/newsfirstlive-kannada/media/post_attachments/wp-content/uploads/2024/05/Aishwarya-marriage.jpg)
ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನೆಯಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಹಿರಿ ಮಗಳು ಐಶ್ವರ್ಯ ಅವರ ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೀಗಿರುವಾಗ ನಟ ಅರ್ಜುನ್ ಸರ್ಜಾ ಮತ್ತು ಅವರ ಪತ್ನಿ ಆಮಂತ್ರಣ ಪತ್ರಿಕೆ ಕೊಡುವುದರಲ್ಲೇ ಬ್ಯುಸಿಯಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/05/Aishwarya-marriage-3.jpg)
ಇದೇ ಜೂನ್ 10ರಂದು ಚೆನ್ನೈನಲ್ಲಿ ನಟಿ ಐಶ್ವರ್ಯ ಅವರ ವಿವಾಹ ತಮಿಳು ನಟ ಉಮಾಪತಿ ರಾಮಯ್ಯ ಜೊತೆಗೆ ನಡೆಯಲಿದೆ. ಈಗಾಗಲೇ ಗಣ್ಯರಿಗೆ ಆಮಂತ್ರಣ ನೀಡುವ ಕೆಲಸ ಆರಂಭವಾಗಿದೆ. ಹೀಗಾಗಿ ನಟ ಅರ್ಜುನ್ ಸರ್ಜಾ ಮತ್ತು ಅವರ ಪತ್ನಿ ಆಮಂತ್ರಣ ನೀಡುವ ಕೆಲಸ ಮಾಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/05/Aishwarya-marriage-1.jpg)
ಇತ್ತೀಚೆಗಷ್ಟೇ ಸ್ಯಾಂಡಲ್​ವುಡ್ ನಟ ಜಗ್ಗೇಶ್ ಮನೆಗೆ ಭೇಟಿ ನೀಡಿದ ಸರ್ಜಾ ದಂಪತಿ, ಮಗಳು ಮದುವೆಗೆ ಆಹ್ವಾನ ನೀಡಿದ್ದಾರೆ. ಮಾತ್ರವಲ್ಲದೆ ತಮಿಳುನಾಡು ಸಿಎಂ ಸ್ಟಾಲಿನ್​ ಮನೆಗೂ ದಂಪತಿಗಳು ಭೇಟಿ ನೀಡಿ ಮಗಳ ಮದುವೆಗೆ ಆಹ್ವಾನಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/05/Aishwarya-marriage-2.jpg)
ಅಂದ್ಹಾಗೆ, ಕಳೆದ ವರ್ಷ ಅಕ್ಟೋಬರ್ ನಲ್ಲಿ ತಮಿಳು ನಟ ಉಮಾಪತಿ ರಾಮಯ್ಯ ಜೊತೆ ಐಶ್ವರ್ಯ ಎಂಗೇಜ್ಮೆಂಟ್ ನಡೆದಿತ್ತು. ಈ ವರ್ಷ ಜೂನ್​ 10 ರಂದು ಈ ಜೋಡಿ ವಿವಾಹವಾಗುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us