BGT ಸರಣಿಗೆ ಹರ್ಷಿತ್ ರಾಣಾ ಆಯ್ಕೆಗೆ ಚಿಂತನೆ
ಫೇವರಿಸಮ್ ಮಾಡ್ತಿದ್ದಾರಾ ಕೋಚ್ ಗಂಭೀರ್..?
ಟೆಸ್ಟ್ಗೆ ಸಾಕಾ 8 ಫಸ್ಟ್ ಕ್ಲಾಸ್.. 1 IPL ಸೀಸನ್ ಅನುಭವ?
ಸದ್ಯ ಬಾಂಗ್ಲಾ ಟೆಸ್ಟ್ ಸರಣಿಯ ಪ್ರಿಪರೇಷನ್ನಲ್ಲಿ ಟೀಮ್ ಇಂಡಿಯಾ ಬ್ಯುಸಿಯಾಗಿದೆ. ಈ ನಡುವೆಯೇ ಆಸಿಸ್ ಪ್ರವಾಸದ ಮೇಲೆ ಗಂಭೀರ್ ಕಣ್ಣು ಬಿದ್ದಿದೆ. ಅಷ್ಟೇ ಅಲ್ಲ. ಈ ಸರಣಿಯಲ್ಲಿ ಓರ್ವ ಸ್ಪೆಷಲ್ ಟ್ಯಾಲೆಂಟ್ ಹುಡುಗನಿಗೆ ತಂಡದಲ್ಲಿ ಚಾನ್ಸ್ ನೀಡುವ ಲೆಕ್ಕಾಚಾರದಲ್ಲೂ ಇದ್ದಾರೆ.
ಭಾರತ, ಬಾಂಗ್ಲಾ ನಡುವಿನ ಟೆಸ್ಟ್ ಸರಣಿಗೆ ಕೌಂಟ್ಡೌನ್ ಶುರುವಾಗಿದೆ. ಈ ಸರಣಿಗಾಗಿಯೇ ಟೀಮ್ ಇಂಡಿಯಾದ ಪ್ರಿಪರೇಷನ್ ಜೋರಾಗಿದೆ. ಅಖಾಡದಲ್ಲಿ ಆಟಗಾರರು ಬೆವರಿಳಿಸುತ್ತಿದ್ದು, ಟೆಸ್ಟ್ ಸರಣಿ ಗೆಲ್ಲುವತ್ತಲೇ ದೃಷ್ಟಿ ನೆಟ್ಟಿದ್ದಾರೆ. ಇತ್ತ ಕೋಚ್ ಗಂಭೀರ್ ಆ್ಯಂಡ್ ಸೆಲೆಕ್ಷನ್ ಕಮಿಟಿ ಮಾತ್ರ ಆಸ್ಟ್ರೇಲಿಯಾ ಪ್ರವಾಸದತ್ತ ಚಿತ್ತ ನೆಟ್ಟಿದೆ. ಓರ್ವ ಅನ್ಕ್ಯಾಪ್ಡ್ ಯುವ ವೇಗಿಗೆ ತಂಡದಲ್ಲಿ ಚಾನ್ಸ್ ನೀಡುವ ಲೆಕ್ಕಾಚಾರದಲ್ಲಿದ್ದಾರೆ. ಅಂದ್ಹಾಗೆ ಆಟಗಾರ ಬೇರ್ಯಾರು ಅಲ್ಲ. ಡೆಲ್ಲಿಯ ಯುವ ವೇಗಿ ಹರ್ಷಿತ್ ರಾಣಾ.
ಇದನ್ನೂ ಓದಿ:ನಾಗಮಂಗಲ ಪ್ರಕರಣಕ್ಕೆ ಕೇರಳ ಲಿಂಕ್.. ಕಿಡಿಗೇಡಿಗಳು ಹಾರೆ ಬಳಸಿ ಮಾಡಿದ್ದೇನು ಗೊತ್ತಾ..?
BGT ಸರಣಿಗೆ ಹರ್ಷಿತ್ ರಾಣಾ ಆಯ್ಕೆಗೆ ಚಿಂತನೆ
ಶ್ರೀಲಂಕಾ ಪ್ರವಾಸದಲ್ಲಿ ಅಚ್ಚರಿಯಂತೆ ಸ್ಥಾನ ಪಡೆದಿದ್ದ ಹರ್ಷಿತ್ ರಾಣಾ, ಬಾಂಗ್ಲಾ ಎದುರಿನ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳುವ ಚಿಂತನೆಯಲ್ಲಿದ್ದರು. ಬಲಗೈ ಬೌಲರ್ ಎಂಬ ಒಂದೇ ಒಂದು ಕಾರಣಕ್ಕೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಆದ್ರೀಗ ಇದೇ ಯಂಗ್ ಪೇಸರ್ ಹರ್ಷಿತ್ ರಾಣಾಗೆ ಬಿಸಿಸಿಐ ಬಿಗ್ ಆಫರ್ ನೀಡೋ ಚಿಂತನೆಯಲ್ಲಿದೆ. ಬಾಂಗ್ಲಾ ಎದುರಿನ ಚುಟುಕು ಸರಣಿಗಲ್ಲ. ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗಾಗಿ.
