ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ದಾಳಿಗೆ ಯತ್ನ
ಆರೋಪಿ ಬಂಧಿಸಿದ ಅಮೆರಿಕ ಭದ್ರತಾ ಸಿಬ್ಬಂದಿ
ಗಾಲ್ಫ್ ಆಡ್ತಿದ್ದ ವೇಳೆ AK-47 ನಿಂದ ಅಟ್ಯಾಕ್
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸಾವಿನ ಅಂಚಿನಿಂದ ಪಾರಾಗಿದ್ದಾರೆ. ಫ್ಲೊರಿಡಾಡ ವೆಸ್ಟ್ ಪಾಮ್ ಬೀಚ್ನಲ್ಲಿ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದೆ. ಈ ವೇಳೆ ಟ್ರಂಪ್ ಗಾಲ್ಫ್ ಕೋರ್ಸ್ನಲ್ಲಿ ಗಾಲ್ಫ್ ಆಡುತ್ತಿದ್ದರು. ಟ್ರಂಪ್ ಸುರಕ್ಷಿತರಾಗಿದ್ದು, ಎಫ್ಬಿಐ ಓರ್ವ ಆರೋಪಿಯನ್ನು ಬಂಧಿಸಿದೆ.
ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ.. ಗುಂಡಿನ ದಾಳಿ ನಡೆದ ಸ್ಥಳದಿಂದ ಟ್ರಂಪ್ ಕೇವಲ 450 ಮೀಟರ್ ದೂರದಲ್ಲಿದ್ದರು. ಗುಂಡಿನ ದಾಳಿಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಶಂಕಿತ ದಾಳಿಕೋರನನ್ನು ಬಂಧಿಸಿದ್ದು, AK-47 ವಶಕ್ಕೆ ಪಡೆಯಲಾಗಿದೆ. ಗನ್ನಿಂದ 4 ಸುತ್ತು ಗುಂಡಿನ ದಾಳಿ ನಡೆಸಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ, ಪ್ರತಿದಾಳಿ ನಡೆಸಿದ್ದಾರೆ. ಇದರಿಂದ ಗಾಬರಿಯಾದ ಆತ ರೈಫಲ್ ಹಾಗೂ ವಿವಿಧ ಶಸ್ತ್ರಾಸ್ತ್ರಗಳನ್ನು ಬಿಟ್ಟು ಕಾರಿನಲ್ಲಿ ಎಸ್ಕೇಪ್ ಆಗಿದ್ದ. ಕಾರಿನ ನಂಬರ್ ಪತ್ತೆ ಮಾಡಿಕೊಂಡು, ಕೆಲವೇ ಗಂಟೆಗಳಲ್ಲಿ ಆತನನ್ನು ಹಿಡಿಯಲಾಗಿದೆ.
ಇದನ್ನೂ ಓದಿ:4 ಪಂದ್ಯ.. ಕಿತ್ತಿರೋದು 30 ವಿಕೆಟ್.. ಚೆಪಾಕ್ನಲ್ಲಿ ಇವ್ರಿಗೆ ಸಾಟಿಯೇ ಇಲ್ಲ.. ಬಾಂಗ್ಲಾಗೆ ಢವಢವ..!
2 ತಿಂಗಳಲ್ಲಿ 2ನೇ ದಾಳಿ
ಟ್ರಂಪ್ ಮೇಲೆ ನಡೆಯುತ್ತಿರುವ ದಾಳಿ ಇದು ಮೊದಲೇನಲ್ಲ. ಕಳೆದ ಎರಡು ತಿಂಗಳಲ್ಲಿ ಇದು ಎರಡನೇ ದಾಳಿಯಾಗಿದೆ. ಈ ಹಿಂದೆ ನಡೆದ ದಾಳಿಯಲ್ಲಿ ಟ್ರಂಪ್ ಕಿವಿಗೆ ಹಾನಿಯಾಗಿತ್ತು. ಇವತ್ತು ತಮ್ಮ ಮೇಲೆ ದಾಳಿಗೆ ನಡೆದ ಯತ್ನದ ಸುದ್ದಿ ತಿಳಿದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾನು ಯಾವತ್ತೂ ಯಾರಿಗೂ ಹೆದರಲ್ಲ, ತಲೆ ಬಾಗಲ್ಲ. ನನ್ನ ಸುತ್ತವೇ ಗುಂಡಿನ ದಾಳಿ ನಡೆಯುತ್ತಿದೆ. ನಾನು ಸುರಕ್ಷಿತವಾಗಿ ಇದ್ದೇನೆ, ಚೆನ್ನಾಗಿದ್ದೇನೆ. ಯಾರೂ ಕೂಡ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಆರೋಪಿ ಹೇಳಿದ್ದೇನು?
ರಯಾನ್ ವೆಸ್ಲಿ ರೌತ್ ಬಂಧಿತ ಆರೋಪಿ. ಈತ ಪ್ರಸ್ತುತ ಹವಾಯಿಯಲ್ಲಿ ವಾಸಿಸುತ್ತಿದ್ದಾನೆ. ಈತನ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮೂಲತಃ ಕೆರೊಲಿನದವನಾಗಿದ್ದು, ಮಾದಕ ವ್ಯಸನಿ ಆಗಿದ್ದಾನೆ. ಪರವಾನಗಿ ಇಲ್ಲದೇ ಕಾರು ಚಾಲನೆ ಹಾಗೂ ಇತರೆ ಆರೋಪಗಳಿಂದ ಬಂಧಿಸಲಾಗಿದೆ. ಮಾರ್ಟಿನ್ ಕೌಂಟಿಯ ಸಿಂಗ್ನಲ್ನಲ್ಲಿ ಬಂಧಿಸಲಾಗಿದೆ. ನಾನು ಉಕ್ರೇನ್ಗಾಗಿ ಹೋರಾಡಲು ಮತ್ತು ಸಾಯಲು ಬಯಸಿದ್ದೆ. ನಾನು ಉಕ್ರೇನ್ಗೆ ಹೋಗಿ ಅಲ್ಲಿ ಹೋರಾಡುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾನೆ.
ಇದನ್ನೂ ಓದಿ:ಶ್ರೇಯಾಂಕಾ ಪಾಟೀಲ್ ಕ್ರಿಕೆಟರ್ ಅಲ್ಲ, ಈಗ ಡಾನ್..! ರೌಡಿ ಬೇಬಿಯ ಹೊಸ ಅವತಾರಕ್ಕೆ ಜನ ಕಂಗಾಲ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