newsfirstkannada.com

×

ಭಾರತಕ್ಕೆ ಬರ್ತಿದ್ದಂತೆ ರೋಹಿತ್ ಪಡೆಗೆ ವಾರ್ನಿಂಗ್.. ಬಾಂಗ್ಲಾ ಕ್ಯಾಪ್ಟನ್ ಕೊಟ್ಟ ಎಚ್ಚರಿಕೆ ಏನು?

Share :

Published September 16, 2024 at 12:17pm

    ಇಂಡೋ-ಬಾಂಗ್ಲಾ ಟೆಸ್ಟ್​ ಸರಣಿಗೆ ಕೌಂಟ್​ಡೌನ್​

    ಪಾಕ್​ ಆಯ್ತು.. ನೆಕ್ಸ್ಟ್​ ಟಾರ್ಗೆಟ್​ ಟೀಮ್​ ಇಂಡಿಯಾ

    ನಾಯಕ ಶಾಂಟೋ ಬಾಂಗ್ಲಾ ಕ್ರಿಕೆಟ್ ಬದಲಿಸಿದ್ದೇಗೆ?

ಇಂಡೋ-ಬಾಂಗ್ಲಾ ಟೆಸ್ಟ್​ ಸರಣಿಗೆ 2 ದಿನ ಮಾತ್ರ ಬಾಕಿ ಇದೆ. ಸಪ್ಟೆಂಬರ್​ 19ರಿಂದ ಚೆನ್ನೈನಲ್ಲಿ ನಡೆಯೋ ರಿಯಲ್​​ ಟೆಸ್ಟ್​​ ಆರಂಭವಾಗಲಿದ್ದು, ಟೀಮ್​ ಇಂಡಿಯಾದ ತಯಾರಿ ಜೋರಾಗಿದೆ. ಬಾಂಗ್ಲಾ ಟೈಗರ್ಸ್​ನ ಬೇಟೆಯಾಡಿ ಸರಣಿ ಕ್ಲೀನ್​ ಸ್ವೀಪ್​ ಮಾಡೋ ಲೆಕ್ಕಾಚಾರದಲ್ಲಿದೆ. ಈ ಬಾರಿ ಟೈಗರ್ಸ್​​​ನ ಬೋನಿಗೆ ಬೀಳಿಸೋದು ಅಂದುಕೊಂಡಷ್ಟು ಸುಲಭವಾದ ವಿಚಾರವಲ್ಲ. ಸರಣಿ ಆರಂಭಕ್ಕೂ ಮುನ್ನ ಬಲಿಷ್ಠ ಭಾರತ ತಂಡಕ್ಕೆ ಬಾಂಗ್ಲಾ ನಾಯಕ ಸವಾಲ್​ ಎಸೆದಿದ್ದಾನೆ.

ಪಾಕ್​​ ವಿರುದ್ಧ ಮೊದಲ ಟೆಸ್ಟ್​
ತುಂಬಾ ಹಿಂದಲ್ಲ.. ಕಳೆದ 15 ದಿನಗಳ ಹಿಂದಷ್ಟೇ ಬಾಂಗ್ಲಾದೇಶ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಆಗಸ್ಟ್​​​ನಲ್ಲಿ ಬಾಂಗ್ಲಾದೇಶ ತಂಡ ಟೆಸ್ಟ್​ ಸರಣಿಯನ್ನಾಡಲು ಪಾಕಿಸ್ತಾನಕ್ಕೆ ತೆರಳಿದ್ದಾಗ, ಎಲ್ಲರ ಅಭಿಪ್ರಾಯದಲ್ಲಿ ಪಾಕಿಸ್ತಾನವೇ ಗೆಲ್ಲೋ ಫೇವರಿಟ್​ ಆಗಿತ್ತು. ಪಾಕ್​​ ನೆಲದಲ್ಲಿ ಘರ್ಜಿಸಿದ ಬಾಂಗ್ಲಾ ಟೈಗರ್ಸ್ ಐತಿಹಾಸಿಕ ಸಾಧನೆ ಮಾಡ್ತು. ತವರಿನಲ್ಲಿ ಹೀನಾಯವಾಗಿ ಸೋತು ಪಾಕ್ ಮುಖಭಂಗ ಅನುಭವಿಸಿದ್ರೆ, ಬಾಂಗ್ಲಾ ಕ್ಲೀನ್​ಸ್ವೀಪ್​ ಸಾಧನೆ ಮಾಡ್ತು.

