newsfirstkannada.com

ರೋಹಿತ್​​​-ಕೊಹ್ಲಿರನ್ನ ಓವರ್​ಟೇಕ್ ಮಾಡ್ತಿರೋ ಯಂಗ್​ಸ್ಟರ್ಸ್​.. ಯಾರು ಯಾರು ಗೊತ್ತಾ ಆ ಯುವ ಆಟಗಾರರು?

Share :

Published April 23, 2024 at 11:02am

Update April 23, 2024 at 11:40am

    ಹೊಡಿಬಡಿ ಆಟದಿಂದ ಹೆಸರು ಮಾಡುತ್ತಿರೋ ಯಂಗ್​ಸ್ಟರ್ಸ್​

    ಅಭಿಷೇಕ್ ಶರ್ಮಾ ಅಖಾಡಕ್ಕಿ ಇಳಿದ್ರೆ ಸಾಕು ಬೌಲರ್ಸ್​ಗೆ ಬೇಸರ

    ಟಿ20 ಮಾಸ್ ಮಹಾರಾಜರನ್ನೆ ಯಂಗ್​ಸ್ಟರ್ಸ್​ನಿಂದ ಓವರ್ ಟೇಕ್

ಅಬ್ಬಾಬ್ಬ, ಇದಪ್ಪಾ ಚಿಂದಿ ಆಟ ಅಂದ್ರೆ. ಅಸಲಿಗೆ ಟಿ20 ಕ್ರಿಕೆಟ್​ಗೆ ಬೇಕಿರೋದೆ ಇದೇ ಆಟ. ಕಣ್ಣು ಕುಕ್ಕಿಸುವ ಸ್ಟ್ರೈಕ್​​​ರೇಟ್​​​. ಅದ್ಭುತ ಎನ್ನಿಸುವ ಫೈಟಿಂಗ್ ಸ್ಪಿರಿಟ್​​. ಭಯಾನಕ ಆಟದ ಮೂಲಕ ಟಿ20 ಡಾನ್ ಕಿಂಗ್ ಕೊಹ್ಲಿ ಹಾಗೂ ರೋಹಿತ್​ರನ್ನ ಓವರ್ ಮಾಡಿದ್ದಾರೆ. ಅಷ್ಟಕ್ಕೂ ಆ ಆಟಗಾರರು ಯಾರು?.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್​ನ ಸೂಪರ್​​ ಸ್ಟಾರ್​ಗಳು. ದಶಕಕ್ಕೂ ಅಧಿಕ ಕಾಲ ಟಿ20 ಕ್ರಿಕೆಟ್​ನಲ್ಲಿ ಸಾಮ್ರಾಟರಾಗಿ ಮೆರೆದಾಡ್ತಿದ್ದಾರೆ. ಇವರ ಅಟ್ಯಾಕಿಂಗ್ ಸ್ಟೈಲ್​​, ಬೌಲರ್ಸ್​ ದಂಡಿಸೋ ಪರಿ ಅದ್ಭುತ. ಚುಟುಕು ದುನಿಯಾದಲ್ಲಿ ಕೊಹ್ಲಿ-ರೋಹಿತ್​​ ಅಂದ್ರೆ ಎಂಟರ್​​​ಟೈನ್​ಮೆಂಟ್​​, ಎಂಟರ್​​ಟೈನ್​ಮೆಂಟ್​ ಅಂದ್ರೆ ಕೊಹ್ಲಿ-ರೋಹಿತ್ ಅನ್ನೋ ಮಾತಿತ್ತು. ಆದ್ರೀಗ ಇಂತಹ ಟಿ20 ಮಾಸ್ ಮಹಾರಾಜರನ್ನೆ ಯಂಗ್​ಸ್ಟರ್ಸ್​ ಓವರ್ ಟೇಕ್ ಮಾಡ್ತಿದ್ದಾರೆ. ತಮ್ಮ ವಿಧ್ವಂಸಕ ಆಟದಿಂದ ದಿಗ್ಗಜರನ್ನ ನೇಪಥ್ಯಕ್ಕೆ ಸರಿಸುತ್ತಿರೋ ಆ ಭಲೇ ಯಂಗ್​ಸ್ಟರ್​ಗಳನ್ನ ತೋರಿಸ್ತೀವಿ ನೋಡಿ.

