newsfirstkannada.com

18 ವರ್ಷದಿಂದ ರೌಡಿಸಂ, ಸಾಲು ಸಾಲು ಕೊಲೆ ಕೇಸ್​​ಗಳು.. ದರ್ಶನ್​ ಜೊತೆಗಿರೋ ವಿಲ್ಸನ್​​ ಗಾರ್ಡನ್​ ನಾಗನ ಹಿನ್ನೆಲೆಯೇ ವಿಚಿತ್ರ!

Share :

Published August 26, 2024 at 9:00am

Update August 26, 2024 at 1:32pm

    ಕಳ್ಳ ವೃತ್ತಿಯನ್ನು ಮಾಡುತ್ತಿದ್ದವನು ಈಗ ಸ್ವತಂತ್ರ ಡಾನ್​​

    ಜೈಲಿಗೆ ತವರು ಮನೆಯಂತೆ ಹೋಗಿ ಬರುತ್ತಿದ್ದಾನೆ ಈತ

    ವಿಲ್ಸನ್​​ ಗಾರ್ಡನ್​ ನಾಗ ಮಾಡಿರುವ ಕೊಲೆಗಳೆಷ್ಟು ಗೊತ್ತಾ?

ಪರಪ್ಪನ ಅಗ್ರಹಾರದಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್​​ ರಾಜಾತಿಥ್ಯದ ಫೋಟೋ ವೈರಲ್​ ಆಗಿದೆ. ವಿಲ್ಸನ್ ಗಾರ್ಡನ್​​ ನಾಗ, ಕುಳ್ಳ ಸೀನ, ಮ್ಯಾನೇಜರ್​ ನಾಗರಾಜು ಜೊತೆಗೆ​​ ಕುಳಿತುಕೊಂಡು ಟೀ, ಸಿಗರೇಟ್​​ ಸೇದಿಕೊಂಡು ಆರಾಮಾಗಿ ಕುಳಿತಿರುವ ಫೋಟೋ ವೈರಲ್​ ಆಗಿದೆ. ಆದರೀಗ ವಿಲ್ಸನ್​ ಗಾರ್ಡನ್​​ ನಾಗ ಯಾರು? ಆತನ ಹೆಸರಿನಲ್ಲಿ ಪ್ರಕರಣಗಳೆಷ್ಟಿವೆ ಎಂದು ಅನೇಕರು ಹುಡುಕಾಡುತ್ತಿದ್ದಾರೆ. ಈ ಕುರಿತಾಗಿ ಮಾಹಿತಿ ಇಲ್ಲಿದೆ.

ವಿಲ್ಸನ್​​ ಗಾರ್ಡನ್​ ನಾಗ ಯಾರು ಗೊತ್ತಾ?

ವಿಲ್ಸನ್​​ ಗಾರ್ಡನ್​ ನಾಗ 18 ವರ್ಷಗಳಿಂದ ರೌಡಿಸಂನಲ್ಲಿ ಸಕ್ರೀಯವಾಗಿದ್ದು, ಈತ ಕಳ್ಳ ವೃತ್ತಿಯನ್ನು ಮಾಡುತ್ತಿದ್ದನು. ಒಂದು ಕಾಲದಲ್ಲಿ ಸೈಲೆಂಟ್​ ಸುನೀಲ ಮತ್ತು ಒಂಟೆ ರೋಹಿತನ ಜೊತೆಗೆ ಇದ್ದನು. ಅವರು ಹೇಳಿದಂತೆ ಕೇಳುತ್ತಿದ್ದನು.

ಸೈಲೆಂಟ್​ ಸುನೀಲ ಮತ್ತು ಒಂಟೆ ರೋಹಿತನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ವಿಲ್ಸನ್​​ ಗಾರ್ಡನ್​ ನಾಗ ಅವರು ಹೇಳಿದ್ದವರ ಮೇಲೆ ಹಲ್ಲೆ ಮಾಡುತ್ತಿದ್ದನು. ಆದರೀಗ ಸ್ವತಂತ್ರವಾಗಿ ಡಾನ್​ ಎನಿಸಿಕೊಳ್ಳುವಂತೆ ಬೆಳೆದಿದ್ದಾನೆ.

