newsfirstkannada.com

RCB, ಪಂಜಾಬ್ ಪಂದ್ಯಕ್ಕೆ ಮಳೆ ಅಡ್ಡಿ.. ಹೇಗಿದೆ ಬೆಂಗಳೂರು ಹವಾಮಾನ..?

Share :

Published March 25, 2024 at 7:53pm

Update March 25, 2024 at 7:59pm

  ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬೌಲಿಂಗ್​​

  ಆರ್​​ಸಿಬಿ ವಿರುದ್ಧ ಮೊದಲು ಬ್ಯಾಟಿಂಗ್​ ಮಾಡಲಿರೋ ಪಂಜಾಬ್​​

  ಇಂದಿನ ಮ್ಯಾಚ್​​ಗೆ ಬೆಂಗಳೂರಲ್ಲಿ ಮಳೆ ಕಾಟ ಇದೆಯೇ..?

ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಿವೆ. ಇದು ಆರ್​​ಸಿಬಿಗೆ ತವರಿನಲ್ಲಿ ಮೊದಲ ಪಂದ್ಯ ಆಗಿದ್ದು, ಗೆಲ್ಲಲು ಕಾತುರದಿಂದ ನೋಡುತ್ತಿದೆ. ಹಾಗಾಗಿಯೇ ಟಾಸ್​ ಗೆದ್ದರೂ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ ಆರ್​​ಸಿಬಿ ಕ್ಯಾಪ್ಟನ್​ ಫಾಫ್​​.

ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ 173 ರನ್​ ಗಳಿಸಿದ್ರೂ ರಕ್ಷಿಸಲು ಸಾಧ್ಯವಾಗದೆ ಆರ್​​ಸಿಬಿ ಸೋತಿತ್ತು. ಬೌಲಿಂಗ್​ನಲ್ಲಿ ಫಾಫ್ ಪಡೆ ಸಂಪೂರ್ಣ ವೈಫಲ್ಯ ಅನುಭವಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಫಸ್ಟ್​ ಬೌಲಿಂಗ್​​​ ಚೂಸ್​ ಮಾಡಿಕೊಳ್ಳಲಾಗಿದೆ. ಎಷ್ಟು ರನ್​ ಹೊಡೆದ್ರೂ ಬಳಿಕ ಚೇಸ್​ ಮಾಡಬಹುದು ಎಂಬುದು ಆರ್​​ಸಿಬಿ ಉದ್ದೇಶ. ಆದರೀಗ, ಈ ಪಂದ್ಯಕ್ಕೆ ಮಳೆಯ ಕಾಟ ಇದೆಯೇ? ಅನ್ನೋ ಚರ್ಚೆ ಶುರುವಾಗಿದೆ.

ಬೆಂಗಳೂರು ಸಾಕಷ್ಟು ಬಿಸಿ ಮತ್ತು ಆರ್ದ್ರ ವಾತಾವರಣ ಇದೆ. ಕಳೆದ ಕೆಲವು ದಿನಗಳಿಂದ ಯಾವುದೇ ಮಳೆ ಕೂಡ ಇಲ್ಲ. ಹವಾಮಾನ ದಿನ ಇಡೀ 34 ಡಿಗ್ರಿ ತಾಪಮಾನದ ಜೊತೆ ಬಿಸಿ ಮತ್ತು ಆರ್ದ್ರವಾಗಿದೆ. ಆರ್ದ್ರತೆ ಸುಮಾರು 35 ಡಿಗ್ರಿ ಇರೋ ಕಾರಣ ಯಾವುದೇ ಮಳೆಯ ಅಪಾಯವಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಟಾಸ್​​ ಗೆದ್ದ ಫಾಫ್​​​​; ಪಂಜಾಬ್​ ಫಸ್ಟ್​ ಬ್ಯಾಟಿಂಗ್​; ಆರ್​​ಸಿಬಿಗೆ ಸ್ಟಾರ್​​ ಪ್ಲೇಯರ್ಸ್​ ಎಂಟ್ರಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB, ಪಂಜಾಬ್ ಪಂದ್ಯಕ್ಕೆ ಮಳೆ ಅಡ್ಡಿ.. ಹೇಗಿದೆ ಬೆಂಗಳೂರು ಹವಾಮಾನ..?

https://newsfirstlive.com/wp-content/uploads/2024/03/RCB-Rain-Story.jpg

Load More