newsfirstkannada.com

ತಿಹಾರ್ ಜೈಲು ಪಾಲಾದ ಕೇಜ್ರಿವಾಲ್.. ದೆಹಲಿ ಸಿಎಂ ಆನ್ಸರ್ ಕೇಳಿ, ಕೇಳಿ ED ಅಧಿಕಾರಿಗಳು ಸುಸ್ತು!

Share :

Published April 1, 2024 at 3:01pm

    ಕೇಜ್ರಿವಾಲ್​ ಬಗ್ಗೆ ಕೋರ್ಟ್​ಗೆ ಅಧಿಕಾರಿಗಳು ಹೇಳಿರುವುದೇನು?

    ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಸಿಎಂ

    ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಸಿಎಂ ಕೊಡೋ ಆನ್ಸರ್ ಒಂದೇ

ನವದೆಹಲಿ: ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿಯ ಇಡಿ ವಿಶೇಷ ಕೋರ್ಟ್​ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸದ್ಯ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ. ಸಿಎಂ ಕೇಜ್ರಿವಾಲ್ ವಿಚಾರಣೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಏನನ್ನು ಉತ್ತರಿಸುತ್ತಿಲ್ಲ ಎಂದು ಇಡಿ ಅಧಿಕಾರಿಗಳು ಕೋರ್ಟ್​ ಮುಂದೆ ಹೇಳಿದ್ದಾರೆ.

ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಸಿಎಂ ಕೇಜ್ರಿವಾಲ್​ರನ್ನು ಅರೆಸ್ಟ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಏಪ್ರಿಲ್ 1ಕ್ಕೆ ಅವರ ಕಸ್ಟಡಿಯ ಅವಧಿ ಮುಗಿದ ಕಾರಣ ಮತ್ತೆ ಕೇಜ್ರಿವಾಲ್​ರನ್ನು ಕೋರ್ಟ್​ ಮುಂದೆ ಹಾಜರುಪಡಿಸಲಾಗಿತ್ತು. ಕೋರ್ಟ್​ ವಿಚಾರಣೆ ವೇಳೆ ಇನ್ನು 15 ದಿನ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ಇಡಿ ಮನವಿ ಮಾಡಿತ್ತು. ಇಡಿಯ ಮನವಿಯಂತೆ ಮತ್ತೆ ಏಪ್ರಿಲ್​ 15ರವರೆಗೆ ಸಿಎಂ ಕೇಜ್ರಿವಾಲ್​ರನ್ನ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ವೆಬ್​ಸೈಟ್ ಮೂಲಕ ಫೇಕ್​ IPL ಟಿಕೆಟ್​ ಮಾರಾಟ.. ಸೈಬರ್​ ಪೊಲೀಸರಿಂದ 7 ಆರೋಪಿಗಳು ಅರೆಸ್ಟ್

ಇನ್ನು ಇಡಿ ಅಧಿಕಾರಿಗಳು ವಿಚಾರಣೆ ವೇಳೆ ಪ್ರತಿ ಪ್ರಶ್ನೆಗೂ ‘ನನಗೆ ಏನು ಗೊತ್ತಿಲ್ಲ’ ಎಂದು ಸಿಎಂ ಜೇಜ್ರಿವಾಲ್​ ಉತ್ತರ ನೀಡುತ್ತಿದ್ದಾರೆ. ಇದರಿಂದ ಸಿಎಂ ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೋರ್ಟ್​ ಮುಂದೆ ಇಡಿ ಹೇಳಿದೆ.

ಇದೇ ವೇಳೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಒಳ್ಳೆಯ ಊಟ, ಔಷಧಗಳು, ಪುಸ್ತಕಗಳು ಮತ್ತು ಧಾರ್ಮಿಕ ಲಾಕೆಟ್ ಧರಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರು. ಕೋರ್ಟ್​ನಲ್ಲಿ ವಿಚಾರಣೆ ವೇಳೆ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್, ದೆಹಲಿ ಸಚಿವರಾದ ಸೌರಭ್ ಭಾರದ್ವಾಜ್, ಅತಿಶಿ ಮತ್ತು ಗೋಪಾಲ್ ರೈ ಇದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಿಹಾರ್ ಜೈಲು ಪಾಲಾದ ಕೇಜ್ರಿವಾಲ್.. ದೆಹಲಿ ಸಿಎಂ ಆನ್ಸರ್ ಕೇಳಿ, ಕೇಳಿ ED ಅಧಿಕಾರಿಗಳು ಸುಸ್ತು!

https://newsfirstlive.com/wp-content/uploads/2024/04/ARAVINDH_KEJRIWAL_CM.jpg

Load More