ಇದನ್ನೂ ಓದಿ: ವಿಧಿಯ ಆಟ ಘೋರ! ಮುದ್ದಾದ ಕಂದಮ್ಮನ ಮೇಲೆ ಕಾರು ಹರಿಸಿದ ಅಪ್ಪ.. ಮಗು ಸಾವು

ಅಭಿಷೇಕ್​​ ಶರ್ಮಾ ಅಲ್ಲ, ರೌದ್ರಾಭಿಷೇಕ ಶರ್ಮಾ..!

17ನೇ ಸೀಸನ್​​ನಲ್ಲಿ ಹೈದ್ರಾಬಾದ್​​​​​​ ಅಭಿಷೇಕ್ ಶರ್ಮಾ ಬೌಲರ್​ಗಳ ಮಾರಣಹೋಮ ನಡೆಸ್ತಿದ್ದಾರೆ. ಸ್ವಲ್ಪವೂ ಭಯ ಅನ್ನೋದೆ ಇಲ್ಲ. ಮೊದಲ ಬಾಲ್​​ನಿಂದಲೇ ದಂಡಿಸೋದೊಂದೆ ಗೊತ್ತು. 215ರ ಸ್ಟ್ರೈಕ್​ರೇಟ್​​​​ನಲ್ಲಿ ಬ್ಯಾಟ್ ಬೀಸ್ತಿರೋ ಈ ಟೆರರ್​ ಬ್ಯಾಟ್ಸ್​​ಮನ್​ 7 ಪಂದ್ಯದಿಂದ 257 ರನ್​ ಚಚ್ಚಿದ್ದಾರೆ. ಈ ರೌದ್ರವತಾರ ಎದುರಾಳಿ ಪಾಳಯದಲ್ಲಿ ಇನ್ನಿಲ್ಲದ ನಡುಕು ಹುಟ್ಟಿಸಿದೆ.

ಸಿಕ್ಕಾಪಟ್ಟೆ ವೈಲೆಂಟ್​ ಅಶುತೋಷ್​​​​​​​ ಶರ್ಮಾ..!

ಅಶುತೋಷ್​​ ಶರ್ಮಾ ಒಂದು ತಿಂಗಳ ಹಿಂದೆ ಯಾರಿಗೂ ಗೊತ್ತಿರ್ಲಿಲ್ಲ. ಆದ್ರೀಗ ಇದೇ ಫೈರಿ ಬ್ಯಾಟ್ಸ್​​​ಮನ್ ಎಲ್ಲರ ಮನೆ ಮಾತಾಗಿದ್ದಾರೆ. ಚೊಚ್ಚಲ ಐಪಿಎಲ್​ ಟೂರ್ನಿಯಲ್ಲಿ ಬಿರುಸಿನ ಆಟವಾಡ್ತಿದ್ದಾರೆ. ಆಡಿದ ಐದೇ ಪಂದ್ಯವಾದ್ರು 189.29ರ ಇಂಪ್ರೆಸ್ಸಿವ್​ ಸ್ಟ್ರೈಕ್​ರೇಟ್​ನಲ್ಲಿ 159 ರನ್ ಕೊಳ್ಳೆ ಹೊಡೆದಿದ್ದಾರೆ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸೋ ಅಶುತೋಷ್​​​, ಭಾರತ ತಂಡದ ಫ್ಯೂಚರ್ ಸ್ಟಾರ್​ ಆಗಿ ಅಂತ ಬಿಂಬಿತವಾಗಿದ್ದಾರೆ.

ಸಿಡಿಗುಂಡಿನ ಶಶಾಂಕ್​​ ಆಟಕ್ಕೆ ಉಘೇ ಉಘೇ..!

