newsfirstkannada.com

APRIL FOOL: ತಮಾಷೆ ಮಿತಿಯಾಗಿರಲಿ.. ಭಾರತಕ್ಕೂ ಫ್ರಾನ್ಸಿಗರ ‘ಏಪ್ರಿಲ್​ ಫೂಲ್’​ ಗೇಲಿಗೂ ಸಂಬಂಧವಿದೆಯಾ?

Share :

Published April 1, 2024 at 11:32am

Update April 1, 2024 at 11:37am

    ಏಪ್ರಿಲ್​ ಫೂಲ್​ ಎಂಬುವುದು ಹುಟ್ಟಿದ್ದೆಲ್ಲಿ ಇದರ ಇತಿಹಾಸ ಗೊತ್ತಾ?

    ಭಾರತಕ್ಕೂ ‘ಏಪ್ರಿಲ್​ ಫೂಲ್’​ಗೂ ಸಂಬಂಧವಿದೆಯಾ? ತಿಳಿದುಕೊಳ್ಳಿ

    ಏಪ್ರಿಲ್​ ಮೊದಲನೇ ದಿನವನ್ನ ಹಾಸ್ಯದ ದಿನವನ್ನಾಗಿ ಏಕೆ ಆಚರಿಸುತ್ತಾರೆ?

ಏಪ್ರಿಲ್​ ಫೂಲ್​! ಹೌದು. ಇಂದು ಏಪ್ರಿಲ್​ ತಿಂಗಳ ಮೊದಲ ದಿನ. ವಿಶ್ವದಾದ್ಯಂತ ಮೂರ್ಖರ ದಿನವೆಂದು ಆಚರಿಸಲಾಗುತ್ತದೆ. ಅನೇಕರು ಈ ವಿಶೇಷ ದಿನದಂದು ಸಹದ್ಯೋಗಿಗಳ ಜೊತೆಗೆ ಹಾಸ್ಯ, ತಮಾಷೆ ಮಾಡುತ್ತಾ ಮೂರ್ಖರ ದಿನವನ್ನು ಆಚರಿಸುತ್ತಾರೆ. ಹಾಗಂತ ನಾವಿಂದು ನಿಮ್ಮನ್ನ ಮೂರ್ಖರನ್ನಾಗಿಸುತ್ತಿಲ್ಲ. ಬದಲಾಗಿ ಇಂದಿನ ದಿನದ ವಿಶೇಷತೆ ಬಗ್ಗೆ, ಏಪ್ರಿಲ್​ ಫೂಲ್​ನ ಇತಿಹಾಸ ಬಗ್ಗೆ ಮೆಲುಕು ಹಾಕುವ ಕೆಲಸ ಮಾಡುತ್ತಿದ್ದೇವಷ್ಟೇ.

ಇತಿಹಾಸ

ಮೂರ್ಖರ ದಿನವನ್ನ ಅನೇಕ ಶತಮಾನಗಳಿಂದ ಆಚರಿಸುತ್ತಾ ಬಂದಿದ್ದಾರೆ. ಅಚ್ಚರಿ ಸಂಗತಿ ಎಂದರೆ 16ನೇ ಶತಮಾನದಿಂದ ಆಚರಿಸುತ್ತಾ ಅಥವಾ ಗುರುತಿಸುತ್ತಾ ಬಂದಿರುವ ಮೂರ್ಖರ ದಿನದ ಇತಿಹಾಸ ಕೆದಕಿದರೆ ಫ್ರಾನ್ಸ್​ ದೇಶಕ್ಕೆ ಕರೆದೊಯ್ಯುತ್ತದೆ. 1392ರಲ್ಲಿ ‘ದಿ ಕ್ಯಾಂಟರ್ಬರಿ ಟೇಲ್ಸ್​’ ಎಂದು ಹೆಸರಿಸಲಾದ ಜೆಫ್ರಿ ಚೌಸರ್​ ಪುಸ್ತಕದಲ್ಲಿ ಮೂರ್ಖರ ದಿನದ ಬಗ್ಗೆ ದಾಖಲಾಗಿತ್ತು. ಹೀಗಾಗಿ ಪ್ರಪಂಚದಾದ್ಯಂತ ಇಂದಿನ ದಿನವನ್ನು ಮೂರ್ಖರ ದಿನವನ್ನು ಹಾಸ್ಯದ ರೀತಿಯಲ್ಲಿ ಆಚರಿಸುತ್ತಾರೆ ಎಂದು ಹೇಳಲಾಗುತ್ತಿದೆ.

