iPhone​ 15 ಪ್ರೊ ಮ್ಯಾಕ್ಸ್​​ ಸ್ಥಗಿತಗೊಳ್ಳುತ್ತಿದೆಯೇ? ಆ್ಯಪಲ್​ ಪ್ರಾಡೆಕ್ಟ್​ ಕುರಿತಂತೆ ಹರಿದಾಡುತ್ತಿದೆ ಶಾಕಿಂಗ್​ ಸುದ್ದಿ

author-image
AS Harshith
Updated On
Flipkart: ಐಫೋನ್​ 15 ಮೇಲೆ ಭರ್ಜರಿ ಆಫರ್​.. ಇದಕ್ಕಿಂತ ಕಡಿಮೆ ಬೆಲೆಗೆ ಸಿಗೋದೆ ಡೌಟ್​!
Advertisment
  • ಐಫೋನ್​ 16 ಸರಣಿ ಬಿಡುಗಡೆಗೆ 7 ದಿನ ಬಾಕಿ
  • ಯಾವೆಲ್ಲಾ ಆ್ಯಪಲ್​ ಪ್ರಾಡೆಕ್ಟ್​ ಸ್ಥಗಿತಗೊಳ್ಳುತ್ತಿದೆ?
  • ಆ್ಯಪಲ್​ ಪ್ರಿಯರಿಗೆ ಅಚ್ಚರಿ ಮೂಡಿಸಿದೆ ಈ ಸಂಗತಿ

ಕುಪರ್ಟಿನೋ ಮೂಲದ ಆ್ಯಪಲ್ ಕಂಪನಿ​ ಉತ್ಪಾದಿಸುವ ಉತ್ಪನ್ನಗಳ ಕುರಿತು ಶಾಕಿಂಗ್​ ಸುದ್ದಿಯೊಂದು ಹರಿದಾಡುತ್ತಿದೆ. ಕೆಲವೊಂದು ಪ್ರಾಡೆಕ್ಟ್​ಗಳನ್ನು ಆ್ಯಪಲ್​ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಜನಪ್ರಿಯ ಆ್ಯಪಲ್​ ಕಂಪನಿ ಐಫೋನ್​ 16 ಸರಣಿಯನ್ನು ಬಿಡುಗಡೆಗೊಳಿಸುವ ತವಕದಲ್ಲಿದೆ. ಇದೇ ತಿಂಗಳು 10ನೇ ತಾರೀಖು ಐಫೋನ್​ 16 ಸರಣಿ ಜಾಗತಿಕವಾಗಿ ಬಿಡುಗಡೆಗೊಳ್ಳಲಿದೆ. ಇದರ ಜೊತೆಗೆ ಹೊಸ ಏರ್​ಪಾಡ್​ ಮತ್ತು ಆ್ಯಪಲ್​ ವಾಚ್​ ಪರಿಚಯಿಸುವ ನಿರೀಕ್ಷೆಯೂ ಇದೆ. ಇಂತಹ ಸುದ್ದಿಯ ಜೊತೆ ಜೊತೆಗೆ ಐಫೋನ್​ 15 ಪ್ರೊ ಮ್ಯಾಕ್ಸ್​​  ಸೇರಿ ಕೆಲವು ಉತ್ಪನ್ನಗಳು ಸ್ಥಗಿತಗೊಳ್ಳುವ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: ದಾರಿ ಬಿಡಿ ದಾರಿ ಬಿಡಿ.. ಇಂದು ರಸ್ತೆಗಿಳಿಯಲಿದೆ ಹೊಸ ಜಾವಾ 42.. ಆಕರ್ಷಕ ಲುಕ್​ ಜೊತೆಗೆ ವೈಶಿಷ್ಟ್ಯ ಹೇಗಿದೆ ಗೊತ್ತಾ?

ಸ್ಥಗಿತಗೊಳ್ಳಲಿರುವ ಪ್ರಾಡೆಕ್ಟ್​ಗಳ ಹೆಸರುಗಳು 

ಐಫೋನ್ 15 ಪ್ರೊ
ಐಫೋನ್ 15 ಪ್ರೊ ಮ್ಯಾಕ್ಸ್
ಐಫೋನ್ 14 ಪ್ಲಸ್
ಐಫೋನ್ 13
ಏರ್‌ಪಾಡ್‌ಗಳು 2
ಐಫೋನ್ 13 ಮಿನಿ
ಏರ್‌ಪಾಡ್ಸ್ ಪ್ರೊ 1St ಜನರೇಶನ್​

ಇದನ್ನೂ ಓದಿ: ಸುನೀತಾರನ್ನು ಕರೆತರಲು ನಭಕ್ಕೆ ದೇವದೂತರು.. ತಿಂಗಳ​ ಅಂತ್ಯದಲ್ಲಿ ಸಿಹಿ ಸುದ್ದಿ ಹಂಚಲಿದೆ NASA

ಸದ್ಯ ಇವಿಷ್ಟು ಪ್ರಾಡೆಕ್ಟ್​​ಗಳನ್ನ ಆ್ಯಪಲ್​ ಸ್ಥಗಿತಗೊಳಿಸಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಐಫೋನ್​​ 15 ಮತ್ತು 15 ಪ್ಲಸ್​ ಬಗ್ಗೆ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲ. ಆದರೆ ಆ್ಯಪಲ್​ ಯಾವ ಕಾರಣಕ್ಕಾಗಿ ಸ್ಥಗಿತ ಮಾಡುತ್ತಿದೆ ಎಂಬ ಬಗ್ಗೆಯೂ ಉಲ್ಲೇಖವಿಲ್ಲ. ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಇಂಟೆಲಿಜೆನ್ಸ್​ ವೈಶಿಷ್ಟ್ಯಗಳ ವಿಚಾರಕ್ಕೆ ಈ ನಿರ್ಧಾರ ಕೈಗೊಂಡಿದೆಯೇ? ಅಥವಾ ಮಾರುಕಟ್ಟೆ ಅಭಿವೃದ್ಧಿಯಾಗಿ ಹೀಗೆ ಮಾಡುತ್ತಿದೆಯೇ ಎಂಬ ಅನುಮಾನ ಮೂಡಿದೆ. ಆದರೆ ಇವೆಲ್ಲದಕ್ಕೆ ಕಂಪನಿಯೇ ಉತ್ತರ ನೀಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment