newsfirstkannada.com

ಒಂದು ವೇಳೆ ಕೇಜ್ರಿವಾಲ್ ರಾಜೀನಾಮೆ ಕೊಟ್ಟರೆ ಯಾರಾಗ್ತಾರೆ ದೆಹಲಿ CM; ರೇಸ್​​​​ನಲ್ಲಿ ನಾಲ್ವರು..!

Share :

Published March 23, 2024 at 6:45am

Update March 23, 2024 at 10:00am

  ದೆಹಲಿ ಲಿಕ್ಕರ್‌ ಹಗರಣದಲ್ಲಿ ಕೇಜ್ರಿವಾಲ್​ಗೆ ಸಿಗದ ರಿಲೀಫ್

  ಮಾ.28ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಕೇಜ್ರಿವಾಲ್​

  ದೆಹಲಿ ಸಿಎಂ ಸ್ಥಾನದಿಂದ ಕೆಳಕ್ಕಿಳಿಯುತ್ತಾರಾ ಕೇಜ್ರಿವಾಲ್​?

ದಶಕಗಳ ಹಿಂದೆ ಪರಿವರ್ತನ್ ಆಂದೋಲನದ ಹೆಸರಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ, ಸಿಎಂ ಸ್ಥಾನಕ್ಕೇರಿದ ಅರವಿಂದ್ ಕೇಜ್ರಿವಾಲ್​, ಇದೀಗ ಅದೇ ಭ್ರಷ್ಟಾಚಾರದ ಆರೋಪದಲ್ಲಿ ಜೈಲುಪಾಲಾಗಿದ್ದಾರೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿರುವ ದೆಹಲಿ ಸಿಎಂ ಕೇಜ್ರಿವಾಲ್​ರನ್ನು 6 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಲಾಗಿದೆ. ಇದೇ ಸಂದರ್ಭದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ವೇಳೆ ಅರವಿಂದ್​ ಕೇಜ್ರಿವಾಲ್​ ಹಾಡಿದ ಮಾತು ಭಾರೀ ಚರ್ಚೆಗೆ ಗ್ರಾಸವಾಗಿದೆ.

ನಮ್ಮಲ್ಲಿ ಒಂದೊಂದು ಸಮಸ್ಯೆಗಳಿವೆ. ಯಾರು ಈ ಕುರ್ಚಿ ಮೇಲೆ ಕೂರುತ್ತಾರೋ? ಅದೇ ಕೆಲವೊಮ್ಮೆ ಅವಘಡ ನಡೆಯುತ್ತವೆ. ಈ ಆಂದೋಲನದಿಂದ ಪರ್ಯಾಯ ವಿಕಲ್ಪವೊಂದು ಹುಟ್ಟಿಕೊಳ್ಳುತ್ತೋ, ಈ ಜನ ಕುರ್ಚಿ ಮೇಲೆ ಹೋಗಿ ಕೂತಾಗ. ಆಂದೋಲನದಲ್ಲಿದ್ದ ಜನರು ಭ್ರಷ್ಟರಾಗಬಹುದೇನೋ? ಆಂದೋಲನದಲ್ಲಿನ ಜನರು ಸಮಸ್ಯೆ ಸೃಷ್ಟಿಸಿದ್ರೆ? ಈ ವಿಚಾರದಲ್ಲಿ ನಮಗೆ ದೊಡ್ಡ ಚಿಂತೆ ಕಾಡ್ತಿದೆ-ಅರವಿಂದ್​ ಕೇಜ್ರಿವಾಲ್-ದೆಹಲಿ ಸಿಎಂ

ಭ್ರಷ್ಟಾಚಾರ ವಿರೋಧಿ ಚಳುವಳಿಯಿಂದಲೇ ದೆಹಲಿಯ ಅಧಿಕಾರದ ಗದ್ದುಗೆಗೇರಿ ಕೇಜ್ರಿವಾಲ್​, ಹೋರಾಟದ ವೇಳೆ ನುಡಿದ್ದ ಮಾತು ನಿಜವಾಗಿದೆ.