ವಿಲ್ಸನ್​​ ಗಾರ್ಡನ್​ ನಾಗ ಮೇಲಿರುವ ಕೇಸ್​​ಗಳು

ವಿಲ್ಸನ್​​ ಗಾರ್ಡನ್​ ನಾಗ ಮೇಲೆ ಹಲವು ಕೇಸ್​ಗಳಿವೆ. ಪ್ರಾರಂಭದಲ್ಲಿ 2005ರಲ್ಲಿ ಆಡುಗೋಡಿ ಠಾಣೆಯಲ್ಲಿ ಕಳ್ಳತನ ಕೇಸ್​ನಲ್ಲಿ ಈತ ಜೈಲು ಸೇರಿದ್ದನು. ಬಳಿಕ ಜಾಮೀನು ಮೇಲೆ ಹೊರಬಂದಿದ್ದನು. ಹೊರಬಂದ ನಾಗನಿಗೆ ಹಲವು ರೌಡಿಶೀಟರ್​ಗಳ ಸಂಪರ್ಕ ಬೆಳೆಯಿತು.

2009ರಲ್ಲಿ ಕಲಾಸಿಪಾಲ್ಯದ ರೌಡಿ ಗೇಟ್​ ಗಣೇಶ್ ಕೊಲೆ ಕೇಸ್​​​ನಲ್ಲಿ ವಿಲ್ಸನ್​​ ಗಾರ್ಡನ್​ ನಾಗ ಅರೆಸ್ಟ್​​ ಆಗಿದ್ದನು.​ ಈ ಕೇಸ್​ನಲ್ಲಿ 14 ರೌಡಿಗಳು ಅರೆಸ್ಟ್​​ ಆಗ್ತಾರೆ.

ಇದನ್ನೂ ಓದಿ: ಜೈಲಿನಿಂದ ರಘು ಕೂಡ ವಿಡಿಯೋ ಕಾಲ್​​ ಮಾಡಿದ್ದ! ಆದಷ್ಟು ಬೇಗ ಬರ್ತಿನಿ ಹೇಳಿದ್ದ! ಸತ್ಯ ಬಿಚ್ಚಿಟ್ಟ ಸಹೋದರ

2012ರಲ್ಲಿ ಕಿಡ್ನಾಪ್​​, ದರೋಡೆ, ದರೋಡೆಗೆ ಯತ್ನ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ನಂತರ ಕಾಟನ್​ ಪೇಟೆ ರೌಡಿಶೀಟರ್​​ ಗುಪ್ಪನ ಕೊಲೆ ಪ್ರಕರಣದಲ್ಲಿ ಈತ 2 ವರ್ಷ ಜೈಲು ಸೇರಿದ್ದನು. ನಂತರ ಬೇಲ್​ ಮೇಲೆ ಹೊರ ಬಂದಿದ್ದನು.

2014ರಲ್ಲಿ ಶ್ರೀನಿವಾಸ ಎಂಬುವವನ ಕೊಲೆ ಕೇಸ್​​ನಲ್ಲಿ ಭಾಗಿಯಾಗಿ ವಿಲ್ಸನ್​​ ಗಾರ್ಡನ್​​ ನಾಗ ಅರೆಸ್ಟ್​ ಆಗ್ತಾನೆ. ಅದೇ ವರ್ಷ ಆತ ಬೇಲ್​ ಮೇಲೆ ಬರ್ತಾನೆ. ಬಳಿಕ ನಕರಾ ಬಾಬು ಎಂಬುವವನನ್ನು ಕೊಲೆ ಮಾಡ್ತಾನೆ. ಜೈಲು ಸೇರ್ತಾನೆ.

ಇದನ್ನೂ ಓದಿ: ರೌಡಿಶೀಟರ್​ ಸತ್ಯ, ಧರ್ಮ ಹಿನ್ನೆಲೆಯೇ ಬೇರೆ ಇದೆ.. ಜೈಲಿನಿಂದ ವಿಡಿಯೋ ಕಾಲ್​ನಲ್ಲಿ​​ ದರ್ಶನ್​ ಏನು ಹೇಳಿದ್ರು ಗೊತ್ತಾ?