1563ರಲ್ಲಿ ಕೌನ್ಸಿಲ್ ಆಫ್​​ ಟ್ರೆಂಡ್​​ ಸೂಚಿಸಿದಂತೆ ಫ್ರಾನ್ಸ್​ 1582ರಲ್ಲಿ ಜೂಲಿಯನ್​ ಕ್ಯಾಲೆಂಡರ್​ನಿಂದ ಗ್ರೆಗೋರಿಯನ್​ ಕ್ಯಾಲೆಂಡರ್​ಗೆ ಬದಲಾಯಿಸಿತು. ಆದರೆ ಫ್ರಾನ್ಸ್​ ಜನವರಿ ಮೊದಲ ದಿನ ಹೊಸ ವರ್ಷವನ್ನು ಸಂಭ್ರಮಿಸಿದರೆ, ಕೆಲವು ದೇಶದ ಜನರು ಮಾರ್ಚ್​ ಅಂತ್ಯ ಮತ್ತು ಏಪ್ರಿಲ್​ ನಡುವೆ ಬರುವ ವಿಷುವತ್​ ಸಂಕ್ರಾಂತಿಯ ಸಮಯದಲ್ಲಿ ಹೊಸ ವರ್ಷವನ್ನು ಆಚರಿಸಿದರು ಎಂದು ಹೇಳಲಾಗುತ್ತಿದೆ. ಇದನ್ನು ಫ್ರಾನ್ಸಿಗರು ‘ಏಪ್ರಿಲ್​ ಫೂಲ್’ ಎಂದು​ ಗೇಲಿ ಮಾಡಲು ಹೊರಟರು. ಹಾಗಿದ್ರೆ ಫ್ರಾನ್ಸಿಗರು ಗೇಲಿ ಮಾಡುತ್ತಿರುವುದಕ್ಕೂ ಮತ್ತು ಕೆಲ ದೇಶಗಳು ಏಪ್ರಿಲ್​ ತಿಂಗಳಿನಲ್ಲಿ ಆಚರಿಸುತ್ತಿರುವ ಹೊಸ ವರ್ಷಕ್ಕೂ ಸಂಬಂಧವಿದೆಯಾ?.

ಮಾಹಿತಿ ಪ್ರಕಾರ, ಏಪ್ರಿಲ್​ ಫೂಲ್​ ಡೇ ಪ್ರಾಚೀನ ರೋಮನ್​ ಹಬ್ಬಗಳಾದ ಹಿಲೇರಿಯಾದಿಂದ ಹುಟ್ಟುಕೊಂಡಿದೆ ಎಂಬ ಮಾತಿದೆ. ಹಿಲೇರಿಯಾ ಸಮಯದಲ್ಲಿ ಜನರು ವೇಷ ಧರಿಸಿ ಒಬ್ಬರನ್ನೊಬ್ಬರು ಅಪಹಾಸ್ಯ ಮಾಡುತ್ತಾರಂತೆ. ಆದರೆ  ಭಾರತದಲ್ಲಿ ಏಪ್ರಿಲ್​ ಫೂಲ್​ ಅನ್ನು ಮಾರ್ಚ್​ ಅಂತ್ಯ ಆಚರಿಸಲಾಗುತ್ತದೆ. ಇದೇ ತಿಂಗಳು ಭಾರತದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: FASTag, EPS, NPS.. ಇಂದಿನಿಂದ ದೇಶದಲ್ಲಿ ಜಾರಿಗೆ ಬಂದಿರುವ 6 ಬದಲಾವಣೆಗಳ ಬಗ್ಗೆ ನಿಮಗೂ ಗೊತ್ತಿರಲಿ

ತಮಾಷೆ ಮಿತಿಯಾಗಿರಲಿ

ಸದ್ಯ ಏಪ್ರಿಲ್​ ಫೂಲ್​ ನಗುವಿಗೆ ಮೀಸಲಾದ ದಿನ. ವಿಶ್ವದಾದ್ಯಂತ ಜನರು ಇಂದು ಮೂರ್ಖರ ದಿನವನ್ನು ಆಚರಿಸುತ್ತಾರೆ. ಆದರೆ ಯಾರು ಗಂಭೀರವಾಗಿ ತೆಗೆದುಕೊಳ್ಳದೆ, ನಗು ಮೊಗದಲ್ಲಿ ಈ ದಿನವನ್ನು ಸಂಭ್ರಮಿಸಿದರೆ ಸಾಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

APRIL FOOL: ತಮಾಷೆ ಮಿತಿಯಾಗಿರಲಿ.. ಭಾರತಕ್ಕೂ ಫ್ರಾನ್ಸಿಗರ ‘ಏಪ್ರಿಲ್​ ಫೂಲ್’​ ಗೇಲಿಗೂ ಸಂಬಂಧವಿದೆಯಾ?

https://newsfirstlive.com/wp-content/uploads/2024/04/April-Fools-day.jpg

Load More