ಅರವಿಂದ್​ ಕೇಜ್ರಿವಾಲ್​ ಅವರ ಈ ಮಾತುಗಳನ್ನು ಕೇಳಿದ್ರೆ ನಿಜಕ್ಕೂ ಅಚ್ಚರಿ ಅನ್ಸುತ್ತೆ.. ಸದ್ಯ ಭ್ರಷ್ಟಾಚಾರ ವಿರೋಧಿ ಚಳುವಳಿಯಿಂದ ಅಧಿಕಾರಕ್ಕೆ ಬಂದ ಕೇಜ್ರಿವಾಲ್​ ಭ್ರಷ್ಟಾಚಾರ ಹುರುಳಿನಲ್ಲಿ ಸಿಲುಕಿದ್ದಾರೆ. ಮತ್ತೊಂದೆಡೆ ಕೇಜ್ರಿವಾಲ್​ ಜೈಲಿನಿಂದಲೇ ಅಧಿಕಾರ ನಡೆಸಲಿದ್ದಾರೆ ಎಂದು ಆಪ್​ ನಾಯಕರು ಹೇಳ್ತಿದ್ದಾರೆ. ಆದ್ರೆ ಜೈಲಿನಿಂದ ಸರ್ಕಾರ ನಡೆಸುವುದು ಸುಲಭಸಾಧ್ಯವಲ್ಲ. ಹೀಗಾಗಿ ಕೇಜ್ರಿವಾಲ್​ ಸಿಎಂ ಸ್ಥಾನಕ್ಕೆ ಒಂದ್ವೇಳೆ ರಾಜೀನಾಮೆ ನೀಡಿದ್ರೆ ಮುಂದಿನ ದೆಹಲಿ ಸಿಎಂ ಯಾರು ಅನ್ನೋ ಚರ್ಚೆಯು ಶುರುವಾಗಿದ್ದು ಮೂರ್ನಾಲ್ಕು ಜನರ ಹೆಸರು ಚಾಲ್ತಿಯಲ್ಲಿದೆ.

ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್​, ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್, ದೆಹಲಿ ಹಣಕಾಸು ಸಚಿವೆ ಅತಿಶಿ ಮರ್ಲೆನಾ, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್ ಅವರ ಹೆಸರುಗಳು ಸಿಎಂ ರೇಸ್‌ನಲ್ಲಿ ಕೇಳಿಬರುತ್ತಿವೆ. ಈ ಐವರಲ್ಲದೆ, ಪಕ್ಷದ ಸಂಸದೀಯ ಸಮಿತಿಯೂ ಕೂಡ ಬೇರೆ ಹೆಸರನ್ನು ನಿರ್ಧರಿಸಬಹುದು. ಪಕ್ಷ ಇದರ ಬಗ್ಗೆ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

ಮಾರ್ಚ್ 26 ರಂದು ಪ್ರಧಾನಿ ನಿವಾಸಕ್ಕೆ ಆಪ್​ ಘೇರಾವ್
ಕೇಜ್ರಿವಾಲ್​ ಬಂಧನ ಖಂಡಿಸಿ, ದೇಶಾದ್ಯಂತ ಆಪ್​ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ. ಇನ್ನು ಮಾರ್ಚ್​ 26ರಂದು ಪ್ರಧಾನಿ ನಿವಾಸಕ್ಕೆ ಘೇರಾವ್​ ಹಾಕಲು ಆಪ್ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಒಟ್ಟಾರೆ.. ಅರವಿಂದ್​ ಕೇಜ್ರಿವಾಲ್​ ಬಂಧನದಿಂದ ದೆಹಲಿ ರಾಜಕಾರಣದಲ್ಲಿ ಭಾರೀ ಹೈಡ್ರಾಮಾವೇ ಸೃಷ್ಟಿಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ 6 ಮಂದಿ ಮಹಿಳೆಯರಿಗೆ ಟಿಕೆಟ್​ ನೀಡಿದ ಕಾಂಗ್ರೆಸ್​​; ಇದಕ್ಕೆ ಅಸಲಿ ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು ವೇಳೆ ಕೇಜ್ರಿವಾಲ್ ರಾಜೀನಾಮೆ ಕೊಟ್ಟರೆ ಯಾರಾಗ್ತಾರೆ ದೆಹಲಿ CM; ರೇಸ್​​​​ನಲ್ಲಿ ನಾಲ್ವರು..!

https://newsfirstlive.com/wp-content/uploads/2024/03/Aravind-Kejriwal.jpg

Load More