ಇದನ್ನೂ ಓದಿ:ಟ್ರಂಪ್​ಗೆ ಜೀವ ಭಯ.. ಮತ್ತೆ ಗುಂಡಿನ ದಾಳಿ, ಈ ಬಾರಿ ಬಚಾವ್ ಆಗಿದ್ದು ಹೇಗೆ..?

ಟಾರ್ಗೆಟ್​ ಟೀಮ್​ ಇಂಡಿಯಾ
ಪಾಕಿಸ್ತಾನ ತಂಡಕ್ಕೆ ಅವರದ್ದೇ ನೆಲದಲ್ಲಿ ಸೋಲಿನ ರುಚಿ ತೋರಿಸಿದ ಬಾಂಗ್ಲಾದೇಶ ತಂಡದ ಇದೀಗ ಭಾರತಕ್ಕೆ ಬಂದಿಳಿದಿದೆ. ಪಾಕ್​ ಸೋಲಿಸಿ ಗೆದ್ದು ಬೀಗಿದ ಆತ್ಮವಿಶ್ವಾಸದ ಅಲೆಯಲ್ಲಿರೋ ತಂಡ ಬಲಿಷ್ಟ ಟೀಮ್​ ಇಂಡಿಯಾಗೂ ಸೋಲಿನ ರುಚಿ ತೋರಿಸೋ ಲೆಕ್ಕಾಚಾರದಲ್ಲಿದೆ.

ನಾವಿಲ್ಲಿ ಬಂದಿರೋದು ಸೋಲೋದಕ್ಕಲ್ಲ
ಟೀಮ್​ ಇಂಡಿಯಾ ವಿರುದ್ಧದ ಸರಣಿಯನ್ನಾಡಲು ಬಾಂಗ್ಲಾದೇಶ ತಂಡ ನಿನ್ನೆ ಭಾರತಕ್ಕೆ ಬಂದಿಳಿದಿದೆ. ಭಾರತಕ್ಕೆ ಬಂದಿಳಿದ ಬೆನ್ನಲ್ಲೇ, ಬಾಂಗ್ಲಾದೇಶದ ಕ್ಯಾಪ್ಟನ್ ನಜ್ಮುಲ್​ ಶಾಂಟೊ ಟೀಮ್​ ಇಂಡಿಯಾಗೆ ವಾರ್ನಿಂಗ್​ ಕೊಟ್ಟಿದ್ದಾರೆ. ನಾವು ಎರಡೂ ಪಂದ್ಯಗಳನ್ನ ಗೆಲ್ಲೋದಕ್ಕಾಗಿ ಆಡ್ತಿದ್ದೀವಿ. ಗೆಲ್ಲೋದೇ ಇಲ್ಲಿ ಮುಖ್ಯ. ನಮ್ಮ ಕೆಲಸವನ್ನ ನಾವು ಸರಿಯಾಗಿ ಮಾಡಬೇಕು. ಗೆಲ್ಲೋ ಪ್ರಕ್ರಿಯೆ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಕ್ಯಾಪ್ಟನ್ ಹೇಳಿದ್ದಾರೆ.

ಇದನ್ನೂ ಓದಿ:4 ಪಂದ್ಯ.. ಕಿತ್ತಿರೋದು 30 ವಿಕೆಟ್.. ಚೆಪಾಕ್​​ನಲ್ಲಿ ಇವ್ರಿಗೆ ಸಾಟಿಯೇ ಇಲ್ಲ.. ಬಾಂಗ್ಲಾಗೆ ಢವಢವ..!

ಹಳೆ ಬಾಂಗ್ಲಾ ಅಲ್ಲ, ಹೊಸ ಬಾಂಗ್ಲಾ
ಬಲಿಷ್ಟ ಟೀಮ್​ ಇಂಡಿಯಾವನ್ನ ಸೋಲಿಸೋ ಮಾತನಾಡಿರೋ ಬಾಂಗ್ಲಾ ನಾಯಕನ ಹೇಳಿಕೆ ಕೆಲವರಿಗೆ ಓವರ್​ ಕಾನ್ಫಿಡೆನ್ಸ್​ ಅನ್ನಿಸಬಹುದು. ಆದರೆ ಭಾರತಕ್ಕೆ ಬಂದಿರೋದು ಹಳೆ ಬಾಂಗ್ಲಾ ಅಲ್ಲ.. ಇದು ಹೊಸ ಬಾಂಗ್ಲಾ.. ಟೀಮ್​ ಇಂಡಿಯಾಗೆ ಶಾಕ್​​ ನೀಡೋ ಸಾಮರ್ಥ್ಯ ಈ ತಂಡಕ್ಕಿದೆ. ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಪ್ರಗ್ಯಾನ್​ ಓಜಾರದ್ದೂ ಇದೇ ಅಭಿಪ್ರಾಯವಾಗಿದೆ.

