newsfirstkannada.com

×

ಪೆಟ್ರೋಲ್​ ₹48, ಡಿಸೇಲ್ ₹​​69 ಆಗುತ್ತಾ? ಕಚ್ಛಾ ತೈಲದ ಬೆಲೆ ಕುಸಿಯುತ್ತಿದ್ದಂತೆ ರಾಜಕೀಯದ ಲೆಕ್ಕಾಚಾರ!

Share :

Published September 16, 2024 at 11:46pm

Update September 16, 2024 at 11:47pm

    2014ರಲ್ಲಿ ಬ್ಯಾರೆಲ್‌ಗೆ ಕಚ್ಛಾ ತೈಲದ ದರ 109 ಡಾಲರ್​ ಏರಿಕೆ ಆಗಿತ್ತು

    2014ರಲ್ಲಿ ಬೆಲೆ ಏರಿಕೆ ಇದ್ರೂ ಪೆಟ್ರೋಲ್‌ ₹57, ಡೀಸೆಲ್‌ ದರ ₹71 ಇತ್ತು

    ಪ್ರಸ್ತುತ ಕಚ್ಚಾ ತೈಲ ದರ ಶೇ.32.5ರಷ್ಟು ಕಡಿಮೆ ಅಂದ್ರೆ ಎಷ್ಟಾಗಬೇಕು ಗೊತ್ತಾ?

ನವದೆಹಲಿ: ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ ಅನ್ನೋ ಹಾಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಕುಸಿದಿದೆ. ಆದರೂ ಭಾರತದಲ್ಲಿ ಮಾತ್ರ ಪೆಟ್ರೋಲ್​ ಬೆಲೆ ಕೆಳಗೆ ಇಳೀತಾನೇ ಇಲ್ಲ. ಸದ್ಯ ಇದು ರಾಜಕೀಯ ಜಟಾಪಟಿಗೂ ಕಾರಣವಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​​ ಖರ್ಗೆ ಅವರಂತೂ ಬಿಜೆಪಿ ಜನರನ್ನ ಲೂಟಿ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿನ್ನದಂತೆ ಇಂಧನ ಬೆಲೆ ಕೂಡ ಕೈಸುಡುತ್ತಿದೆ. ಶತಕದ ಗಡಿ ದಾಟಿರುವ ತೈಲ ದರ ಕಡಿಮೆ ಆಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ವಾಹನ ಸವಾರರು ತೈಲ ಬೆಲೆ ಏರಿಕೆಯಿಂದ ಬೇಸತ್ತು ಹೋಗಿದ್ದಾರೆ. ಆದ್ರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಇಳಿಕೆಯಾದ್ರೂ ಕೂಡ ಕೇಂದ್ರ ಸರ್ಕಾರ ಇಂಧನ ದರ ಕಡಿಮೆ ಮಾಡದಿರುವುದು ಜನರ ಕಣ್ಣನ್ನು ಕೆಂಪಾಗಿಸಿದೆ.

ಸದ್ಯ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಳೆದೊಂದು ತಿಂಗಳಿಂದ ತೀವ್ರ ಕುಸಿತ ಕಾಣುತ್ತಿದೆ. ಪ್ರತಿ ಬ್ಯಾರೆಲ್​​​ನ ದರ 70 ಡಾಲರ್​​ ಅಸುಪಾಸಿನಲ್ಲಿದ್ದು, ಇಷ್ಟಾದ್ರೂ ಕೂಡ ಪೆಟ್ರೋಲಿಯಂ ಕಂಪನಿಗಳು. ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಸಿದೆ ಕಣ್ಣು ಮುಚ್ಚಿ ಕುಳಿತಿದೆ. ಈಗ ಇದೇ ವಿಚಾರ ರಾಜಕೀಯ ಕೆಸರೆರೆಚಾಟಕ್ಕೂ ನಾಂದಿ ಹಾಡಿದ್ದು, ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​​​ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗುಡ್​​ನ್ಯೂಸ್​ ಕೊಟ್ಟ ಕೇಂದ್ರ ಸರ್ಕಾರ; ಕೃಷ್ಣಾ-ಗೋದಾವರಿ ಕಣಿವೆಯಲ್ಲಿ ಕಚ್ಚಾ ತೈಲ ಉತ್ಪಾದನೆ..! 

