newsfirstkannada.com

ಟೀಮ್ ಇಂಡಿಯಾಕ್ಕೆ ಆಘಾತ; ಭಾರತ-ಪಾಕಿಸ್ತಾನ ಮ್ಯಾಚ್​ಗೆ​ ರೋಹಿತ್ ಕಣಕ್ಕೆ ಇಳಿಯಲ್ವಾ.. ಕಾರಣ?

Share :

Published June 8, 2024 at 5:56pm

  ಅಭಿಮಾನಿಗಳಿಗೆ ಆತಂಕ ಉಂಟು ಮಾಡಿರುವ ಹಿಟ್​ ಮ್ಯಾನ್​

  ಮತ್ತೆ ಗಾಯಕ್ಕೆ ತುತ್ತಾದ ಕ್ಯಾಪ್ಟನ್​ ರೋಹಿತ್.. ನಾಳೆ ಆಡ್ತಾರಾ?

  ಅಭ್ಯಾಸ ಮಾಡುವಾಗ ಹಿಟ್ ಮ್ಯಾನ್ ಏನ್ ಮಾಡಿಕೊಂಡರು?

ಭಾರತ-ಪಾಕಿಸ್ತಾನ ಕ್ರಿಕೆಟ್ ಲೋಕದ ಬದ್ಧ ವೈರಿಗಳು. ಈಗಾಗಲೇ ಈ ಪರಮವೈರಿಗಳ ಕಾದಾಟಕ್ಕೆ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನ ಸಜ್ಜಾಗಿದೆ. ಜೂನ್​​​​ 9 ಅಂದರೆ ನಾಳೆ ಭಾರತ ಹಾಗೂ ಪಾಕಿಸ್ತಾನ ತಂಡಗಳು 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಹೋರಾಡುತ್ತಿವೆ. ಈ ಬಿಗ್​​ವಾರ್​​ನಲ್ಲಿ ನಾಯಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಆದರೆ ಟೀಮ್ ಇಂಡಿಯಾ ಕ್ಯಾಪ್ಟನ್​ ರೋಹಿತ್ ಶರ್ಮಾ ಮತ್ತೆ ಗಾಯಕ್ಕೆ ತುತ್ತಾಗಿರುವುದು ಫ್ಯಾನ್ಸ್​ಗೆ ಬೇಸರ ತರಿಸಿದೆ.

ಇದನ್ನೂ ಓದಿ: IND vs PAK: ಭಾರತ-ಪಾಕ್​ ಹೈವೋಲ್ಟೇಜ್ ಪಂದ್ಯ ರದ್ದಾಗುತ್ತಾ? ನಾಳೆ ಮ್ಯಾಚ್ ನಡೆಯದಿದ್ರೆ ಏನ್ ಆಗುತ್ತೆ?

ಅಮೆರಿಕದ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಭಾರತ- ಪಾಕ್ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದಕ್ಕಾಗಿ ಎರಡು ತಂಡದ ಪ್ಲೇಯರ್ಸ್​ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದೇ ರೀತಿಯಲ್ಲಿ ನೆಟ್​ನಲ್ಲಿ ಅಭ್ಯಾಸ ಮಾಡುವಾಗ ಭಾರತದ ನಾಯಕ ರೋಹಿತ್ ಶರ್ಮಾ ಎಡಗೈನ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಹೆಬ್ಬೆರಳು ಊದಿಕೊಂಡು ಬ್ಯಾಟಿಂಗ್ ಮಾಡಲು ಕೊಂಚ ಕಷ್ಟವಾಗುತ್ತಿದೆ ಎನ್ನಲಾಗಿದೆ. ಈ ಕುರಿತು ಮಾಹಿತಿ ತಿಳಿದು ತಕ್ಷಣ ಓಡೋಡಿ ಬಂದ ವೈದ್ಯಕೀಯ ತಂಡ ಬೆರಳಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಇದನ್ನೂ ಓದಿ: ಬ್ಯೂಟಿ ಕೃತಿ ಶೆಟ್ಟಿ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲ್ಲ ಅಂದಿದ್ದೇಕೆ ವಿಜಯ್ ಸೇತುಪತಿ; ಸೀಕ್ರೆಟ್ ರಿವೀಲ್‌!

ಇದರಿಂದ ಕೊಂಚ ಸುಧಾರಿಸಿಕೊಂಡ ಕ್ಯಾಪ್ಟನ್​ ಮತ್ತೆ ಬ್ಯಾಟಿಂಗ್​ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ನಾಳೆ ಪಾಕ್ ವಿರುದ್ಧ ನಡೆಯುವ ಪಂದ್ಯದಲ್ಲಿ ರೋಹಿತ್ ಆಡ್ತಾರಾ, ಇಲ್ವಾ ಎನ್ನುವ ಪ್ರಶ್ನೆ ಮೂಡಿದೆ. ಆದರೆ ಅಂತಹ ದೊಡ್ಡ ಇಂಜುರಿ ಅಲ್ಲ ಅಂತ ಗೊತ್ತಾಗಿದ್ದು ಪಾಕ್ ವಿರುದ್ಧ ಓಪನರ್ ಆಗಿ ರೋಹಿತ್ ಬ್ಯಾಟ್ ಬೀಸಲಿದ್ದಾರೆ ಎಂದು ತಿಳಿದು ಬಂದಿದೆ. ಐರ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಹಿಟ್​ಮ್ಯಾನ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರು. ಇದರ ಬೆನ್ನಲ್ಲೇ ನೆಟ್​ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವಾಗ ಮತ್ತೆ ಗಾಯಕ್ಕೆ ಒಳಗಾಗಿರುವುದು ಫ್ಯಾನ್ಸ್​ಗೆ ಆತಂಕ ಉಂಟು ಮಾಡಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್ ಇಂಡಿಯಾಕ್ಕೆ ಆಘಾತ; ಭಾರತ-ಪಾಕಿಸ್ತಾನ ಮ್ಯಾಚ್​ಗೆ​ ರೋಹಿತ್ ಕಣಕ್ಕೆ ಇಳಿಯಲ್ವಾ.. ಕಾರಣ?

https://newsfirstlive.com/wp-content/uploads/2024/06/ROHIT_IND_PAK.jpg

Load More