newsfirstkannada.com

ಚುನಾವಣಾ ಜಾಗೃತಿಗಾಗಿ ಜಿಲ್ಲಾ ಐಕಾನ್ ನೇಮಕ; ವಿಜಯಪುರ ಕ್ಷೇತ್ರಕ್ಕೆ ಗಾಯಕಿ ಸಾಕ್ಷಿ ಹಿರೇಮಠ ಆಯ್ಕೆ

Share :

Published March 23, 2024 at 6:58pm

    ಸರಿಗಮ -20ರ ಸ್ಪರ್ಧಿಯಾಗಿದ್ದ ವಿಜಯಪುರದ ಪ್ರತಿಭೆ

    ಬಾಲ ಗಾಯಕಿಯಾಗಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಕ್ಷಿ ಹಿರೇಮಠ

    ರಾಜ್ಯ ಚುನಾವಣಾ ಆಯೋಗದಿಂದ ಪ್ರಚಾರಕ್ಕಾಗಿ ಜಿಲ್ಲಾ ಐಕಾನ್ ನೇಮಕ

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯ ಚುನಾವಣಾ ಆಯೋಗದಿಂದ ಪ್ರಚಾರಕ್ಕಾಗಿ ಜಿಲ್ಲಾ ಐಕಾನ್ ನೇಮಕ ಮಾಡಿದೆ. ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಗಾಯಕಿ ಸಾಕ್ಷಿ ಹಿರೇಮಠ ಆಯ್ಕೆಯಾಗಿದ್ದಾರೆ.

ಯುವ ಗಾಯಕಿ ಸಾಕ್ಷಿ ಹಿರೇಮಠ ಝೀ ಕನ್ನಡ ವಾಹಿನಿಯ ಸರಿಗಮ -20ರ ಸ್ಪರ್ಧಿಯಾಗಿದ್ದು, ಹಲವು ರಿಯಾಲಿಟಿ ಶೋ, ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ. ಇನ್ನು ಈ ಸುದ್ದಿ ತಿಳಿದು ವಿಜಯಪುರದ ಸಾಕ್ಷಿ ಹಿರೇಮಠ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.

ಸಾಕ್ಷಿ ಹಿರೇಮಠ ಬಾಲ ಗಾಯಕಿಯಾಗಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಹಲವು ಪ್ರಶಸ್ತಿಗಳು, ಬಹುಮಾನಗಳು ಬಂದಿವೆ.

ಗಾಯಕಿ ಸಾಕ್ಷಿ ಹಿರೇಮಠ

ನ್ಯೂಸ್ ಫಸ್ಟ್ ಜೊತೆ ಸಂತಸ ಹಂಚಿಕೊಂಡ ಗಾಯಕಿ ಸಾಕ್ಷಿ ಹಿರೇಮಠ

ಜಿಲ್ಲಾ ಐಕಾನ್ ಆಗಿ ಆಯ್ಕೆರೋದಕ್ಕೆ ಗಾಯಕಿ ಸಾಕ್ಷಿ ಹಿರೇಮಠ ನ್ಯೂಸ್ ಫಸ್ಟ್ ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.ನಮ್ಮ ಜಿಲ್ಲೆಗೆ ಆಯ್ಕೆಯಾಗಿದ್ದು ಬಹಳ ಖುಷಿಯಾಗುತ್ತಿದೆ. ಮತದಾನ ಎಲ್ಲರ ಹಕ್ಕು. ಸ್ವಲ್ಪ ಮಂದಿ ಮತದಾನವನ್ನ ಇಗ್ನೋರ್​ ಮಾಡ್ತಾರೆ. ಅದರಿಂದ ಒಂದೊಂದು ಓಟ್​ ಲಾಸ್​ ಆಗುತ್ತದೆ. ಅದರಿಂದ ತುಂಬಾ ಎಫೆಕ್ಟ್​ ಆಗುತ್ತದೆ. ಹಾಗಂತ ಮತದಾನ ಮಾಡದೆ ಇರಬಾರದು. ಅದು ಎಲ್ಲರ ಹಕ್ಕು ಆಗಿದೆ. ಹಕ್ಕನ್ನ ಅವರು ಚಲಾಯಿಸಬೇಕು. ಜಾತಿ, ಧರ್ಮ ಇದಾವುದನ್ನು ಪಕ್ಷಪಾತ ಮಾಡದೆ ತಮಗೆ ಏನು ಸರಿ ಅನಿಸ್ತದೆ ಅವರಿಗೆ ಓಟ್​ ಹಾಕಬೇಕು. ಈಗಿನ ಯಂಗ್​ಸ್ಟರ್​ಗೂ ಕೂಡ ಜಾಗೃತಿ ಮೂಡಿಸಬೇಕು. ಕಾಲೇಜಿಗೆ ಹೋಗಿ ಅವರ್ನೆಸ್​ ಮಾಡಬೇಕು.

