/newsfirstlive-kannada/media/post_attachments/wp-content/uploads/2024/07/Aparna-1.jpg)
ಅಪ್ಪಟ ಕನ್ನಡದ ಪ್ರತಿಭೆ, ಕನ್ನಡ ಭಾಷೆಯ ಅಪ್ಪಟ ಪ್ರೇಮಿ, ಕನ್ನಡದ, ಕರ್ನಾಟಕ ಸರ್ಕಾರದ ಯಾವುದೇ ಕಾರ್ಯಕ್ರಮ ಆದರೂ ಥಟ್ ಅಂತ ನೆನಪಾಗ್ತಿದ್ದ ನಿರೂಪಕಿ ಅಪರ್ಣಾ ಅವರು ನಿರೂಪಣೆ ಅಲ್ಲದೇ ಕನ್ನಡದ ಹಿರಿತೆರೆ, ಕಿರುತೆರೆಯಲ್ಲೂ ತಮ್ಮ ಛಾಪು ಮೂಡಿಸಿ ಮಿಂಚು ಮರೆಯಾಗಿದ್ದಾರೆ.
ಅಂದು ಇಂದೂ ಎಂದಿದಿಗೂ ಕನ್ನಡ ನಿರೂಪಣೆ ಎಂದರೇ ನೆನಪಾಗುತ್ತಿದ್ದ ಕನ್ನಡ ನಾಡಿನ ಅಪ್ಪಟ್ಟ ಪ್ರತಿಭೆ ಇನ್ನು ನೆನಪು ಮಾತ್ರ. ತಮ್ಮ ನಿರೂಪಣಾ ಶೈಲಿಯ ಮುಖಾಂತರ ಕನ್ನಡಿಗರ ಮನೆ ಮಾತಾಗಿದ್ದ ಅಪರ್ಣಾ ಅವರು ಕನ್ನಡ ಹಿರಿತೆರೆ, ಕಿರಿತೆರೆಯಲ್ಲೂ ಮಿಂಚಿದ್ದರು.
/newsfirstlive-kannada/media/post_attachments/wp-content/uploads/2024/07/aparana.jpg)
ಪುಟ್ಟಣ ಕಣಗಾಲ್​​ ಮೂಲಕ ಸಿನಿರಂಗಕ್ಕೆ ಎಂಟ್ರಿ
ಅಪರ್ಣಾ ಅವರು ಕೇವಲ ನಿರೂಪಣೆ ಮಾತ್ರವಲ್ಲದೇ ಕನ್ನಡದ ಹಿರಿತೆರೆ, ಕಿರುತರೆ, ರಂಗಭೂಮಿಯಲ್ಲೂ ತಮ್ಮ ಛಾಪು ಮೂಡಿಸಿದ್ದರು. 1984ರಲ್ಲಿ ತೆರೆಕಂಡ ಗಂಧದ ಗುಡಿಯ ಗಾರುಡಿಗ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂವು ಚಿತ್ರದಲ್ಲಿ ಪಾರ್ವತಿ ಎಂಬ ಪಾತ್ರ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಅಪರ್ಣಾ ಪದಾರ್ಪಣೆ ಮಾಡಿದ್ದರು.
ಅನಂತರ ಸಂಗ್ರಾಮ, ನಮ್ಮೂರ ರಾಜ, ಸಾಹಸ ವೀರ, ಇನ್ಸ್‌ಪೆಕ್ಟರ್ ವಿಕ್ರಂ, ಡಾಕ್ಟರ್ ಕೃಷ್ಣ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ಸಿನಿಮಾಗಳಿಂದ ಸಂಪೂರ್ಣ ದೂರವೇ ಉಳಿದಿದ್ದ ಅಪರ್ಣಾ, ಇತ್ತೀಚಿಗಷ್ಟೇ ತೆರೆಕಂಡ 'ಗ್ರೇ ಗೇಮ್ಸ್' ಎಂಬ ಸಿನಿಮಾದಲ್ಲಿ ನಟಿಸಿದ್ದರು.
/newsfirstlive-kannada/media/post_attachments/wp-content/uploads/2024/07/Aparna-2.jpg)
ಇದನ್ನೂ ಓದಿ: ಮರೆಯಾದ ಮಾಧುರ್ಯ ಕಂಠದ ಕನ್ನಡತಿ.. ಖ್ಯಾತ ನಿರೂಪಕಿ ಅಪರ್ಣಾ ಇನ್ನೂ ನೆನಪು ಮಾತ್ರ!
ಕೇವಲ ಸಿನಿಮಾ ನಿರೂಪಣೆ ಮಾತ್ರವಲ್ಲದೇ ಅಪರ್ಣಾ ಅವರು ಕಿರುತೆರೆಯಲ್ಲೂ ಸಹ ಕಮಾಲ್​ ಮಾಡಿದ್ರು. ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದ ಅಪರ್ಣಾ ಅವರು 2004ರಿಂದ ಮತ್ತೆ ಅಭಿನಯದತ್ತ ಗಮನ ಹರಿಸಿದ್ದರು.
