newsfirstkannada.com

ಭಾರತಕ್ಕೆ ಮತ್ತೊಂದು ಹೀನಾಯ ಸೋಲು.. ಕಿರಿಯರ ವಿಶ್ವಕಪ್‌ನಲ್ಲೂ ಚಾಂಪಿಯನ್ ಆದ ಆಸ್ಟ್ರೇಲಿಯಾ

Share :

Published February 11, 2024 at 9:18pm

Update February 11, 2024 at 9:29pm

    ವಿಶ್ವಕಪ್​ ಫೈನಲ್​ನಲ್ಲಿ ಭಾರತ, ಆಸ್ಟ್ರೇಲಿಯಾ ನಡುವಿನ ಕಾದಾಟ

    ಆಸಿಸ್ ತಂಡಕ್ಕೆ ಈ ಬಾರಿಯ ಅಂಡರ್​-19 ವಿಶ್ವಕಪ್ ಕಿರೀಟ

    174 ರನ್‌ಗಳಿಗೆ ಆಲೌಟ್ ಆದ ಭಾರತದ ಕಿರಿಯರ ತಂಡ

ಅಂಡರ್ 19 ವಿಶ್ವಕಪ್‌ ಹಣಾಹಣಿಯ ಫೈನಲ್ ಪಂದ್ಯದಲ್ಲೂ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. 174 ರನ್‌ಗಳಿಗೆ ಆಲೌಟ್ ಆದ ಭಾರತ ಕಿರಿಯರ ತಂಡ ಆಸ್ಟ್ರೇಲಿಯಾದ ಮಾರಕ ಬೌಲಿಂಗ್ ದಾಳಿಗೆ ಶರಣಾಗಿದೆ. 79 ರನ್‌ಗಳಿಂದ ಫೈನಲ್ ಪಂದ್ಯ ಗೆದ್ದ ಆಸಿಸ್ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಿದೆ.

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾದ ಯುವ ಆಟಗಾರರು 7 ವಿಕೆಟ್ ನಷ್ಟಕ್ಕೆ 253 ರನ್ ಕಲೆ ಹಾಕಿದ್ದರು. 254 ರನ್‌ಗಳ ಟಾರ್ಗೆಟ್ ಬೆನ್ನತ್ತಿದ್ದ ಯಂಗ್ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತು. ಆರಂಭಿಕ ಆಟಗಾರ ಆದರ್ಶ್ ಸಿಂಗ್ ಹೊರೆತು ಪಡಿಸಿದರೆ ಬೇರೆ ಯಾವ ಆಟಗಾರರು ಕ್ರೀಸ್‌ನಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ಕೇವಲ 174 ರನ್‌ಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು. ಮಾರಕ ಬೌಲಿಂಗ್ ದಾಳಿ ಮಾಡಿದ ಆಸ್ಟ್ರೇಲಿಯಾ ಯುವ ಆಟಗಾರರು ಟೀಂ ಇಂಡಿಯಾ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಯಶ್ವಸಿಯಾದರು.

ಇದನ್ನೂ ಓದಿ: U19 World Cup: ಆಸಿಸ್​ ವಿರುದ್ಧ ಗೆದ್ದು 6ನೇ ಟ್ರೋಫಿಗೆ ಮುತ್ತಿಕ್ಕುತ್ತಾ ಭಾರತ.. ಸೋಲೇ ಇಲ್ಲದವರಲ್ಲಿ ಗೆಲ್ಲೋದ್ಯಾರು?

ಕಳೆದ ನವೆಂಬರ್‌ನಲ್ಲಿ ನಡೆದ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಮಧ್ಯೆ ಹಣಾಹಣಿ ನಡೆಿದಿತ್ತು. ಅಂದು ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಗೆದ್ದಿತ್ತು. ಇದೀಗ ಅಂಡರ್ 19 ವಿಶ್ವಕಪ್‌ ಅನ್ನು ಗೆಲ್ಲೋ ಮೂಲಕ ಆಸ್ಟ್ರೇಲಿಯಾ ಕಿರಿಯ ಆಟಗಾರರು ಚಾಂಪಿಯನ್ ಆಗಿದ್ದಾರೆ. ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಟಗಾರರ ಪರ್ಫಾಮೆನ್ಸ್​ ಚೆನ್ನಾಗಿಯೇ ಇತ್ತು. ಆದರೆ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ 6ನೇ ಬಾರಿ ವಿಶ್ವಕಪ್ ಗೆಲ್ಲೋ ಅವಕಾಶ ಕೈ ಚೆಲ್ಲಿದೆ.

ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಭಾರತಕ್ಕೆ ಮತ್ತೊಂದು ಹೀನಾಯ ಸೋಲು.. ಕಿರಿಯರ ವಿಶ್ವಕಪ್‌ನಲ್ಲೂ ಚಾಂಪಿಯನ್ ಆದ ಆಸ್ಟ್ರೇಲಿಯಾ

https://newsfirstlive.com/wp-content/uploads/2024/02/Ind-vs-Aus-world-cup.jpg

Load More