ಯುವಕರ ನಿದ್ದೆ ಕದಿಯಲು ಬಂದ ಜಾವಾ 42
ಆಕರ್ಷಕ ಲುಕ್, ಅದ್ಭುತ ಫೀಚರ್, ಬೆಲೆ ಎಷ್ಟು?
ವಿಭಿನ್ನವಾಗಿ ಸೌಂಡ್ ಮಾಡಲು ಬರುತ್ತಿದೆ ಜಾವಾ 42
ಮೈಸೂರು ಮೂಲದ ಜನಪ್ರಿಯ ಐಡಿಯಲ್ ಜಾವಾ ಕಂಪನಿ ಇದೀಗ ಹೊಸ ಜಾವಾ 42 ಬೈಕನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡಲು ಸಜ್ಜು ಮಾಡಿದೆ. ಆದರಿಂದು ಆ ದಿನ ಕೂಡಿ ಬಂದಿದೆ, ನೂತನ ಬೈಕ್ ಇಂದು ರಸ್ತೆಗಿಳಿಯಲಿದೆ. ಹೊಸ ಜವಾ 42 ಮೋಟಾರ್ ಸೈಕಲ್ನ ಬೆಲೆ ಎಷ್ಟಿದೆ? ವೈಶಿಷ್ಟ್ಯ ಹೇಗಿದೆ ತಿಳಿಯೋಣ.
ಜಾವಾ 42
ನೂತನ ಬೈಕ್ ಆಕರ್ಷಕ ಲುಕ್ನಿಂದ ಕೂಡಿದೆ. ಹಿಂಭಾಗದ ವಿನ್ಯಾಸವು ಸೈಡ್ ಅಥವಾ ಸ್ಟಿಟ್ ಗ್ರ್ಯಾಬ್ ರೈಲ್ಗಳನ್ನು ಅಳವಡಿಸಿಕೊಂಡಿದೆ. ಡಬಲ್ ಎಕ್ಸಾಸ್ಟ್ ಸೇರಿ ವಿಭಿನ್ನ ನೋಟವನ್ನು ಈ ಬೈಕ್ ಹೊಂದಿದೆ. ಜಾವಾ 42 ಹೊಸದಾಗಿ ವಿನ್ಯಾಸಗೊಳಿಸಿದ ಸೀಟ್ ಅನ್ನು ಪರಿಚಯಿಸಿದೆ.
ವೈಶಿಷ್ಟ್ಯಗಳು
ಜಾವಾ 42 ಬೈಕ್ ಟ್ವಿನ್ ಫ್ರಂಟ್ ಪೋರ್ಕ್ ಹೊಂದಿದೆ. ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಜೊತೆಗೆ ಸ್ಪೋಕ್, ಅಲಾಯ್ವೀಲ್ ಅಳವಡಿಸಿಕೊಂಡಿದೆ ಎನ್ನಲಾಗುತ್ತಿದೆ. ಇದರಲ್ಲಿ ಡಿಜಿಟಲ್ ಇನ್ಟ್ರುಮೆಂಟ್ ಕನ್ಸೋಲ್ ಇದ್ದು, ಎಲ್ಇಡಿ ಇಲ್ಯುಮಿನೇಷನ್ ಮತ್ತು ಡ್ಯುಯೆಲ್ ಚಾನೆಲ್ ಎಬಿಎಸ್ ಹೊಂದಿದೆ. 6 ಸ್ಪೀಡ್ ಗೇರ್ ಬಾಕ್ಸ್, ಜೊತೆಗೆ ಸ್ಪೀಪರ್ ಕ್ಲಚ್ ಹೊತೆಗೆ ಬರಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಹಳೆಯ ಚಾಟ್ ಸುಲಭವಾಗಿ ಹುಡುಕಬಹುದು.. ವಾಟ್ಸ್ಆ್ಯಪ್ ಪರಿಚಯಿಸಲು ಸಜ್ಜಾಗಿದೆ ಚಾಟ್ ಫಿಲ್ಟರ್ ವೈಶಿಷ್ಟ್ಯ
ಇಂದು ಮಾರುಕಟ್ಟೆಗೆ ಬರುತ್ತಿರೋ ಜಾವಾ 42 ಬೈಕ್ 294.72ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಪವರ್ಟ್ರೇನ್ ಎಂಜಿನ್ ಬದಲಿಸಲೆಂದೇ 334 ಸಿಸಿಯೊಂದಿಗೆ ಬರಲಿದೆ ಎನ್ನಲಾಗುತ್ತಿದೆ. ಇದು 22.26 ಬಿಹೆಚ್ಪಿ ಮತ್ತು 28.1ಎನ್ಎಮ್ ಅನ್ನು ಉತ್ಪಾದಿಸುತ್ತದೆ.
ಇದನ್ನೂ ಓದಿ: ಸುನೀತಾ ವಿಲಿಯಮ್ಸ್ ಇರೋ ನೌಕೆಯಲ್ಲಿ ಕೇಳಿ ಬರ್ತಿದೆ ನಿಗೂಢ ಶಬ್ಧ! ಭಯ ಹುಟ್ಟಿಸುತ್ತಿದೆ ಆ ಕರ್ಕಶ ಸೌಂಡ್
ಗ್ರಾಹಕರಿಗಾಗಿ ಆರು ಬಣ್ಣದಲ್ಲಿ ಬರುವ ನಿರೀಕ್ಷೆಯಿದೆ. ಸದ್ಯ ನೂತನ ಬೈಕ್ ಬೆಲೆ ಹಾಗೂ ಕೆಲವು ಫೀಚರ್ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ ನೂತನ ಬೈಕ್ನ ಎಕ್ಸ್ ಶೋ ರೂಂ ಬೆಲೆ 2 ಲಕ್ಷ ರೂಪಾಯಿಯಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