ಅವರ ತಂಡದಲ್ಲೂ ಉತ್ತಮ ಸ್ಪಿನ್ನರ್ಸ್​ ಇದ್ದಾರೆ. ಮೆಹದಿ ಹಸನ್​ ಪಾಕ್​ ಎದುರಿನ ಸರಣಿಯಲ್ಲಿ ಮ್ಯಾನ್​ ಆಫ್​ ಸೀರಿಸ್​ ಆಗಿದ್ರು. ಉತ್ತಮ ಪ್ರದರ್ಶನ ನೀಡಿದ್ರು. ಉತ್ತಮ ಬ್ಯಾಟ್ಸ್​ಮನ್​ ಮತ್ತು ಸ್ಪಿನ್ನರ್​​. ಶಕೀಬ್​ ಆಲ್​ ಹಸನ್ ಇದ್ದಾರೆ. ಇಂತಹ ಆಟಗಾರರಿದ್ದಾಗ ಗೆಲುವು ಸುಲಭವಿಲ್ಲ. ಪಾಕ್​ ತಂಡವನ್ನ ಅವರ ತವರಿನಲ್ಲೇ ಸೋಲಿಸಿದೆ. ಬಾಂಗ್ಲಾದೇಶ ಸರಿಯಾದ ದಿಕ್ಕಿನಲ್ಲಿ ಸಾಗ್ತಿದೆ ಎಂದು ಅನಿಸ್ತಿದೆ-ಪ್ರಗ್ಯಾನ್​ ಓಜಾ, ಮಾಜಿ ಕ್ರಿಕೆಟಿಗ

ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್.. ಬಾಂಗ್ಲಾ ಬಲಿಷ್ಠ
ಹಿಂದಿಗಿಂತ ಈಗಿರುವ ಬಾಂಗ್ಲಾದೇಶದ ತಂಡ ತುಂಬಾ ಬಲಿಷ್ಟವಾಗಿದೆ. ತಂಡದಲ್ಲಿ ಕ್ವಾಲಿಟಿ ಕ್ರಿಕೆಟರ್ಸ್​​ಗಳಿದ್ದಾರೆ. ಇದೇ ಕಾರಣಕ್ಕೆ ಭಾರತ ತಂಡವನ್ನ ಸೋಲಿಸೋ ಆತ್ಮವಿಶ್ವಾಸ ತಂಡದಲ್ಲಿ ಮೂಡಿದೆ.’

ಇದನ್ನೂ ಓದಿ:ಶ್ರೇಯಾಂಕಾ ಪಾಟೀಲ್ ಕ್ರಿಕೆಟರ್ ಅಲ್ಲ, ಈಗ ಡಾನ್..! ರೌಡಿ ಬೇಬಿಯ ಹೊಸ ಅವತಾರಕ್ಕೆ ಜನ ಕಂಗಾಲ್..!

