newsfirstkannada.com

ಸಾವು ಗೆದ್ದ ಸಾತ್ವಿಕ್‌ ಮತ್ತೊಂದು ಪವಾಡ.. ಮೆದುಳು ಸ್ಕ್ಯಾನಿಂಗ್‌ ರಿಪೋರ್ಟ್‌ನಲ್ಲಿ ಬಂದಿದ್ದೇನು?

Share :

Published April 5, 2024 at 6:14pm

  ಬೆಳಗ್ಗೆ ಗಂಜಿ ಕೊಡಲು ಹೋದ್ರೆ ಉಪ್ಪಿಟ್ಟು ಬೇಕು ಎಂದು ಕೇಳಿದ ಸಾತ್ವಿಕ್‌

  ತಲೆಕೆಳಗಾಗಿ ಬಿದ್ದಿದ್ದ ಹಿನ್ನೆಲೆ ಸ್ಕ್ಯಾನಿಂಗ್‌ ಮಾಡಿದ ವೈದ್ಯರಿಗೆ ಮತ್ತೊಂದು ಆಶ್ಚರ್ಯ

  ಸಾತ್ವಿಕ್ ಬೆನ್ನು ಸ್ಕ್ಯಾನಿಂಗ್ ರಿಪೋರ್ಟ್‌ ಮಾಡಿದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌

ವಿಜಯಪುರ: ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದ 2 ವರ್ಷದ ಸಾತ್ವಿಕ್‌ ಸಾವನ್ನೇ ಗೆದ್ದು ಬಂದಿದ್ದಾನೆ. ಸತತ 20 ಗಂಟೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಸಾತ್ವಿಕ್ ಪವಾಡ ರೀತಿಯಲ್ಲಿ ಸುರಕ್ಷಿತವಾಗಿ ಸಿಕ್ಕಿದ್ದು ಸಂತೋಷಕ್ಕೆ ಕಾರಣವಾಗಿದೆ. ಕೊಳವೆ ಬಾವಿಯಿಂದ ಹೊರ ಬಂದ ಮೇಲೆ ಸಾತ್ವಿಕ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ತಲೆ ಕೆಳಗಾಗಿ ಕೊಳವೆ ಬಾವಿಯಲ್ಲಿ 20 ಗಂಟೆ ಸಾತ್ವಿಕ್‌ ಸಿಲುಕಿದ್ದರಿಂದ ಸಿಟಿ ಸ್ಕ್ಯಾನ್ ಕೂಡ ಮಾಡಲಾಗಿದೆ.

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾತ್ವಿಕ್ ಆರೋಗ್ಯ ಸುಧಾರಿಸಿದೆ. ಸರ್ಜನ್ ಶಿವಾನಂದ ಮಾಸ್ತಿ ಅವರು ಬಾಲಕ ಆರೋಗ್ಯ ತಪಾಸಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯ ಬೆಡ್‌ ಮೇಲೆ ಮಗು ಸಾತ್ವಿಕ್ ತುಂಬಾ ಲವಲವಿಕೆಯಿಂದ ಆಟ ಆಡುತ್ತಿದ್ದಾನೆ.

