newsfirstkannada.com

ವೆಬ್​ಸೈಟ್ ಮೂಲಕ ಫೇಕ್​ IPL ಟಿಕೆಟ್​ ಮಾರಾಟ.. ಸೈಬರ್​ ಪೊಲೀಸರಿಂದ 7 ಆರೋಪಿಗಳು ಅರೆಸ್ಟ್

Share :

Published April 1, 2024 at 1:05pm

  ಆರೋಪಿಗಳು ಎಲ್ಲಿಂದ ವೆಬ್​ಸೈಟ್​ ಲಿಂಕ್ ಶೇರ್ ಮಾಡ್ತಿದ್ರು?

  ಈ ಸಂಬಂಧ ತನಿಖೆ ಕೈಗೊಂಡಿದ್ದ ಸೈಬರ್ ಪೊಲೀಸರಿಗೆ ಶಾಕ್

  ಗ್ಯಾಂಗ್​ನ 7 ಮಂದಿಯನ್ನು ಅರೆಸ್ಟ್ ಮಾಡಿರುವ ಪೊಲೀಸರು

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​ (IPL)ನ ನಕಲಿ ಟಿಕೆಟ್​ಗಳನ್ನು ಫೇಕ್​ ವೆಬ್​​ಸೈಟ್​ ಮೂಲಕ ಮಾರಾಟ ಮಾಡುತ್ತಿದ್ದ ಗುಜರಾತ್​ನ 7 ಆರೋಪಿಗಳನ್ನು ಮುಂಬೈ ಸೈಬರ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಈ ಸಂಬಂಧ ಗುಜರಾತ್ ಮೂಲದ ಖುಶಾಲ್ ರಮೇಶ್‌ಭಾಯ್ (24), ಭಾರ್ಗವ್ ಕಿಶೋರಭಾಯ್ (22), ಉತ್ತಮ್ ಮನ್ಸುಖ್​ ಭಾಯಿ (21), ಜಾಸ್ಮಿನ್ ಗಿರ್ಧರ್ಭಾಯಿ (22), ಹಿಮ್ಮತ್ ರಮೇಶಭಾಯ್ (35), ನಿಕುಂಜ್ ಭೂಪತಭಾಯ್ (27) ಮತ್ತು ಅರವಿಂದಭಾಯ್ (25) ಎನ್ನುವ ಆರೋಪಿಗಳನ್ನ ಬಂಧಿಸಿದ್ದಾರೆ. ಬಿಗ್ ಟ್ರೀ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಸಿಒಒ ಅನಿಲ್ ಮಖಿಜಾ ಎನ್ನುವರು ನಕಲಿ ಐಪಿಎಲ್ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಮುಂಬೈನ ದಕ್ಷಿಣ ವಿಭಾಗದ ಸೈಬರ್ ವಿಭಾಗಕ್ಕೆ ದೂರು ನೀಡಿದ್ದರು.

ಇದನ್ನೂ ಓದಿ: RCBಯಲ್ಲಿ ವಿರಾಟ್​ ಒನ್​ ಮ್ಯಾನ್ ಶೋ.. ಉಳಿದ ಪ್ಲೇಯರ್ಸ್​ ಆಟಕ್ಕುಂಟು, ಲೆಕ್ಕಕ್ಕಿಲ್ಲ; ಕಾರಣವೇನು?

ಈ ಸಂಬಂಧ ತನಿಖೆ ಕೈಗೊಂಡ ಸೈಬರ್ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಗುಜರಾತ್‌ನ ಸೂರತ್‌ನಿಂದ ವೆಬ್‌ಪೇಜ್​ ಕಾರ್ಯನಿರ್ವಹಿಸುತ್ತಿದೆ ಎಂದು ಗೊತ್ತಾಗಿದೆ. ಇದಕ್ಕಾಗಿ ಸೂರತ್‌ಗೆ ತೆರಳಿದ ತಂಡ ಆರೋಪಿ ಖುಶಾಲ್​ನನ್ನು ಮೊದಲು ಬಂಧಿಸಿದ್ದಾರೆ. ಬಳಿಕ ಉಳಿದ 6 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಗ್ಯಾಂಗ್​ನವರೇ ಸ್ವತಹ ವೆಬ್​ಸೈಟ್​ ರೂಪಿಸಿ ಆನ್​ಲೈನ್​ ಮೂಲಕ ಟಿಕೆಟ್​ಗಳನ್ನ ಸೇಲ್ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಕೋರ್ಟ್​ ಏಪ್ರಿಲ್ 3 ರವರೆಗೆ ಆರೋಪಿಗಳನ್ನ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೆಬ್​ಸೈಟ್ ಮೂಲಕ ಫೇಕ್​ IPL ಟಿಕೆಟ್​ ಮಾರಾಟ.. ಸೈಬರ್​ ಪೊಲೀಸರಿಂದ 7 ಆರೋಪಿಗಳು ಅರೆಸ್ಟ್

https://newsfirstlive.com/wp-content/uploads/2024/04/FAKE_IPL_TICKETS.jpg

Load More