newsfirstkannada.com

BREAKING: ದರ್ಶನ್​​ ಮತ್ತೊಂದು ಫೋಟೋ ವೈರಲ್​.. ಅಚ್ಚರಿ ಮೂಡಿಸಿದೆ ಕೇಂದ್ರ ಕಾರಾಗೃಹದಲ್ಲಿ ಆರೋಪಿ ಮತ್ತು ಕೈದಿಗಳ ನಡೆ!

Share :

Published August 26, 2024 at 10:48am

Update August 26, 2024 at 11:56am

    ಬೆಡ್​ ಮೇಲೆ ಕುಳಿತಿರುವ ದರ್ಶನ್​ ಮತ್ತೊಂದು ಫೋಟೋ

    ನ್ಯೂಸ್​ಫಸ್ಟ್​ಗೆ ಸಿಕ್ಕಿದೆ ದರ್ಶನ್​​ ಎಕ್ಸ್​ಕ್ಲೂಸೀವ್​ ಫೋಟೋ

    ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ ಹೇಗಿದ್ದಾರೆ ಗೊತ್ತಾ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್​ಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಎನ್ನಲಾದ ಮತ್ತೊಂದು ಫೋಟೋ ಇದೀಗ ನ್ಯೂಸ್​​ಫಸ್ಟ್​ಗೆ ಸಿಕ್ಕಿದೆ. ಸದ್ಯ ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ದರ್ಶನ್​​ ಬೆಡ್​ ಮೇಲೆ ಕೈದಿ ಜೊತೆ ಕುಳಿತುಕೊಂಡಿರುವ ಫೋಟೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ​​ಕೈಯಲ್ಲಿ ಸಿಗರೇಟ್ ಸೇದುತ್ತಾ ಬೆಡ್​ ಮೇಲೆ ಕುಳಿತಿರುವ ನಟನ ಮತ್ತೊಂದು ಫೋಟೋ ಇದಾಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲು ಕೈದಿಗಳು ಮತ್ತು ಆರೋಪಿಗಳಿಗೆ ಅರಮನೆಯಾ? ಅಥವಾ ಕಾರಾಗೃಹವಾ ಎಂಬ ಅನುಮಾನಕ್ಕೆ ಮತ್ತಷ್ಟು ಕುಮ್ಮಕ್ಕು ನೀಡಿದೆ.

ಇದನ್ನೂ ಓದಿ: BREAKING: ದರ್ಶನ್​ಗೆ ಆತಿಥ್ಯ ನೀಡಿದ್ದಕ್ಕೆ 7 ಅಧಿಕಾರಿಗಳು ಅಮಾನತು

ಕಳೆದ ಮೂರು ತಿಂಗಳಿನಿಂದ ದರ್ಶನ್​​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ ನಿನ್ನೆ ದರ್ಶನ್​ಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ದೃಶ್ಯ ಸಮೇತ ಸುದ್ದಿ ಬೆಳಕಿಗೆ ಬಂದಿದೆ. ಚೇರ್​ ಮೇಲೆ ಕುಳಿತುಕೊಂಡು ದರ್ಶನ್​ ಕೈಯಲ್ಲಿ ಟೀ ಕಪ್​ ಮತ್ತು ಸಿಗರೇಟು ಸೇದುತ್ತಾ ರೌಡಿಗಳೊಂದಿಗೆ ಮಾತನಾಡುವ ಫೋಟೋವನ್ನು ಮಾಧ್ಯಮಗಳು ಬಿತ್ತರಿಸಿದ್ದವು. ವಿಲ್ಸನ್​ ಗಾರ್ಡನ್​​ ​ ನಾಗ, ಕುಳ್ಳ ಸೀನ ಮತ್ತು ಮ್ಯಾನೇಜರ್​ ನಾಗರಾಜ್ ಜೊತೆಗೆ ಹರಟೆ ಹೊಡೆಯುತ್ತಿರುವ ಫೋಟೋ ವೈರಲ್​ ಆಗಿತ್ತು.

ಇದನ್ನೂ ಓದಿ: 18 ವರ್ಷದಿಂದ ರೌಡಿಸಂ, ಸಾಲು ಸಾಲು ಕೊಲೆ ಕೇಸ್​​ಗಳು.. ದರ್ಶನ್​ ಜೊತೆಗಿರೋ ವಿಲ್ಸನ್​​ ಗಾರ್ಡನ್​ ನಾಗನ ಹಿನ್ನೆಲೆಯೇ ವಿಚಿತ್ರ!

ಇದಾದ ಬಳಿಕ ರೌಡಿ ಶೀಟರ್​ ಜೊತೆಗೆ ವಿಡಿಯೋ ಕಾಲ್​ನಲ್ಲಿ ಮಾತನಾಡುತ್ತಿರುವ ದೃಶ್ಯವು ವೈರಲ್​ ಆಗಿತ್ತು. ಆದರೀಗ ಬೆಡ್​ ಮೇಲೆ ಕೈದಿ ಜೊತೆ ಕುಳಿತುಕೊಂಡಿರುವ ಫೋಟೋ ಹರಿದಾಡುತ್ತಿದೆ. ಕೈಯಲ್ಲಿ ಸಿಗರೇಟು ಸೇದುತ್ತಾ ಆರಾಮಾಗಿ ಜೈಲಿನಲ್ಲಿ ಎಂಜಾಯ್​ ಮಾಡುತ್ತಿರುವ ದೃಶ್ಯ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ದರ್ಶನ್​​ ಮತ್ತೊಂದು ಫೋಟೋ ವೈರಲ್​.. ಅಚ್ಚರಿ ಮೂಡಿಸಿದೆ ಕೇಂದ್ರ ಕಾರಾಗೃಹದಲ್ಲಿ ಆರೋಪಿ ಮತ್ತು ಕೈದಿಗಳ ನಡೆ!

https://newsfirstlive.com/wp-content/uploads/2024/08/darshan-1-1.jpg

Load More