/newsfirstlive-kannada/media/post_attachments/wp-content/uploads/2024/07/Aparna-2.jpg)
ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ಬರಸಿಡಿಲಿನಂತೆ ಬಂದಿದೆ. ಹಸಿರೂರು ಕರುನಾಡಿನ ಉಸಿರು ಅಂದ್ರೆ ಅದು ಕನ್ನಡ.. ಆ ಕನ್ನಡಕ್ಕೆ ಒಂದು ಇಂಪು ತಂದಿದ್ದು ಅದು ಅಪರ್ಣಾ.. ಸರಳ ಕನ್ನಡದ ಅಂದದ ಕಾರ್ಯಕ್ರಮಕ್ಕೆ ಚಂದದ ನಿರೂಪಣೆಗೆ ರಾಯಭಾರಿ. ಅದೆಲ್ಲವೂ ಈಗ ನೆನಪಿನಂಗಳದ ತೋರಣವಷ್ಟೇ. ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅಪರ್ಣಾ ನಿಧನರಾಗಿದ್ದಾರೆ.
ವೈದ್ಯರ ಗಡುವು ಮೀರಿ ಅರ್ಪಣಾ ಬದುಕಿದ್ದೆ ಚಮತ್ಕಾರ
ಅಪರ್ಣಾರ ವೈಯಕ್ತಿಕ ಬದುಕು ಅಷ್ಟೇ ಏರಿಳಿತದಿಂದ ಕೂಡಿದ್ದು, ಕೊನೆಗಾಲದಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ.. ಎದೆಯಾಳದಿಂದ ಜೋಗದಂತೆ ಧುಮ್ಮುಕ್ಕುತ್ತಿದ್ದ ಸ್ವರ ಭಂಡಾರ, ಸಹ್ಯಾದ್ರಿಯಷ್ಟೇ ಸುಮಧುರ ತಂಗಾಳಿ ಎದೆಗಂಪಿಸ್ತಿತ್ತು. ಅಪರ್ಣಾರ ಶ್ವಾಸಕೋಶಕ್ಕೆ ಕ್ಯಾನ್ಸರ್​​ ಎಂಬ ಮಾರಿ ಎರಡು ವರ್ಷದ ಹಿಂದೆ ದೇಹಕ್ಕೆ ನುಗ್ಗಿತ್ತು. ಅದು ಗೊತ್ತಾಗುವ ಹೊತ್ತಿಗೆ ಅದು 4ನೇ ಸ್ಟೇಜ್​ನಲ್ಲಿತ್ತು.. ವೈದ್ಯರು ಹೇಳಿದ್ದು ಒಂದೇ ಮಾತು ಹೆಚ್ಚೆಂದ್ರೆ ಆರು ತಿಂಗಳು.
ಇದನ್ನೂ ಓದಿ:ಮೌನಕ್ಕೆ ಜಾರಿತು ಅಕ್ಷರಗಳಿಗೂ ಭಾವ ತುಂಬುತ್ತಿದ್ದ ದನಿ.. ಅಪರ್ಣಾ ಅವರ 7 ಅಪೂರ್ವ ದಾಖಲೆಗಳು.. ಇಲ್ಲಿವೆ
/newsfirstlive-kannada/media/post_attachments/wp-content/uploads/2024/07/Aparna-2.jpg)
ಎರಡು ವರ್ಷದ ಹಿಂದೆ.. ಅಂದರೆ ಇದೇ ಜುಲೈನಲ್ಲಿ.. ಶ್ವಾಸಕೋಶದ ಕ್ಯಾನ್ಸರ್ ಎಂದು ತಪಾಸಣೆಯಲ್ಲಿ ಗೊತ್ತಾಯಿತು. ಅದು ಆಗಲೇ ನಾಲ್ಕನೇ ಹಂತದಲ್ಲಿತ್ತು. ಮೊದಲು ನೋಡಿದ ವೈದ್ಯರು ಇನ್ನು ಆರು ತಿಂಗಳ ಇದ್ದರೆ ಹೆಚ್ಚು ಎಂದರು. ಆದರೆ ಅವಳು ಛಲಗಾತಿ. ಏನಾದರೂ ಮಾಡಿ ನಾನು ಬದುಕುತ್ತೀನಿ ಎಂಬ ಛಲ ಇತ್ತು. ಅದಾದ ಒಂದೂವರೆ ವರ್ಷಗಳ ಕಾಲ ಹೋರಾಟ ನಡೆಸಿದಳು. ಜನವರಿ ತನಕ ಹೋರಾಟ ನಡೆಸಿದಳು. ಫೆಬ್ರವರಿಯಿಂದ ಸ್ವಲ್ಪ ಸೋತಳು- ನಾಗರಾಜ್ ವಸ್ತಾರೆ, ಅಪರ್ಣಾ ಪತಿ
ವಿಧಿ ಬರಹ ಎಷ್ಟು ಘೋರ ನೋಡಿ, ಬರುವ ಅಕ್ಟೋಬರ್​​​ಗೆ 58 ವರ್ಷದ ಜನ್ಮದಿನ. ಆದ್ರೆ, ಎಲ್ಲೂ ಸಹ ಅಪರ್ಣಾರ ನಿಜಾವಾದ ವಯಸ್ಸು ತೊರಿಸಲಿಲ್ಲ.. ವೈಯಕ್ತಿಕವಾಗಿ ತುಂಬಾ ಖಾಸಗಿಯಾಗಿ ಬದುಕಿದ ಅಪರ್ಣಾ, ಅರ್ಥಪೂರ್ಣ ಸುಂದರ ಬದುಕನ್ನ ಕಳೆದವ್ರು. ‘ಅವಳು ಧೀರೆ. ಅದನ್ನು ಇಷ್ಟುವರ್ಷ ತೋರಿಸಿಕೊಟ್ಟಳು. ನಾವಿಬ್ಬರು ಜಂಟಿಯಾಗಿ ಸೋತಿದ್ವಿ ಎಂದು ನಿಮ್ಮೆದುರು ಹೇಳುತ್ತಿದ್ದೇನೆ’ ಎನ್ನುತ್ತ ನಾಗರಾಜ್ ವಸ್ತಾರೆ ಕಣ್ಣೀರು ಇಟ್ಟಿದ್ದಾರೆ.
ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ ಪಾಂಡ್ಯ ಹೆಸರಿನ ಜೊತೆ ತಳುಕು ಹಾಕಿಕೊಂಡ ಸುಂದರಿ..!
/newsfirstlive-kannada/media/post_attachments/wp-content/uploads/2024/07/aparana8.jpg)
ಒಟ್ಟಾರೆ, ಅಪರ್ಣಾ ಕನ್ನಡದ ಪಾಲಿನ ಆಭರಣವಾಗಿದ್ರು. ಅವರ ಅಕಾಲಿಕ ನಿರ್ಗಮನ, ಭವಿಷ್ಯದ ಹಲವು ಕಾರ್ಯಕ್ರಮಗಳಲ್ಲಿ ಆ ಮಧುರ ಧ್ವನಿಯ ಅನುಪಸ್ಥಿತಿಗೆ ಕಾಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us