newsfirstkannada.com

PHOTOS: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಐಶ್ವರ್ಯ; ಸರ್ಜಾ ಕುಟುಂಬದಲ್ಲಿ ಸಂಭ್ರಮವೋ ಸಂಭ್ರಮ

Share :

Published June 8, 2024 at 9:21pm

  ಸಿನಿಮಾ ಹೀರೋನಾ ಅಳಿಯ ಮಾಡಿಕೊಂಡ ನಟ ಅರ್ಜುನ್​ ಸರ್ಜಾ

  ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನೆಯಲ್ಲಿ ಕಳೆಕಟ್ಟಿದ ಸಂಭ್ರಮ

  ಜೂ.14ರಂದು ಚೆನ್ನೈನ ಲೀಲಾ ಪ್ಯಾಲೇಸ್​ನಲ್ಲಿ ಜೋಡಿಯ ಆರತಕ್ಷತೆ

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನೆಯಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಹಿರಿ ಮಗಳು ಐಶ್ವರ್ಯ ಅವರ ಮದುವೆಗೆ ಕೆಲವೇ ದಿನಗಳು ಬಾಕಿ ಇದೆ. ಹೀಗಿರುವಾಗ ನಟ ಅರ್ಜುನ್ ಸರ್ಜಾ ಕುಟುಂಬ ಪ್ರೀತಿಯ ಪುತ್ರಿಯ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ  ಓದಿ: ಉಪ್ಪಿನಕಾಯಿ ಮಾರಾಟದಿಂದ ಸಾಮ್ರಾಜ್ಯ ಕಟ್ಟಿದ ಧೀಮಂತ.. ರಾಮೋಜಿ ರಾವ್ ಬದುಕಿನ ರೋಚಕ ಕಥೆ ಇಲ್ಲಿದೆ

ಜೂನ್ 14ರಂದು ಚೆನ್ನೈನಲ್ಲಿ ನಟಿ ಐಶ್ವರ್ಯ ಅವರ ವಿವಾಹ ತಮಿಳು ಇಂಡಸ್ಟ್ರಿಯ ಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ ನಟ ಉಮಾಪತಿ ರಾಮಯ್ಯ ಜೊತೆಗೆ ನಡೆಯಲಿದೆ. ಈಗಾಗಲೇ ಗಣ್ಯರಿಗೆ ಆಮಂತ್ರಣ ಹಂಚಿಕೆಯಾಗಿದೆ.

ಇದೀಗ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ವಿವಾಹವಾಗುತ್ತಿದ್ದು ಹಳದಿ ಶಾಸ್ತ್ರ ಹಾಗೂ ಮೆಹಂದಿ ಕಾರ್ಯಕ್ರಮಗಳು ಚೆನ್ನೈನ ಮನೆಯಲ್ಲಿ ಅದ್ಧೂರಿಯಾಗಿ ನಡೆದಿವೆ. ಸದ್ಯ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದ್ದು ಐಶ್ವರ್ಯಾ ಫುಲ್ ಖುಷಿ, ಖುಷಿಯಾಗಿದ್ದಾರೆ.

ಸರ್ಜಾ ಕುಟುಂಬದ ಸದಸ್ಯರೆಲ್ಲ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಹಳದಿ ಶಾಸ್ತ್ರದ ಹಾಗೂ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಐಶ್ವರ್ಯ ಸರ್ಜಾ ಮೆಹಂದಿ ಹಾಕಿಸಿಕೊಂಡು ಸಂಭ್ರಮಿಸಿದ್ದಾರೆ. ಐಶ್ವರ್ಯಾ ಸರ್ಜಾ ಹಾಗೂ ಉಮಾಪತಿ ಪರಸ್ಪರ ಪ್ರೀತಿಸಿ ವಿವಾಹವಾಗುತ್ತಿದ್ದಾರೆ. ಉಮಾಪತಿ ರಾಮಯ್ಯ, ತಮಿಳಿನ ಹಿರಿಯ ನಟ ತಂಬಿ ರಾಮಯ್ಯ ಅವರ ಪುತ್ರ.

ಇದನ್ನೂ ಓದಿ: ಒಂದು ವರ್ಷದಿಂದಲೇ ಡಿವೋರ್ಸ್ ಪ್ಲಾನ್‌.. ಚಂದನ್ ನಂಗೆ ಬೇಡ ಅಂತ ನಿವೇದಿತಾ ಡಿಸೈಡ್ ಮಾಡಿದ್ದೇಕೆ?

ಇದೇ ಜೂನ್ 10 ಕ್ಕೆ ಚೆನ್ನೈನಲ್ಲಿರುವ ಅರ್ಜುನ್ ಸರ್ಜಾ ಅವರೇ ಕಟ್ಟಿಸಿರುವ ಆಂಜನೇಯ ದೇವಸ್ಥಾನದಲ್ಲಿ ಇವರಿಬ್ಬರ ವಿವಾಹ ನಡೆಯಲಿದೆ. ಜೂನ್ 14ರಂದು ಚೆನ್ನೈನ ಲೀಲಾ ಪ್ಯಾಲೇಸ್​ನಲ್ಲಿ ನವ ಜೋಡಿಯ ಆರತಕ್ಷತೆ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಲವು ಸಿನಿಮಾ ತಾರೆಯರು ಭಾಗಿಯಾಗಲಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅರ್ಜುನ್ ಸರ್ಜಾ ಮಗಳ ಹಳದಿ ಶಾಸ್ತ್ರದ ಹಾಗೂ ಮೆಹಂದಿ ಕಾರ್ಯಕ್ರಮದ ಫೋಟೋಗಳು ವೈರಲ್​ ಆಗುತ್ತಿವೆ. ಈ ಫೋಟೋ ನೋಡಿದ ಅಭಿಮಾನಿಗಳು ಇಬ್ಬರಿಗೂ ಶುಭ ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಐಶ್ವರ್ಯ; ಸರ್ಜಾ ಕುಟುಂಬದಲ್ಲಿ ಸಂಭ್ರಮವೋ ಸಂಭ್ರಮ

https://newsfirstlive.com/wp-content/uploads/2024/06/arjun-sar6.jpg

Load More