‘ಪ್ರೀತಿಯಿಲ್ಲದ ಮೇಲೆ’ಯ ಪಲ್ಲವಿಯ ಪಾತ್ರಕ್ಕೆ ಶ್ರೇಷ್ಠನಟಿ ಪ್ರಶಸ್ತಿ ಸಿಕ್ಕಿತ್ತು
ಕಿರುತೆರೆಯಲ್ಲಿ ಮೂಡಲಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ಅಪರ್ಣಾ ಅವರು ನಟಿಸಿದ್ದರು. ‘ಪ್ರೀತಿಯಿಲ್ಲದ ಮೇಲೆ’ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಗುರುತಿಸಿಕೊಂಡಿದ್ದ ಅಪರ್ಣಾ, ಝೀ-ವಾಹಿನಿಯ ‘ಜೋಗುಳ’ ಸರಣಿಯಲ್ಲಿ ಮುಖ್ಯಭೂಮಿಕೆಯಲ್ಲಿ ಪಾತ್ರ ಕಾಣಿಸಿಕೊಂಡು ಕನ್ನಡಿಗರ ಮನೆ ಮಾತಾಗಿದ್ದರು. ಇನ್ನು ‘ಪ್ರೀತಿಯಿಲ್ಲದ ಮೇಲೆ’ ಪಲ್ಲವಿಯ ಪಾತ್ರಕ್ಕೆ ಅಪರ್ಣಾ ಅವರಿಗೆ ಶ್ರೇಷ್ಠನಟಿ ಪ್ರಶಸ್ತಿ ಕೂಡ ಲಭಿಸಿತ್ತು.
ಇದನ್ನೂ ಓದಿ: VIDEO: ಅಪರ್ಣಾ ಅವರ ಸೊಗಸಾದ ನಿರೂಪಣೆ ಮೆಲುಕು ಹಾಕಿದ ಕನ್ನಡಿಗರು; ಭಾವಪೂರ್ಣ ಕಂಬನಿ
/newsfirstlive-kannada/media/post_attachments/wp-content/uploads/2024/07/Aparna-3-300x169.jpg)
ಬಿಗ್​ಬಾಸ್ ಕನ್ನಡದ ಮೊದಲ ಸೀಸನ್​ನ ಸ್ಪರ್ಧಿಯಾಗಿದ್ದ ಅಪರ್ಣಾ
2013ರಲ್ಲಿ ಕನ್ನಡದಲ್ಲಿ ಶುರುವಾದ ಬಿಗ್​ಬಾಸ್​​ ಕಾರ್ಯಕ್ರಮದ ಮೊದಲ ಸೀಸನ್​​ನಲ್ಲಿ ಅಪರ್ಣಾ ಸ್ಪರ್ಧಿಯಾಗಿ ಭಾಗವಹಿಸಿದ್ರು. ಇದಾದ ಬಳಿಕ 2015ರಲ್ಲಿ ಆರಂಭವಾದ ಸೃಜನ್ ಲೋಕೇಶ್ ಅವರ 'ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ಅಪರ್ಣಾ ಅವರು ತಮ್ಮ ವ್ಯಕ್ತಿತ್ವಕ್ಕೆ ತದ್ವಿರುದ್ಧ ಪಾತ್ರ, ಒನ್​​ ಅಂಡ್​​ ಓನ್ಲಿ ವರಲಕ್ಷ್ಮೀಯಾಗಿ ಕಾಣಿಸಿಕೊಂಡು ಕನ್ನಡಿಗರ ಮನ ಗೆದ್ದಿದ್ದರು.
‘ನಮ್ಮ ಮೆಟ್ರೋ’ ಧ್ವನಿಯಾಗಿದ್ದ ಖ್ಯಾತ ನಿರೂಪಕಿ
ಕಳೆದ 3 ದಶಕಗಳ ವರೆಗೆ ಕನ್ನಡ ಸೇವೆ ಸಲ್ಲಿಸಿದ್ದ ಅಪರ್ಣಾ ಅವರು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರು ಹತ್ತುವ, ಮತ್ತು ಇಳಿಯುವ ಸೂಚನೆಗೆ ಧ್ವನಿ ಗೂಡಿಸಿದ್ದರು. ಜೊತೆಗೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​​ನಲ್ಲಿ ಘೋಷಣೆ ಸೇರಿ ಅನೇಕ ಪ್ರಕಟಣೆಗಳಿಗೆ ಧ್ವನಿಯಾಗಿದ್ರು.
ಇದನ್ನೂ ಓದಿ: ಅಪರ್ಣಾ ‘ಮಜಾ ಟಾಕೀಸ್’ ಜರ್ನಿ ಶುರುವಾಗಿದ್ದು ಹೇಗೆ? ಕನ್ನಡಿಗರ ಮನಗೆದ್ದ ವರಲಕ್ಷ್ಮೀ ಇನ್ನು ನೆನಪು ಮಾತ್ರ
ಒಟ್ಟಾರೆ ತಮ್ಮ ನಿರೂಪಣಾ ಶೈಲಿಯಿಂದಲೇ ಲಕ್ಷಾಂತರ ಅಭಿಮಾನಿ ಬಳಗ ಹೊಂದಿದ್ದ ಕನ್ನಡದ ಕಂಠ ಎಂದೇ ಗುರುತಿಸಿಕೊಂಡಿದ್ದ ಅಪರ್ಣಾ ಅವರು ಮಾತನಾಡುವುದನ್ನು ನಿಲ್ಲಿಸಿದ್ದು ನಿಜಕ್ಕೂ ಆಘಾತ ಉಂಟುಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us