/newsfirstlive-kannada/media/post_attachments/wp-content/uploads/2024/09/STONE-HIT-MAN.jpg)
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಹೈಡ್ರಾಗೆ ಸಂಬಂಧಿಸಿದ ಅಕ್ರಮ ಕಟ್ಟಡವನ್ನು ಧ್ವಂಸಗೊಳಿಸುವಾಗ ತೂರಿ ಬಂದು ಕಲ್ಲೊಂದು ವ್ಯಕ್ತಿಯ ಬುರುಡೆಯನ್ನೇ ಒಡೆದುಕೊಂಡು ಹೋಗಿದೆ.
ಇದನ್ನೂ ಓದಿ: ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಸಂಗಾರೆಡ್ಡಿ ಜಿಲ್ಲೆಯ ಕೆರೆಯೊಂದರಲ್ಲಿ ಅಕ್ರಮವಾಗಿ ಕಟ್ಟಿದ್ದ ಕಟ್ಟಡ ಧ್ವಂಸಗೊಳಿಸುವಾಗ ಕಟ್ಟಡದ ಸ್ವಲ್ಪ ದೂರದಲ್ಲಿಯೇ ನಿಂತ ವ್ಯಕ್ತಿಯೊಬ್ಬ ದೃಶ್ಯವನ್ನು ನೋಡುತ್ತಿದ್ದ. ಉಳಿದವರು ಮೊಬೈಲ್​​ನಲ್ಲಿ ವಿಡಿಯೋ ಮಾಡುತ್ತಿದ್ದರು
ಈ ವೇಳೆ ಕಟ್ಟಡ ಸ್ಫೋಟಿಸಿದಾಗ ಅದರಿಂದ ತೂರಿ ಬಂದ ಕಲ್ಲಿನಾಕರದ ಅವಶೇಷ ವ್ಯಕ್ತಿಯ ತಲೆಗೆ ಭೀಕರವಾಗಿ ಅಪ್ಪಳಿಸಿದೆ. ಪರಿಣಾಮ ತಕ್ಷಣವೇ ವ್ಯಕ್ತಿ ಕುಸಿದು ಬಿದ್ದಿದ್ದಾನೆ.
#Hyderabad . As part of the hydra demolitions, Sangareddy was standing far away near the Malakpur pond and was watching a video. pic.twitter.com/yluBM6xmYO
— Gade Shekar BRS. ? (@ShekarGade38658)
#Hyderabad . As part of the hydra demolitions, Sangareddy was standing far away near the Malakpur pond and was watching a video. pic.twitter.com/yluBM6xmYO
— Gade Shekar BRS. 🚘 (@ShekarGade38658) September 28, 2024
">September 28, 2024
ತಲೆಯಿಂದ ಧಾರಾಕಾರವಾಗಿ ರಕ್ತ ಸುರಿಯುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ಅಲ್ಲಿದ್ದವರೆಲ್ಲರೂ ಸೇರಿ ದಾಖಲಿಸಿದ್ದಾರೆ. ವ್ಯಕ್ತಿ ಯಾರು? ಎಲ್ಲಿಯವರು? ಅನ್ನೋ ಸ್ಪಷ್ಟ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us