ಶಶಾಂಕ್​​ ಸಿಂಗ್ ತಪ್ಪಾದ ಬಿಡ್​​​ನಿಂದ ಪಂಜಾಬ್​ ಪಾಲಾದ್ರು. ಆದ್ರಿಂದು ಇದೇ ಶಶಾಂಕ್​​​ ಐಪಿಎಲ್​ನಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದಾರೆ. ಅದ್ಯಾವ ಮಟ್ಟಿಗೆ ಅಂದ್ರೆ ಶಶಾಂಕ್​ ಅಂಗಳಕ್ಕಿಳಿದ್ರೆ ಸಾಕು ಶಿಳ್ಳೆ ಚಪ್ಪಾಳೆಗಳ ಝೇಂಕಾರ ಮೊಳಗುತ್ತೆ. ಕ್ರೇಜಿ 168.10ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿ, ಫ್ಯಾನ್ಸ್​ ಅಸಲಿ ಮರಂಜನೆದೂಟ ಉಣಬಡಿಸ್ತಿದ್ದಾರೆ.

ಇದನ್ನೂ ಓದಿ: ಸುಪ್ರೀಂ ತೀರ್ಪಿನ ಬೆನ್ನಲ್ಲೇ ಹೋರಾಟಕ್ಕೆ ಸಜ್ಜು.. ಮೋದಿ ಸರ್ಕಾರದ ವಿರುದ್ಧ ಸಿಎಂ, ಡಿಸಿಎಂ ಸೇರಿ ಕಾಂಗ್ರೆಸ್​ ಸಮರ

ಪರಾಗ್​ ಅಂದ್ರೆ ಫಯರ್​​​, ಕಾಲಿಟ್ರೆ ರನ್ ಮಳೆ..!

ಕಳೆದು ಐದು ಸೀಸನ್​​ಗಳಿಂದ ಪರಾಗ್ ಆಟ ಅಷ್ಟಕಷ್ಟೆ. ಆದ್ರೆ ಈ ಸಲ ಪರಾಗ್ ಹೊಸ ಅವತಾರವನ್ನೇ ತಾಳಿದ್ದಾರೆ. ಆರೆಂಜ್​ ಕ್ಯಾಪ್​​ಗಾಗಿ ಕಿಂಗ್ ಕೊಹ್ಲಿ ಹಾಗೂ ಪರಾಗ್ ನಡುವೆ ಫೈಟ್​​ ಏರ್ಪಟ್ಟಿದೆ. 318 ರನ್ ಗಳಿಸಿ ಕೊಹ್ಲಿಗಷ್ಟೇ ಅಲ್ಲದೇ ಬೌಲರ್​ಗಳಿಗೂ ಭಯ ಹುಟ್ಟಿಸಿದ್ದಾರೆ. 161.42 ಸ್ಟ್ರೈಕ್​ರೇಟ್​​, 22 ಸಿಕ್ಸ್​​ ಪರಾಗ್ ಎಷ್ಟು ಡೇಂಜರ್​ ಅನ್ನೋದೆ ಸಾಕ್ಷಿ.

ಎನಿವೇ.. ಮೇಲಿನ ಫೈರಿ ಯಂಗ್​ಸ್ಟರ್ಸ್​ ಐಪಿಎಲ್​​ನ ಫಸ್ಟ್​​​​​ಹಾಫ್​​​ನಲ್ಲಿ ಧೂಳೆಬ್ಬಿಸಿದ್ದಾರೆ. ಸೆಕೆಂಡ್​​ ಹಾಫ್​​​ನಲ್ಲಿ ಇದೇ ದರ್ಬಾರ್​ ನಡೆಸಿದ್ರೆ ಕಿಂಗ್ ಕೊಹ್ಲಿ, ಹಿಟ್​ಮ್ಯಾನ್ ಜಪ ಮತ್ತಷ್ಟು ಗೌಣವಾಗೋದ್ರಲ್ಲಿ ಯಾವುದೇ ಸಂಶಯವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್​​​-ಕೊಹ್ಲಿರನ್ನ ಓವರ್​ಟೇಕ್ ಮಾಡ್ತಿರೋ ಯಂಗ್​ಸ್ಟರ್ಸ್​.. ಯಾರು ಯಾರು ಗೊತ್ತಾ ಆ ಯುವ ಆಟಗಾರರು?

https://newsfirstlive.com/wp-content/uploads/2024/04/ROHIT_KOHLI.jpg

Load More