ಮಾರುಕಟ್ಟೆಗೆ ಬರಲಿದೆ ಆ್ಯಪಲ್ನ ಬಹುನಿರೀಕ್ಷಿತ ಐಫೋನ್ 16
ಐಫೋನ್ 16 ಜೊತೆಗೆ ಬೇರೆ ಯಾವೆಲ್ಲಾ ಮಾಡೆಲ್ಗಳು ಲಾಂಚ್ ಆಗಲಿವೆ?
ಐಫೋನ್ 16ನಲ್ಲಿರುವ ವಿಶೇಷತೆಗಳು ಏನು? ಎಷ್ಟು ಬಣ್ಣಗಳಲ್ಲಿ ಬರಲಿದೆ
ಐಫೋನ್ ಅಂದ್ರೆನೆ ಬಿಳಿಯಾನೆ ಇದ್ದಂತೆ . ಅದು ದುಡ್ಡಿದ್ದವರ ಸರಕು. ಆದರೂ ಐಫೋನ್ ಖರೀದಿಯಲ್ಲಿ ಜನರು ಮಾತ್ರ ಹಿಂದೆ ಬಿದ್ದಿಲ್ಲ. ಹೊಸ ಹೊಸ ಮಾಡೆಲ್ಗಳನ್ನ ಅದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಅನ್ನೊ ಸುದ್ದಿಗಳೆಲ್ಲಾ ಐಫೋನ್ ಪ್ರಿಯರ ಕುತೂಹಲವನ್ನು ಹೆಚ್ಚ ಮಾಡುತ್ತದೆ. ಈ ಬಾರಿ ಯಾವ ರೀತಿಯ ಫೀಚರ್ಸ್ ಐಫೋನ್ ಬರಲಿದೆ. ದರ ಏನು ಎಂಬ ಬಗ್ಗೆ ವಿಪರೀತ ಕುತೂಹಲದಿಂದ ಕಾಯುತ್ತಿರುತ್ತಾರೆ. ಈಗ ಐಫೋನ್ ಪ್ರಿಯರಿಗೆ ಆ್ಯಪಲ್ ಕಂಪನಿ ಗುಡ್ನ್ಯೂಸ್ ಒಂದು ನೀಡಿದೆ.
ಇದನ್ನೂ ಓದಿ: Jio, Airtel ಸೋಲಿಸಲು ಹಠತೊಟ್ಟು ನಿಂತ BSNL; ದಿಢೀರ್ ಟಿವಿ ಜಗತ್ತಿಗೆ ಕಾಲಿಟ್ಟ ಟೆಲಿಕಾಂ ಕಂಪನಿ
ಇಂದು ಅಂದ್ರೆ ಸೆಪ್ಟಂಬರ್ 9ನೇ ತಾರೀಖಿಗೆ ಐಫೋನ್ 16 ಲಾಂಚ್ ಆಗಲಿದೆ ಅದರ ಜೊತೆಗೆ ಆ್ಯಪಲ್ ವಾಚ್ ಸಿರೀಸ್ 10 ಕೂಡ ಲಾಂಚ್ ಆಗಲಿದೆ. ಈ ಬಾರಿಯ ಆ್ಯಪಲ್ ಲಾಂಚ್ ಮಾಡುತ್ತಿರುವ ಐಫೋನ್ ಹಲವು ವಿಶೇಷತೆಗಳನ್ನು ಹೊಂದಿದೆ. ಮುಂಬರುವ ತನ್ನ ಸಾಫ್ಟ್ವೇರ್ಗಳ ರಿಲೀಸ್ ದಿನಾಂಕವನ್ನು ರಿವೀಲ್ ಮಾಡುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಈ ಸಾಫ್ಟ್ವೇರ್ಗಳು IOS 18, IPadOS 18, tvOS 18, visionOS 2 ಹಾಗೂ macOS Sequoiaಗಳನ್ನು ಒಳಗೊಂಡಿದೆ.
ಇನ್ನು ಆ್ಯಪಲ್ ತನ್ನ ಈ ವಿಶೇಷ ಕಾರ್ಯಕ್ರಮವನ್ನು ಇಂದು ಕ್ಯಾಲಿಫೋರ್ನಿಯಾದ ಆ್ಯಪಲ್ ಕ್ಯುಪರ್ಟಿನೊ ಪಾರ್ಕ್ನಲ್ಲಿ ಆಯೋಜಿಸಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10 ಗಂಟೆಗೆ ಐಫೋನ್ 16 ಲಾಂಚ್ ಆಗಲಿದೆ. ಐಫೋನ್ 16 ಜೊತೆ ಜೊತೆಗೆ ಐಫೋನ್ 16 ಪ್ಲಸ್, ಐಫೋನ್ 16 ಪ್ರೋ ಹಾಗೂ ಐಫೋನ್ 16 ಪ್ರೊಮ್ಯಾಕ್ಸ್ ಕೂಡ ಇದೇ ವೇಳೆ ಲಾಂಚ್ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ: BSNL: 249 ರೂಪಾಯಿಗೆ 90GB ಡೇಟಾ! 45 ದಿನಗಳ ವ್ಯಾಲಿಡಿಟಿ.. ಟ್ರೆಂಡಿಂಗ್ನಲ್ಲಿದೆ ಈ ಪ್ರಿಪೇಯ್ಡ್ ಪ್ಲಾನ್
ಸದ್ಯ ಆ್ಯಪಲ್ ತನ್ನ ಹೊಸ ಐಫೋನ್ನ ವಿಶೇಷತೆಗಳನ್ನು ಇನ್ನೂ ನಿಗೂಢವಾಗಿಯೇ ಇಟ್ಟಿದೆ ಆದ್ರೆ ಈ ಹೊಸ ಐಫೋನ್ ಬಗ್ಗೆ ಹಲವು ರೂಮರ್ಸ್ಗಳು ಈಗಾಗಲೇ ಹಬ್ಬುತ್ತಿವೆ. ಐಫೋನ್ 16 ಹಾಗೂ ಐಫೋನ್ 16ಪ್ರೊಮ್ಯಾಕ್ಸ್ನ್ನು ಆ್ಯಪಲ್ ಭಾರತದಲ್ಲಿಯೇ ಉತ್ಪಾದನೆ ಮಾಡುವ ಉದ್ದೇಶ ಹೊಂದಿದೆ. ಸದ್ಯ ಹೊಸ ಐಫೋನ್ 16ನ ಬೆಲೆ ಎಷ್ಟು ಎಂದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಆದ್ರೂ, ಸ್ಟಾರ್ಟಿಂಗ್ ಮಾಡೆಲ್ 80 ರಿಂದ 85 ಸಾವಿರ ಇರಬಹುದು ಎಂದು ತಿಳಿದು ಬಂದಿದೆ.
ಹೊಸ ಐಫೋನ್ನ ವಿಶೇಷತೆಗಳು ಏನು..?
ದೊಡ್ಡ ಡಿಸ್ಪ್ಲೇ: ಐಫೋನ್ 16 ಪ್ರೊ ಹಾಗೂ ಐಫೋನ್ 16 ಪ್ರೊಮ್ಯಾಕ್ಸ್ನ ಡಿಸ್ಪ್ಲೇ ತಲಾ 6.3 ಇಂಚು ಹಾಗೂ 6.9 ಇಂಚು ಹೊಂದಿರಬಹುದಾದದ ಸಾಧ್ಯತೆ ಇದೆ.
ಥಿನ್ನರ್ ಬೆಜೆಲ್ಸ್: ಕೆಲವು ಮೂಲಗಳ ಪ್ರಕಾರ ಐಫೋನ್ 16 ಮಾಡೆಲ್ಗಳು ಬಿಆರ್ಎಸ್ ಅಂದ್ರೆ ಬಾರ್ಡರ್ ರಿಡಕ್ಷನ್ ಸ್ಟ್ರಕ್ಚರ್ ತಂತ್ರಜ್ಞಾನದ ಮೂಲಕ ತಯಾರಿಸಲಾಗಿದೆ. ಇದರ ಬೆಜೆಲ್ಸ್ ಈ ಹಿಂದಿನ ಮಾಡೆಲ್ಗಳಿಗಿಂತ ತೆಳವಾಗಿ ಇರಲಿದೆ ಎಂದು ಹೇಳಲಾಗುತ್ತಿದೆ.
ಪ್ರೊಸೆಸರ್: A18 ಚಿಪ್ಸೆಟ್ವುಳ್ಳ ಐಫೋನ್ 16 ಮಾರುಕಟ್ಟೆಗೆ ಬರಲಿದೆ ಎಂದು ಊಹಿಸಲಾಗಿದೆ.
ಹೊಸ ಬಣ್ಣಗಳಲ್ಲಿ ಲಭ್ಯ: ಈ ಬಾರಿ ಐಫೋನ್ 16 ವಿಭಿನ್ನ ಕಲರ್ಗಳಲ್ಲಿ ಬರಲಿದೆ ಎಂಬ ನಿರೀಕ್ಷೆಯಿಟ್ಟುಕೊಳ್ಳಲಾಗಿದೆ. ಹೊಸ ಬಣ್ಣಗಳಲ್ಲಿ ಅಂದ್ರೆ ನೀಲಿ (BLUE), ಹಸಿರು (GREEN) ಬಿಳಿ (WHITE) ಹಾಗೂ ಕಪ್ಪು(BLACK) ಬಣ್ಣಗಳಲ್ಲಿ ಬರುವ ನಿರೀಕ್ಷೆಯಿದೆ. ಅದರ ಜೊತೆಗೆ ಹೊಸ ಬ್ರೌನಿಷ್ ಬಣ್ಣದ ಐಫೋನ್ ಈ ಬಾರಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆಯೂ ಇದೆ.ಅದರ ಜೊತೆಗೆ ಬಂಗಾರದ ಬಣ್ಣದ ಐಫೋನ್ 16 ಮಾರುಕಟ್ಟೆಯಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.
ಕ್ಯಾಮರಾ: ಒಂದು ಮೂಲಗಳ ಪ್ರಕಾರ ಈ ಬಾರಿ ಮಾರುಕಟ್ಟೆಗೆ ಬರಲಿರುವ ಐಫೋನ್ 48 ಮೆಗಾಫಿಕ್ಸಲ್ ಅಲ್ಟ್ರಾ ವೈಡ್ ಆ್ಯಂಗಲ್ ಕ್ಯಾಮರಾ ಹೊಂದಿರಲಿದೆ ಎಂಬ ಊಹೆಗಳಿವೆ, ಐಫೋನ್ 15ಪ್ರೋ ಮ್ಯಾಕ್ಸ್ರೀತಿಯೇ ಟೆಟ್ರಾಪಿಸಂ ಟೆಲೆಫೋಟೋ ಲೆನ್ಸ್ ಹೊಂದಿರುವ ಕ್ಯಾಮರಾದೊಂದಿಗೆ ಐಫೋನ್ 16 ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ
ಬ್ಯಾಟರಿ: 4676mAh ಸಾಮರ್ಥ್ಯದ ಬ್ಯಾಟರಿ ಐಫೋನ್ 16ನಲ್ಲಿ ಇರಲಿದೆ.
ಸ್ಟೋರೆಜ್: ಐಫೋನ್ 16 ಬೇಸ್ ಸ್ಟೋರೆಜ್ 256 ಗೀಗಾ ಬೈಟ್ ಹೊಂದಿರಲಿದೆ ಎಂದು ಊಹಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