ಮೆದುಳು ಸ್ಕ್ಯಾನ್, ಬಿಪಿ, ಸೇರಿದಂತೆ ರಿಪೋರ್ಟ್ ನಾರ್ಮಲ್ ಆಗಿವೆ. ಬೆಳಗ್ಗೆ ಗಂಜಿ ಕೊಡಲು ಹೋದ್ರೆ ತೆಗೆದುಕೊಳ್ಳದೇ ಉಪ್ಪಿಟ್ಟು ಬೇಕೆಂದು ಕೇಳಿ ಸಾತ್ವಿಕ್‌ ತಿಂದಿದ್ದಾನೆ. ತಲೆಕೆಳಗಾಗಿ ಬಿದ್ದಿರುವ ಹಿನ್ನೆಲೆ ನಾವು ಮೆದುಳಿಗೆ ಏನಾದರೂ ಆಗಿರಬಹುದು ಎಂದು ಎಲ್ಲಾ ವಿಭಾಗದ ವೈದ್ಯರು ಚಿಕಿತ್ಸೆಗೆ ಸಿದ್ಧರಾಗಿದ್ದೀವಿ. ಆದ್ರೆ ರಿಪೋರ್ಟ್ ನೋಡಿ ನಮಗೂ ಆಶ್ಚರ್ಯವಾಗಿದೆ. ಮಗುವಿಗೆ ದೈಹಿಕವಾಗಿ ಕೆಲ ಗಾಯವಾಗಿದ್ದು ಬಿಟ್ಟರೆ ಬೇರೆ ಏನೂ ಆಗಿಲ್ಲ. ಸಾತ್ವಿಕ್ ಆರೋಗ್ಯ ಸಂಪೂರ್ಣ ಸುಧಾರಿಸಿದೆ.

ಇದನ್ನೂ ಓದಿ: ಪವಾಡ ರೀತಿಯಲ್ಲಿ ಸಾವನ್ನೇ ಗೆದ್ದು ಬಂದ ಮಗು; ಸಾತ್ವಿಕ್ ಹೆಸರು ಬದಲಾಯಿಸಲು ಹೆತ್ತವರ ನಿರ್ಧಾರ

ಸಾತ್ವಿಕ್ ಬೆನ್ನು ಸ್ಕ್ಯಾನಿಂಗ್ ರಿಪೋರ್ಟ್‌ ಮಾಡುವುದು ಬಾಕಿ ಇದೆ. ಇವತ್ತು ಮತ್ತು ನಾಳೆ ಬೆಳಗ್ಗೆಯವರೆಗೆ ಆರೋಗ್ಯ ಸ್ಥಿತಿ ನೋಡಿ ವೈದ್ಯಕೀಯ ತಂಡದೊಂದಿಗೆ ಚರ್ಚಿಸಿ ನಾಳೆ ಮಧ್ಯಾಹ್ನ ಹೊತ್ತಿಗೆ ಮಗುವನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ಜಿಲ್ಲಾಸ್ಪತ್ರೆ ಸರ್ಜನ್ ಶಿವಾನಂದ ಮಾಸ್ತಿ ಅವರು ನ್ಯೂಸ್ ಫಸ್ಟ್‌ಗೆ ತಿಳಿಸಿದ್ದಾರೆ.

ವಿಜಯಪುರ ಜಿಲ್ಲಾಸ್ಪತ್ರೆಗೆ ಬಾಲಕ ಸಾತ್ವಿಕ್ ನೋಡಲು ಬೇರೆಡೆಯಿಂದ ಜನರು ಆಗಮಿಸುತ್ತಿದ್ದಾರೆ. ಮಗುವಿನ ಆರೋಗ್ಯ ದೃಷ್ಟಿಯಿಂದ ಐಸಿಯುಯೊಳಗೆ ಯಾರಿಗೂ ಪ್ರವೇಶವಿಲ್ಲ. ಮಗು ತಾಯಿ ತಂದೆ ಜೊತೆಗೆ ಆರಾಮ ಆಗಿರಲಿ ಎಂದು ಅನುಕೂಲಕರ ವಾತಾವರಣ ಕಲ್ಪಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವು ಗೆದ್ದ ಸಾತ್ವಿಕ್‌ ಮತ್ತೊಂದು ಪವಾಡ.. ಮೆದುಳು ಸ್ಕ್ಯಾನಿಂಗ್‌ ರಿಪೋರ್ಟ್‌ನಲ್ಲಿ ಬಂದಿದ್ದೇನು?

https://newsfirstlive.com/wp-content/uploads/2024/04/Vijayapura-Borewell-Satwik-4.jpg

Load More