದಾರೆ. ಬಾಂಗ್ಲಾ ಟೆಸ್ಟ್ ಸಿರೀಸ್ಗೆ ಸಜ್ಜಾಗ್ತಿರುವ ಕೇರಂ ಸ್ಪೆಷಲಿಸ್ಟ್, ಚೆಪಾಕ್ನಲ್ಲಿ ಬಾಂಗ್ಲಾಗೆ ಚಿಂದಿ ಉಡಾಯಿಸೋದು ಪಕ್ಕ.
ಭಾರತ ಹಾಗೂ ಬಾಂಗ್ಲಾ ಎದುರಿನ ಟೆಸ್ಟ್ ಸರಣಿ, ಇದೇ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದ್ದು, ಪಾಕ್ನಲ್ಲಿ ಗೆದ್ದ ಬಾಂಗ್ಲಾ, ಭಾರತದಲ್ಲೂ ಗೆಲ್ಲೋ ಆತ್ಮವಿಶ್ವಾಸದಲ್ಲೇ ಇದೆ. ಅದು ನಿಜಕ್ಕೂ ಅಸಾಧ್ಯ. ಇದಕ್ಕೆ ಕಾರಣ ಒನ್ ಆ್ಯಂಡ್ ಒನ್ಲಿ ಆರ್.ಅಶ್ವಿನ್.
ಬಾಂಗ್ಲಾ ಟೈಗರ್ಸ್ ಬೇಟೆಗೆ ಅಶ್ವಿನ್ ಕಾತರ
ಭಾರತಕ್ಕೆ ದಂಡೆತ್ತಿ ಬರುತ್ತಿರುವ ಬಾಂಗ್ಲಾ ಟೈಗರ್ಸ್ ಬೇಟೆಗೆ ಆರ್.ಅಶ್ವಿನ್ ರೆಡಿಯಾಗಿದ್ದಾರೆ. ಗೆದ್ದ ಆತ್ಮವಿಶ್ವಾಸದಲ್ಲಿ ತೇಲಾಡ್ತಿರುವ ಬಾಂಗ್ಲಾಗೆ ಸರಿಯಾಗೇ ಪಾಠ ಕಲಿಸುವ ಲೆಕ್ಕಚಾರದಲ್ಲಿರುವ ಅಶ್ವಿನ್, ಚೆಪಾಕ್ನಲ್ಲಿ ಗಿರಗಿಟ್ಲೆ ಆಡಿಸೋದು ಪಕ್ಕ. ಯಾಕಂದ್ರೆ, ಇದು ಪಕ್ಕ ಸ್ಪಿನ್ ಮಾಸ್ಟರ್ ಆರ್.ಅಶ್ವಿನ್ ಅಡ್ಡ.
ಇದನ್ನೂ ಓದಿ:ಸ್ಪೆಷಲ್ ಟ್ಯಾಲೆಂಟ್ ಹುಡುಗನಿಗೆ ಚಾನ್ಸ್ ಕೊಡಲು ಗಂಭೀರ್ ಕಸರತ್ತು.. 8 ವೇಗಿಗಳು ಅಸಮಾಧಾನ..!
ಚೆಪಾಕ್ನಲ್ಲಿ ಅಶ್ವಿನ್ ಮುಂದೆ ಬಾಂಗ್ಲಾ ಚಿಂದಿ ಫಿಕ್ಸ್
ಚೆಪಾಕ್ನಲ್ಲಿ ಯಾವ್ ಸ್ಪಿನ್ನರ್ ಬಾಂಗ್ಲಾಗೆ ಥ್ರೆಟ್ ಆಗ್ತಾರೋ ಇಲ್ವೋ. ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲಿ ಬಾಂಗ್ಲಾಗೆ ಅಶ್ವಿನ್ ಕಾಡೋದು ಗ್ಯಾರಂಟಿ. ಈತನ ಸ್ಪಿನ್ ಬಲೆಗೆ ಸಿಲುಕಿದ್ರೆ, ಚೆಪಾಕ್ನಲ್ಲೇ ಬಾಂಗ್ಲಾ ಚಿಂದಿಯಾಗೋದು ಫಿಕ್ಸ್. ಯಾಕಂದ್ರೆ ಚೆಪಾಕ್ನಲ್ಲಿ ಅಶ್ವಿನ್ರ ಟ್ರ್ಯಾಕ್ ರೆಕಾರ್ಡ್ ಆಗಿದೆ.
ಚೆಪಾಕ್ನಲ್ಲಿ ಆರ್.ಅಶ್ವಿನ್ ಬೌಲಿಂಗ್
ಚೆಪಾಕ್ನಲ್ಲಿ ಇದುವರೆಗೆ 4 ಪಂದ್ಯಗಳ 8 ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್, ಬರೋಬ್ಬರಿ 30 ವಿಕೆಟ್ ಉರುಳಿಸಿದ್ದಾರೆ. 103 ರನ್ ನೀಡಿ 7 ವಿಕೆಟ್ ಉರುಳಿಸಿರುವುದು ಇನ್ನಿಂಗ್ಸ್ನ ಬೆಸ್ಟ್ ಪರ್ಫಾಮೆನ್ಸ್ ಆಗಿದೆ. 4 ಬಾರಿ ಐದು ವಿಕೆಟ್ ಬೇಟೆಯಾಡಿರುವ ಸಾಧನೆ ಮಾಡಿರುವ ಅಶ್ವಿನ್, ಈ ಸಲನೂ 5 ವಿಕೆಟ್ ಪಡೆಯೋದು ಗ್ಯಾರಂಟಿ. ಇಷ್ಟೇ ಅಲ್ಲ. ಬ್ಯಾಟಿಂಗ್ನಲ್ಲೂ ಅಶ್ವಿನ್ ಮಿಂಚು ಹರಿಸಲಿದ್ದಾರೆ. ವಿರಾಟ್, ರೋಹಿತ್, ಕೈಕೊಟ್ಟರೂ ಅಶ್ವಿನ್, ಲೋವರ್ ಆರ್ಡರ್ ಬ್ಯಾಟರ್ ಆಗಿ ಇಲ್ಲಿ ಎದುರಾಳಿಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿಅಂಶಗಳು.