‘ತೈಲ ದರ ಕಡಿಮೆಯಾದ್ರೂ ಬಿಜೆಪಿ ಲೂಟಿ ಮಾಡುತ್ತಿದೆ’
ಕೇಂದ್ರ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ್​​​​​​ ಖರ್ಗೆ ಕಿಡಿ
ತೈಲ ಮಾರುಕಟ್ಟೆಯಲ್ಲಿ ತೈಲದ ಬೆಲೆ ಕಡಿಮೆಯಾದ್ರೂ ದರ ಇಳಿಸದೆ ಬಿಜೆಪಿ ಸರ್ಕಾರ ಜನರನ್ನ ಲೂಟಿ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​​ ಖರ್ಗೆ, ಕಿಡಿಕಾರಿದ್ದಾರೆ. ಜೊತೆಗೆ ದೇಶದಲ್ಲಿ ಚುನಾವಣೆ ಘೋಷಣೆಯಾಗಿರುವ ರಾಜ್ಯಗಳಲ್ಲಿ ಇಂಧನ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು ಬಿಜೆಪಿಯನ್ನ ಸೋಲಿಸಲಿದ್ದಾರೆ ಅಂತ ಭವಿಷ್ಯ ನುಡಿದಿದ್ದಾರೆ.

ಖರ್ಗೆ ‘ಇಂಧನ’ ಕಿಡಿ
ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​​ ಮಾಡಿರುವ ಮಲ್ಲಿಕಾರ್ಜುನ್​ ಖರ್ಗೆ, 2014ರಲ್ಲಿ ಕಚ್ಛಾ ತೈಲದ ಬ್ಯಾರಲ್​ ದರ 109 ಡಾಲರ್‌ ಇದ್ರೂ ಪೆಟ್ರೋಲ್‌ 57 ರೂ, ಹಾಗೂ ಡೀಸೆಲ್‌ 71 ರೂಪಾಯಿ ಇತ್ತು. ಆದ್ರೇ ಪ್ರಸ್ತುತ ತೈಲ ದರ ಶೆ.32.5 ರಷ್ಟು ಕಡಿಮೆಯಾಗಿದೆ.. ಈಗಿನ ಕಚ್ಚಾ ತೈಲದ ಬೆಲೆಯ ಪ್ರಕಾರ, ಪೆಟ್ರೋಲ್​ ದರ 48 ರೂಪಾಯಿ ಹಾಗೂ ಡಿಸೇಲ್​ ರೇಟ್​​ 69 ರೂಪಾಯಿ ಆಗಬೇಕು. ಆದ್ರೆ ಸದ್ಯ ಪೆಟ್ರೋಲ್​ 94 ರೂಪಾಯಿ ಡಿಸೇಲ್​​​ 87 ರೂಪಾಯಿ ಇದೆ ಅಂತ ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ತೈಲದ ದರ ಸದ್ಯ ವಿಪಕ್ಷ ನಾಯಕರಿಗೆ ಚುನಾವಣಾ ಅಸ್ತ್ರವಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಹೇಗೆ ಉತ್ತರಿಸಲಿದೆ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೆಟ್ರೋಲ್​ ₹48, ಡಿಸೇಲ್ ₹​​69 ಆಗುತ್ತಾ? ಕಚ್ಛಾ ತೈಲದ ಬೆಲೆ ಕುಸಿಯುತ್ತಿದ್ದಂತೆ ರಾಜಕೀಯದ ಲೆಕ್ಕಾಚಾರ!

https://newsfirstlive.com/wp-content/uploads/2023/12/Modi-Petrol-Price.jpg

Load More