ಬಾಂಗ್ಲಾ ಸ್ಟ್ರೆಂಥ್​ ಏನು..?
ಯುವ ಹಾಗೂ ಅನುಭವಿ ಬ್ಯಾಟ್ಸ್​ಮನ್ಸ್ ಬಾಂಗ್ಲಾದ ಮೇನ್​​ಸ್ಟ್ರೇಂಥ್​ ಆಗಿದ್ದಾರೆ. ಶಕೀಬ್​ ಆಲ್​ ಹಸನ್​, ಮೆಹದಿ ಹಸನ್, ತಜುಲ್​ ಇಸ್ಲಾಂ​​ರಂತಹ ಕ್ವಾಲಿಟಿ ಸ್ಪಿನ್​​ ಬೌಲರ್ಸ್​ಗಳಿದ್ದಾರೆ. ನಿಹಿದ್​ ರಾಣಾ, ಹಸನ್​ ಮಹಮ್ಮದ್​, ಟಸ್ಕಿನ್​ ಅಹ್ಮದ್​ರಂತ ಫೈರಿ ಬೌಲರ್ಸ್​ಗಳು ತಂಡದ ಬಲವಾಗಿದ್ದಾರೆ. ಜೊತೆಗೆ ಹಿಂದಿಗಿಂತ ಈಗ ತಂಡದ ಫೀಲ್ಡಿಂಗ್​ ಕೂಡ ಸುಧಾರಿಸಿದೆ. ಬಾಂಗ್ಲಾದೇಶ ತಂಡ ಬಲಿಷ್ಟ ತಂಡವಾಗಿ ರೂಪುಗೊಂಡಿರೋದ್ರ ಹಿಂದಿನ ಮಾಸ್ಟರ್​​ ಮೈಂಡ್​​ ನಜ್ಮುಲ್​ ಹೈಸೈನ್​ ಶಾಂಟೋ. ಈ ವ್ಯಕ್ತಿ ನಾಯಕನ ಪಟ್ಟವೇರಿದ ಮೇಲೆ ತಂಡದ ಚರಿಷ್ಮಾ ಬದಲಾಗಿದೆ. ನಜ್ಮುಲ್​​ ಶಾಂಟೋಗಿರೋ ಸಾಮರ್ಥ್ಯ ಅಂಥದ್ದು.

ಬಾಂಗ್ಲಾ ನಾಯಕನ ಬಲವೇನು?

  • ಉತ್ತಮ ಕ್ರಿಕೆಟಿಂಗ್​ ಬ್ರೇನ್​ ಇರೋ ಚಾಣಾಕ್ಷ ನಾಯಕ
  • ಎದುರಾಳಿಯ ಸ್ಟ್ರೆಂಥ್​ ಅಂಡ್ ವೀಕ್​ನೆಸ್​​ ಮೇಲೆ ವರ್ಕೌಟ್​
  • ತಂಡದ ಆಟಗಾರರ ಫೈಟಿಂಗ್​ ಸ್ಪಿರಿಟ್​ ಹೆಚ್ಚಿಸೋ ಕೆಲಸ
  • ಸದಾ ಪಾಸಿಟಿವ್​ ಮೈಂಡ್​​ಸೆಟ್​​.. ಗೆಲುವಿನ ತುಡಿತ
  • ಜವಾಬ್ದಾರಿ ಹೊತ್ತು ಮುಂದೆ ನಿಂತು ಹೋರಾಟ

ಒಟ್ಟಿನಲ್ಲಿ ಪಾಕಿಸ್ತಾನ ತಂಡವನ್ನ​ ಸೋಲಿಸಿದ ಬಳಿಕ ಬಾಂಗ್ಲಾದೇಶ ತಂಡ ಆತ್ಮವಿಶ್ವಾಸ ಹೆಚ್ಚಾಗಿದೆ. ಮತ್ತಷ್ಟು ಬಲಿಷ್ಟ ತಂಡವಾಗಿ ರೂಪುಗೊಂಡಿದ್ದು, ಅದೇ ಕಾನ್ಫಿಡೆನ್ಸ್​​ನಲ್ಲಿ ಭಾರತಕ್ಕೆ ಬಂದಿಳಿದೆ. ಹೀಗಾಗಿ ಈ ಸರಣಿಯಲ್ಲಿ ಟೀಮ್​ ಇಂಡಿಯಾ ಎಚ್ಚರಿಕೆಯ ಹೆಜ್ಜೆಯಿಡಬೇಕಿದೆ. ಅತಿಯಾದ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದ್ರೆ ಅಪಾಯ ತಪ್ಪಿದ್ದಲ್ಲ.

ಇದನ್ನೂ ಓದಿ:ಬಿಸಿಸಿಐ ಮಾನಹಾನಿ ಮಾಡಿದವರಿಗೆ ಕಪಾಳಮೋಕ್ಷ; ಸತ್ಯ ಬಿಚ್ಚಿಟ್ಟ ಅಫ್ಘಾನ್ ಕ್ರಿಕೆಟ್​ ಮಂಡಳಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಭಾರತಕ್ಕೆ ಬರ್ತಿದ್ದಂತೆ ರೋಹಿತ್ ಪಡೆಗೆ ವಾರ್ನಿಂಗ್.. ಬಾಂಗ್ಲಾ ಕ್ಯಾಪ್ಟನ್ ಕೊಟ್ಟ ಎಚ್ಚರಿಕೆ ಏನು?

https://newsfirstlive.com/wp-content/uploads/2024/02/Rohit-Sharma_test.jpg

Load More