newsfirstkannada.com

₹100 ಕೋಟಿ ದೆಹಲಿ ಲಿಕ್ಕರ್‌ ಕೇಸ್‌ಗೆ ಹೊಸ ಟ್ವಿಸ್ಟ್.. ಆಪ್‌ ಸಂಸದನಿಗೆ ಸುಪ್ರೀಂಕೋರ್ಟ್‌ ರಿಲೀಫ್‌!

Share :

Published April 2, 2024 at 3:56pm

    ತಿಹಾರ್ ಜೈಲಿನಲ್ಲಿ ಒಂದು ರಾತ್ರಿ ಕಳೆದ ಸಿಎಂ ಅರವಿಂದ್‌ ಕೇಜ್ರಿವಾಲ್‌

    ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರಿಗೆ ಬಿಡುಗಡೆ ಭಾಗ್ಯ

    ಆಪ್ ಸಂಸದನ ಜಾಮೀನಿಗೆ ED ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ

ನವದೆಹಲಿ: ಬಹುಕೋಟಿ ದೆಹಲಿ ಲಿಕ್ಕರ್‌ ಲೈಸೆನ್ಸ್‌ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಹಗರಣದ ಆರೋಪದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ ನಿನ್ನೆ ಒಂದು ರಾತ್ರಿಯನ್ನ ಕಳೆದಿದ್ದಾರೆ. ಇದಾದ ಮರು ದಿನವೇ ಆಮ್ ಆದ್ಮಿ ಪಕ್ಷದ ಸಂಸದನಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.

ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಕಳೆದ ಅಕ್ಟೋಬರ್‌ನಲ್ಲಿ ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಬಂಧಿಸಲಾಗಿತ್ತು. ಸಂಜಯ್ ಸಿಂಗ್ ಅವರ ಬಂಧನದ ವೇಳೆ ಯಾವುದೇ ಲಂಚದ ಹಣ ಸಿಕ್ಕಿರಲಿಲ್ಲ. ಸಂಜಯ್ ಸಿಂಗ್ ಅವರ ಜಾಮೀನಿಗೆ ED ಅಧಿಕಾರಿಗಳು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ಸಂಜಯ್ ಸಿಂಗ್ ಅವರಿಗೆ ಜಾಮೀನು ಕರುಣಿಸಿದೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿದ್ದ ಆಪ್‌ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಅವರಿಗೆ 6 ತಿಂಗಳ ಬಳಿಕ ಬೇಲ್ ಸಿಕ್ಕಿದೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮರು ಆಯ್ಕೆಯಾಗಿದ್ದ ಸಂಜಯ್ ಸಿಂಗ್ ಅವರು ತಿಹಾರ್ ಜೈಲಿನಿಂದ ಸಂಸತ್‌ಗೆ ಬಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಇದನ್ನೂ ಓದಿ: ತಿಹಾರ್ ಜೈಲು ಪಾಲಾದ ಕೇಜ್ರಿವಾಲ್.. ದೆಹಲಿ ಸಿಎಂ ಆನ್ಸರ್ ಕೇಳಿ, ಕೇಳಿ ED ಅಧಿಕಾರಿಗಳು ಸುಸ್ತು!

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಜೈಲು ಸೇರಿದ ಮೇಲೆ ಮತ್ತಷ್ಟು ಆಪ್‌ ಶಾಸಕರು, ಸಚಿವರನ್ನ ತನಿಖಾ ಸಂಸ್ಥೆಗಳು ಟಾರ್ಗೆಟ್ ಮಾಡುತ್ತಿವೆ ಅನ್ನೋ ಆರೋಪ ಕೇಳಿ ಬಂದಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿರುವಾಗಲೇ ಆಪ್ ಸಂಸದ ಸಂಜಯ್ ಸಿಂಗ್ ಅವರು ಜೈಲಿನಿಂದ ಹೊರ ಬರಲು ರೆಡಿಯಾಗುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

₹100 ಕೋಟಿ ದೆಹಲಿ ಲಿಕ್ಕರ್‌ ಕೇಸ್‌ಗೆ ಹೊಸ ಟ್ವಿಸ್ಟ್.. ಆಪ್‌ ಸಂಸದನಿಗೆ ಸುಪ್ರೀಂಕೋರ್ಟ್‌ ರಿಲೀಫ್‌!

https://newsfirstlive.com/wp-content/uploads/2024/04/SanjaySingh.jpg

Load More