ಮುಂದಿನ ನವೆಂಬರ್ ಅಂತ್ಯದಿಂದ ಟೀಮ್ ಇಂಡಿಯಾ, 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಗೆ ತೆರಳಲಿದೆ. ಈ ಪ್ರತಿಷ್ಠಿತ ಸರಣಿಯಲ್ಲೇ ಡೆಲ್ಲಿಯ ಹರ್ಷಿತ್ ರಾಣಾಗೆ ಬುಲಾವ್ ನೀಡೋ ಲೆಕ್ಕಚಾರದಲ್ಲಿದ್ದಾರೆ. ಇದೇ ಈಗ ಕೆಲ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಫೇವರಿಸಮ್ ಮಾಡ್ತಿದ್ದಾರಾ ಕೋಚ್?
ಗೌತಮ್ ಗಂಭೀರ್, ಹೆಡ್ ಕೋಚ್ ಹುದ್ದೆಗೇರಿದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಎಲ್ಲವೂ ಬದಲಾಗಿದೆ. ಸಪೋರ್ಟಿಂಗ್ ಸ್ಟಾಫ್ಗಳಿಂದ ಹಿಡಿದು ತಂಡದ ಆಯ್ಕೆಯ ತನಕ ಗಂಭೀರ್ ಮಾತೇ ವೇದವಾಕ್ಯವಾಗಿದೆ. ಕೋಚಿಂಗ್ ಸ್ಟಾಫ್ನಲ್ಲಿ ಆಪ್ತ ವಲಯಕ್ಕೆ ಪ್ರಿಪರೆನ್ಸ್ ನೀಡಿರುವ ಗಂಭೀರ್, ಈಗ ತಂಡದ ಆಯ್ಕೆಯಲ್ಲೂ ಪೆವರಿಸಮ್ ಮಾಡ್ತಿದ್ದಾರೆ. ಇದೇ ಕಾರಣಕ್ಕೆ ಡೆಲ್ಲಿಯ ಯುವ ವೇಗಿ ಹರ್ಷಿತ್ ರಾಣಾಗೆ ಶ್ರೀಲಂಕಾ ಟಿಕೆಟ್ ನೀಡಿದ್ದ ಸೆಲೆಕ್ಷನ್ ಕಮಿಟಿ, ಈಗ ಇದೇ ವೇಗಿಯನ್ನ ಮಹತ್ವದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಹೆಡ್ ಕೋಚ್ ಗಂಭೀರ್ಗೆ ಹರ್ಷಿತ್ ರಾಣಾ ಮೇಲೆ ಯಾಕಿಷ್ಟು ಕಾಳಜಿ ಅನ್ನೋ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ.
ಇದನ್ನೂ ಓದಿ:ಶ್ರೇಯಾಂಕಾ ಪಾಟೀಲ್ ಕ್ರಿಕೆಟರ್ ಅಲ್ಲ, ಈಗ ಡಾನ್..! ರೌಡಿ ಬೇಬಿಯ ಹೊಸ ಅವತಾರಕ್ಕೆ ಜನ ಕಂಗಾಲ್..!
8 ಫಸ್ಟ್ ಕ್ಲಾಸ್.. 1 IPL ಸೀಸನ್.. ಟೆಸ್ಟ್ಗೆ ಸಾಕಾ..?
ಹರ್ಷಿತ್ ರಾಣಾ.. ಪ್ರತಿಭವಂತ ಬೌಲರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಆತನ ಅಗ್ರೆಷನ್, ಸ್ಲೋವರ್ ಬಾಲ್ಸ್, ಪೇಸ್ ಆ್ಯಂಡ್ ಸ್ವಿಂಗ್ ನಿಜಕ್ಕೂ ಅದ್ಭುತ. ಡೆಲ್ಲಿ ಮೂಲದ ಆಟಗಾರ ಅನ್ನೋ ಕಾರಣಕ್ಕೆ, ಕೆಕೆಆರ್ ತಂಡದ ನಂಟಿನಿಂದ ಗಂಭೀರ್, ಹರ್ಷಿಕ್ ಮೇಲೆ ಒಲವು ತೋರುತ್ತಿದ್ದಾರಾ ಎಂಬ ಅನುಮಾನ ಇದ್ದೇ ಇದೆ. ಇದುವರೆಗೆ 8 ಫಸ್ಟ್ ಕ್ಲಾಸ್ ಮ್ಯಾಚ್ಗಳನ್ನಾಡಿರುವ ಹರ್ಷಿತ್, 32 ವಿಕೆಟ್ ಉರುಳಿಸಿದ್ದಾರೆ. ಒಂದೇ ಒಂದು ಐಪಿಎಲ್ ಸೀಸನ್ ಆಡಿದ್ದಾರೆ. ಇದೇ ಅನುಭವ ಟೆಸ್ಟ್ ಸರಣಿಯನ್ನಾಡಲು ಸಾಕಾ ಅನ್ನೋದೇ ಪ್ರಶ್ನೆ.