2016ರಲ್ಲಿ ವೈಟ್​​ಫೀಲ್ಡ್​ನಲ್ಲಿ ಸೊಹೇಲ್​​ ಎಂಬಾತನನ್ನು ಕೊಲೆ ಮಾಡ್ತಾನೆ. ಈ ಕೇಸ್​ನಲ್ಲಿ ವಿಲ್ಸನ್​​ ಗಾರ್ಡನ್​ ನಾಗ ಸೇರಿ 16 ಜನ ಅರೆಸ್ಟ್​ ಆಗ್ತಾರೆ. 2018ರಲ್ಲಿ ಸೈಲೆಂಟ್​ ಸುನೀಲ ಮತ್ತು ಒಂಟೆ ಸುನೀಲನ ಜೊತೆಗೆ ಆರ್ಮ್ಸ್​​ ಆ್ಯಕ್ಟ್​​ ಮತ್ತು ದರೋಡೆ ಯತ್ನ ಕೇಸ್​​ನಲ್ಲಿ ಅರೆಸ್ಟ್​ ಆಗುತ್ತಾನೆ.

2020ರಲ್ಲಿ ಅನ್ನಪೂರ್ಣೇಶ್ವರಿ ನಗರದಲ್ಲಿ ಜಿಮ್​​ ಸುಬ್ರಮಣಿ ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗುತ್ತಾನೆ. ಅದೇ ವರ್ಷ ಹಾಸನದ ಹಿರೀಸಾವೆಯಲ್ಲಿ ಶಾಂತಿನಗರ ಲಿಂಗನ ಕೊಲೆ ಮಾಡುತ್ತಾನೆ. 2021ರಲ್ಲಿ ಕೋರಮಂಗಲದಲ್ಲಿ NDPS ಆಕ್ಟ್​​ನಡಿಯಲ್ಲಿ ಪ್ರಕರಣ ದಾಖಲಾಗುತ್ತದೆ.

ಇದನ್ನೂ ಓದಿ: ಜೈಲಲ್ಲೇ ಕುಳಿತು ದರ್ಶನ್​ ವಿಡಿಯೋ ಕಾಲ್​​.. ತನಿಖೆಗೆ ಆದೇಶಿಸಿದ ಕಾರಾಗೃಹ ಡಿಜಿ ಮಾಲಿನಿ ಕೃಷ್ಣಮೂರ್ತಿ ಯಾರು?

ಸದ್ಯ ಸಿದ್ದಾಪುರ ಮಹೇಶ್​​ ಕೊಲೆ ಮಾಡಿಸಿ ವಿಲ್ಸನ್​​ ಗಾರ್ಡನ್​ ನಾಗ ಜೈಲು ಸೇರಿದ್ದಾನೆ. ಕೋಕಾ ಕಾಯ್ಡೆಯಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಅಚ್ಚರಿ ಸಂಗತಿ ಎಂದರೆ ಸಾಲು ಸಾಲು ಕೊಲೆ ಪ್ರಕರಣದಲ್ಲಿ ತವರು ಮನೆಗೆ ಹೋದಂತೆ ಜೈಲು ಸೇರಿರುವ ವಿಲ್ಸನ್​​ ಗಾರ್ಡನ್​ ನಾಗ ಇಷ್ಟು ಆರಾಮಾಗಿ ಅಲ್ಲಿ ಇದ್ದಾನೆ ಎಂಬುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮಾತ್ರವಲ್ಲದೆ ಆತ ಜೈಲಲ್ಲಿ ಇದ್ದಾನೋ ಅಥವಾ ಅರಮನೆಯಲ್ಲಿ ಇದ್ದಾನೋ ಎಂಬ ಸಂಗತಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

18 ವರ್ಷದಿಂದ ರೌಡಿಸಂ, ಸಾಲು ಸಾಲು ಕೊಲೆ ಕೇಸ್​​ಗಳು.. ದರ್ಶನ್​ ಜೊತೆಗಿರೋ ವಿಲ್ಸನ್​​ ಗಾರ್ಡನ್​ ನಾಗನ ಹಿನ್ನೆಲೆಯೇ ವಿಚಿತ್ರ!

https://newsfirstlive.com/wp-content/uploads/2024/08/darshan-2.jpg

Load More