ಇದನ್ನೂ ಓದಿ:ಶ್ರೇಯಾಂಕಾ ಪಾಟೀಲ್ ಕ್ರಿಕೆಟರ್ ಅಲ್ಲ, ಈಗ ಡಾನ್..! ರೌಡಿ ಬೇಬಿಯ ಹೊಸ ಅವತಾರಕ್ಕೆ ಜನ ಕಂಗಾಲ್..!
ಚೆಪಾಕ್ನಲ್ಲಿ ಆರ್.ಅಶ್ವಿನ್ ಬ್ಯಾಟಿಂಗ್
ಬ್ಯಾಟಿಂಗ್ನಲ್ಲೂ ತಂಡಕ್ಕೆ ನೆರವಾಗಿರುವ ಅಶ್ವಿನ್, 4 ಪಂದ್ಯಗಳಿಂದ 229 ರನ್ ಗಳಿಸಿದ್ದಾರೆ. 38.16ರ ಸರಾಸರಿಯಲ್ಲಿ ರನ್ ಗಳಿಸಿರುವ ಅಶ್ವಿನ್, 1 ಶತಕ, 1 ಅರ್ಧಶತಕ ದಾಖಲಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಚೆಪಾಕ್ನಲ್ಲಿ ಬ್ಯಾಟ್ ಆ್ಯಂಡ್ ಬಾಲ್ನಲ್ಲಿ ಅಶ್ವಿನ್ ಸದ್ದು ಮಾಡಲು ರೆಡಿಯಾಗಿದ್ದಾರೆ.
ಮ್ಯಾಚ್ ವಿನ್ನರ್ ಅಶ್ವಿನ್
2021ರ ಇಂಗ್ಲೆಂಡ್ ಎದುರಿನ ಮೊದಲ ಎರಡು ಟೆಸ್ಟ್ ಪಂದ್ಯಕ್ಕೆ ಇದೇ ಚೆಪಾಕ್ ವೇದಿಕೆಯಾಗಿತ್ತು. ಮೊದಲ ಪಂದ್ಯದಲ್ಲಿ ಅಶ್ವಿನ್, ಉತ್ತಮ ಪ್ರದರ್ಶನದ ಹೊರತಾಗಿಯೂ ಟೀಮ್ ಇಂಡಿಯಾ ಸೋತಿತ್ತು. 2ನೇ ಪಂದ್ಯದಲ್ಲೂ ಬಹುಪಾಲು ಸೋಲಿನ ಸುಳಿಗೆ ಸಿಲುಕಿತ್ತು. 2ನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ್ದ ಅಶ್ವಿನ್, ಶತಕದ ಇನ್ನಿಂಗ್ಸ್ ಕಟ್ಟಿದ್ದರು. ಬೌಲಿಂಗ್ನಲ್ಲಿ 8 ವಿಕೆಟ್ ಉರುಳಿಸಿ ಮಿಂಚಿದ್ದರು. ಗೆಲುವಿನ ರೂವಾರಿಯಾಗಿದ್ದವರು ಇದೇ ಅಶ್ವಿನ್.
ಭಾರತೀಯ ಪಿಚ್ಗಳಲ್ಲಿ ಅಶ್ವಿನ್ ಕಿಂಗ್
ಚೆಪಾಕ್ನಲ್ಲೇ ಅಲ್ಲ. ಇಂಡಿಯನ್ ಕಂಡೀಷನ್ಸ್ನಲ್ಲಿ ಕೇರಂ ಸ್ಪೆಷಲಿಸ್ಟ್ ಅಶ್ವಿನ್ಗೆ ಸರಿಸಾಟಿ ಇಲ್ಲ. ಸ್ಪಿನ್ ಫ್ರೆಂಡ್ಲಿ ಪಿಚ್ಗಳಲ್ಲಿ ಬ್ಯಾಟರ್ಗಳನ್ನ ಬುಗರಿಯಂತೆ ಆಡಿಸುವ ಅಶ್ವಿನ್, ಬಾಂಗ್ಲಾಗೆ ಕಾಟ ನೀಡೋದ್ರಲ್ಲಿ ಡೌಟೇ ಇಲ್ಲ. ಹೀಗಾಗಿ ಭಾರತದಲ್ಲಿ ಗೆಲ್ಲೋ ಪ್ಲಾನ್ನಲ್ಲಿರುವ ಬಾಂಗ್ಲಾ, ಕನಸು ಕೈಬಿಟ್ಟರೆ ಉತ್ತಮ.
ಇದನ್ನೂ ಓದಿ:ಬಿಸಿಸಿಐ ಮಾನಹಾನಿ ಮಾಡಿದವರಿಗೆ ಕಪಾಳಮೋಕ್ಷ; ಸತ್ಯ ಬಿಚ್ಚಿಟ್ಟ ಅಫ್ಘಾನ್ ಕ್ರಿಕೆಟ್ ಮಂಡಳಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್