ಬೂಮ್ರಾ ಫಿಕ್ಸ್.. ಉಳಿದ ವೇಗಿಗಳ ಕಥೆ ಏನು..?
ಜಸ್ಪ್ರೀತ್ ಬೂಮ್ರಾ ಟೀಮ್ ಇಂಡಿಯಾದ ಫ್ರಂಟ್ ಲೈನ್ ಬೌಲರ್. ಹೀಗಾಗಿ ಬೂಮ್ರಾನಾ ಮುಟ್ಟಂಗಿಲ್ಲ. ಹರ್ಷಿತ್ ರಾಣಾಗೆ ಟೆಸ್ಟ್ ತಂಡದಲ್ಲಿ ಸೇರಿಸಿಕೊಳ್ಳಲು ಮುಂದಾದ್ರೆ, ತಂಡದಲ್ಲಿರುವ ಉಳಿದ ವೇಗಿಗಳ ಕಥೆ ಏನು? ಇಂಜುರಿಯಿಂದ ಚೇತರಿಸಿಕೊಳ್ತಿರುವ ಮೊಹಮ್ಮದ್ ಶಮಿ ಸೇರಿದಂತೆ ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಟೆಸ್ಟ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡ್ತಿದ್ರೆ. ಮತ್ತೊಂದೆಡೆ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಆರ್ಷ್ದೀಪ್ ಸಿಂಗ್, ಅವೇಶ್ ಖಾನ್, ಖಲೀಲ್ ಅಹ್ಮದ್, ನವದೀಪ್ ಸೈನಿ ಸೇರಿದಂತೆ ಹಲವರು ಒಂದೇ ಒಂದು ಅವಕಾಶಕ್ಕಾಗಿ ಸಾಲು ಗಟ್ಟಿ ಕಾಯ್ತಿದ್ದಾರೆ. ಇಂಥದ್ರಲ್ಲಿ ಹರ್ಷಿತ್ ರಾಣಾಗೆ ಚಾನ್ಸ್ ನೀಡಿದ್ರೆ, ಇತರರ ಭವಿಷ್ಯ ಏನು ಅನ್ನೋದೇ ಎಲ್ಲರ ಪ್ರಶ್ನೆಯಾಗಿದೆ.
22ರ ಹರ್ಷೀತ್ ರಾಣಾ, ಸಿಕ್ಕ ಅವಕಾಶದಲ್ಲಿ ಮಿಂಚುತ್ತಿದ್ದಾರೆ ನಿಜ. ಸದ್ಯ ಆಡ್ತಿರುವ ದುಲೀಪ್ ಟ್ರೋಫಿಯಲ್ಲೂ ಅದ್ಬುತ ಪ್ರದರ್ಶನವನ್ನೇ ನೀಡ್ತಿದ್ದಾರೆ ಅನ್ನೋದು ಸತ್ಯ. ಕೆಕೆಆರ್ ತಂಡದ ಆಟಗಾರ, ತವರು ರಾಜ್ಯದ ಪ್ಲೇಯರ್ ಅನ್ನೋ ಕಾರಣಕ್ಕಾಗಿಯೇ ಅನಾನುಭವಿಯನ್ನ ಟೆಸ್ಟ್ ತಂಡಕ್ಕೆ ಕರೆತರುವ ಲೆಕ್ಕಾಚಾರ ನಿಜಕ್ಕೂ, ಹೆಡ್ ಕೋಚ್ ಗಂಭೀರ್ ಫೇವರಿಸಮ್ಗೆ ಸಾಕ್ಷಿಯೇ ಆಗಿದೆ.
ಇದನ್ನೂ ಓದಿ:ಬಿಸಿಸಿಐ ಮಾನಹಾನಿ ಮಾಡಿದವರಿಗೆ ಕಪಾಳಮೋಕ್ಷ; ಸತ್ಯ ಬಿಚ್ಚಿಟ್ಟ ಅಫ್ಘಾನ್ ಕ್ರಿಕೆಟ್ ಮಂಡಳಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್