/newsfirstlive-kannada/media/post_attachments/wp-content/uploads/2024/05/ARVIND-KEJRIWAAL.jpg)
ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ಜೋರಾಗಿದ್ದು, ಈಗಾಗಲೇ ಮೂರು ಹಂತದಲ್ಲಿ ಮತದಾನ ನಡೆದಿದೆ. ಮೊನ್ನೆಯಷ್ಟೇ ಜೈಲಿನಿಂದ ರಿಲೀಸ್ ಆಗಿ ಬಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಚುನಾವಣೆಯ ಕಾವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ದೇಶದಲ್ಲಿ ಇಂಡಿಯಾ ಒಕ್ಕೂಟವನ್ನು ಆಡಳಿತಕ್ಕೆ ತಂದರೆ 10 ಗ್ಯಾರಂಟಿಗಳನ್ನು ನೀಡೋದಾಗಿ ಭರವಸೆ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಕೇಜ್ರಿವಾಲ್.. ದೇಶದಾದ್ಯಂತ 24 ಗಂಟೆಗಳ ಕಾಲ ಉಚಿತ ವಿದ್ಯುತ್, ಉಚಿತ ಶಿಕ್ಷಣ ಹಾಗೂ ದೆಹಲಿಗೆ ಕೇಂದ್ರಾಡಳಿತ ಪ್ರದೇಶದ ಬದಲಾಗಿ ರಾಜ್ಯ ಸ್ಥಾನಮಾನ ನೀಡುವ ಘೋಷಣೆ ಸೇರಿದಂತೆ ಒಟ್ಟು 10 ಗ್ಯಾರಂಟಿಗಳ ಭರವಸೆ ನೀಡಿದ್ದಾರೆ. ಚೀನಾ ವಶಕ್ಕೆ ಪಡೆದಿದೆ ಎನ್ನಲಾಗುತ್ತಿರುವ ಭಾರತದ ಭೂ ಪ್ರದೇಶವನ್ನು ವಾಪಸ್ ಪಡೆಯೋದಾಗಿ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!
ಕೇಜ್ರಿವಾಲ್ 10 ಗ್ಯಾರಂಟಿಗಳು..!
- ಗ್ಯಾರಂಟಿ ಆಫ್ ಎಲೆಕ್ಟ್ರಿಸಿಟಿ: ದೇಶಾದ್ಯಂತ 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆ, 200 ಯುನಿಟ್ ವರೆಗೆ ಉಚಿತ ವಿದ್ಯುತ್
- ಗ್ಯಾರಂಟಿ ಆಫ್ ಎಜುಕೇಶನ್: ಎಲ್ಲರಿಗೂ ಉಚಿತ ಶಿಕ್ಷಣ ನೀಡುವ ಭರವಸೆ. ಜೊತೆಗೆ ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಗಳನ್ನು ಉತ್ತಮಗೊಳಿಸುವ ಭರವಸೆ
- ಗ್ಯಾರಂಟಿ ಆಫ್ ಹೆಲ್ತ್: ಖಾಸಗಿ ಆಸ್ಪತ್ರೆಗಳಿಗೆ ಸಮನಾಗಿ ಸರ್ಕಾರಿ ಆಸ್ಪತ್ರೆಗಳ ಮೂಲ ಸೌಕರ್ಯ ಒದಗಿಸುವುದು. ಜೊತೆಗೆ ಸರ್ಕಾರಿ ಆಸ್ಪತ್ರೆಗಳು ಎಲ್ಲಾ ರೀತಿಯ ವ್ಯವಸ್ಥೆ ಇರುವಂತೆ ಮಾಡುವುದು.
- ಗ್ಯಾರಂಟಿ ಆಫ್ ಲ್ಯಾಂಡ್: ಚೀನಾದಿಂದ ಭಾರತದ ಭೂಮಿಯನ್ನು ಮುಕ್ತಗೊಳಿಸುವುದು. ಜೊತೆಗೆ ಸೇನೆಗೆ ಫ್ರೀ ಹ್ಯಾಂಡ್ ನೀಡುವುದು.
- ಅಗ್ನಿವೀರ್ ಸ್ಕೀಮ್ ರದ್ದು: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಅಗ್ನಿವೀರ್ ಸ್ಕೀಮ್ ಅನ್ನು ರದ್ದು ಮಾಡೋದಾಗಿ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
- ಗ್ಯಾರಂಟಿ ಆಫ್ MSP: ರೈತರ ಬೆಳಗಳಿಗೆ ಕನಿಷ್ಠ ಬೆಂಬಲ ನಿಗಧಿ
- ಗ್ಯಾರಂಟಿ ಆಫ್ ಸ್ಟೇಟ್ಹುಡ್: ದೆಹಲಿಗೆ ರಾಜ್ಯದ ಸ್ಥಾನಮಾನದ ಭರವಸೆ
- ಗ್ಯಾರಂಟಿ ಆಫ್ ಎಂಪ್ಲಾಯ್ಮೆಂಟ್: ಪ್ರತಿ ವರ್ಷ ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ
- ಭ್ರಷ್ಟಾಚಾರ ನಿರ್ಮೂಲನೆ: ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕೋದು
- ಗ್ಯಾರಂಟಿ ಆನ್ GST: ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ ನಿಯಮಗಳನ್ನು ಇನ್ನಷ್ಟು ಸರಳಗೊಳಿಸುವುದು. ಚೀನಾದ ವ್ಯಾಪಾರ ಸಾಮರ್ಥ್ಯಕ್ಕಿಂತ ಭಾರತದ ಶಕ್ತಿಯನ್ನು ಹೆಚ್ಚಿಸುವುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