ಗಾಯಕಿ ಸಾಕ್ಷಿ ಹಿರೇಮಠ

ಇದನ್ನೂ ಓದಿ: ಬರೀ 4 ರಿಂದ 5 ನಿಮಿಷಗಳ ಫೋಟೋಶೂಟ್​! ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿದೆ ಈ ಮಗು!

ಚುನಾವಣೆ ಆಯೋಗ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಗೆ ಧನ್ಯವಾದ. ಯುವ ಮತದಾರರಲ್ಲಿ ಸಂಗೀತದ ಮೂಲಕ ಜಾಗೃತಿ ಮೂಡಿಸುವ ಆಲೋಚನೆ ಮಾಡಿದ್ದಾರೆ. ಕಾಲೇಜಿಗಳಲ್ಲಿನ ವಿದ್ಯಾರ್ಥಿಗಳು ಸೇರಿದಂತೆ ಯುವ ಮತದಾರರಿಗೆ ಮತ ಜಾಗೃತಿ ಮಾಡ್ತೇವೆ. ನಾನು ಕಳೆದ ಚುನಾವಣೆಯಲ್ಲಿ ಮತದಾನದ ಹಬ್ಬ ಗೀತೆ ಹಾಡಿ ಬಿಡುಗಡೆ ಮಾಡಿದ್ವಿ. ನಾನು ಕಳೆದ ವಿಧಾನಸಭಾ ಚುನಾವಣೆಗೆ ಪ್ರಥಮ ಬಾರಿಗೆ ಮತ ಚಲಾಯಿಸಿದ್ದೆ. ಈಗ ಲೋಕಸಭಾ ಚುನಾವಣೆಗೆ ಫಸ್ಟ್ ವೋಟ್ ಮಾಡುವೆ. ಯಾರು ಮತದಾನದಿಂದ ವಂಚಿತರಾಗಬಾರದು, ನಮ್ಮ ಹಕ್ಕು ಚಲಾಯಿಸಬೇಕು ಎಂದಿದ್ದಾರೆ.

ರಾಜ್ಯದಲ್ಲಿ ಸದ್ಯ ಎಂಟು ಜನ ವಿವಿಧ ಕ್ಷೇತ್ರದ ಸಾಧಕರ ನೇಮಿಸಿ ಆದೇಶ ಹೊರಡಿಸಲಾಗಿದೆ. ಬೆಂಗಳೂರು ಬಿಬಿಎಂಪಿಗೆ ನಟ ರಮೇಶ ಅರವಿಂದ್, ಅನೂಪ್ ಶ್ರೀಧರ್ ಆಯ್ಕೆಯಾಗಿದ್ದಾರೆ. ಮೈಸೂರಿಗೆ ತನಿಷ್ಕಾ ಮೂರ್ತಿ, ಬಿ ಎಸ್ ಕೃಪಾಕರ, ಕೆ ಸೇನಾನಿ ಆಯ್ಕೆಯಾಗಿದ್ದಾರೆ. ವಿಜಯನಗರಕ್ಕೆ ಲಕ್ಷ್ಮೀದೇವಿ ಎನ್, ಎಚ್ ಕೆ ಕರಮಂಚಪ್ಪ ಆಯ್ಕೆಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚುನಾವಣಾ ಜಾಗೃತಿಗಾಗಿ ಜಿಲ್ಲಾ ಐಕಾನ್ ನೇಮಕ; ವಿಜಯಪುರ ಕ್ಷೇತ್ರಕ್ಕೆ ಗಾಯಕಿ ಸಾಕ್ಷಿ ಹಿರೇಮಠ ಆಯ್ಕೆ

https://newsfirstlive.com/wp-content/uploads/2024/03/Saakshi-1-1.jpg

Load More