ಪ್ರಶ್ನೆ ಪತ್ರಿಕೆ ಅದಲು, ಬದಲು.. ