/newsfirstlive-kannada/media/post_attachments/wp-content/uploads/2024/04/Whats-app.webp)
ಜನಪ್ರಿಯ ಕಂಪನಿ ಆ್ಯಪಲ್​ ಚೀನಾದಲ್ಲಿ ತನ್ನ ಆ್ಯಪ್​ ಸ್ಟೋರ್​ನಿಂದ ವಾಟ್ಸ್​ಆ್ಯಪ್​, ಥ್ರೆಡ್ಸ್​​ ಅನ್ನು ತೆಗೆದು ಹಾಕಿದೆ. ಚೀನಾ ಸರ್ಕಾರದ ಕೋರಿಗೆ ಮೇರೆಗೆ ಮೆಟಾ ಮಾಲಿಕತ್ವದ ಅಪ್ಲಿಕೇಶನ್​ಗೆ ಗುಡ್​ ಬೈ ಹೇಳಿದೆ.
ಚೀನಾದ ಸೈಬರ್​ಸ್ಪೇಸ್​ ಅಡ್ಮಿನಿಸ್ಟ್ರೇಷನ್​ ಕಂಪನಿ ಪ್ರಕಾರ, ಆ್ಯಪ್​ ಸ್ಟೋರ್​​ನಿಂದ ಅಪ್ಲಿಕೇಶನ್​​ ಅನ್ನು ತೆಗೆದುಹಾಕಲು ಆದೇಶಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದಾಗಿ ಈ ಆದೇಶವನ್ನು ಚೀನಾ ಸರ್ಕಾರ ಜಾರಿಗೊಳಿಸಿದೆ.
ಮೆಟಾ ಒಡೆತನದ ಫೇಸ್​ಬುಕ್​, ಇನ್​ಸ್ಟಾಗ್ರಾಂ ಮತ್ತು ಮೆಸೆಂಜರ್​​ ಚೀನಾದ ಆ್ಯಪ್​ ಸ್ಟೋರ್​ನಲ್ಲಿ ಲಭ್ಯವಿದೆ. ಆದರೆ ವಾಟ್ಸ್​ಆ್ಯಪ್​ ಮತ್ತು ಥ್ರೆಡ್ಸ್​ ಅನ್ನು ಡಿಲೀಟ್​ ಮಾಡಿದೆ.
ಇನ್ನು ಆ್ಯಪಲ್​ ಐಫೋನ್​ 2024ರ ಮಾರಾಟದಲ್ಲಿ ಕೊಂಚ ಕುಸಿತ ಕಂಡಿದೆ. ಐಫೋನ್​ಗೆ ಸೆಡ್ಡು ಹೊಡೆದು ಸ್ಯಾಮ್​ಸಂಗ್​ ಫೋನ್​ ಮೊದಲ ಸ್ಥಾಣದಲ್ಲಿ ಗುರುತಿಸಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us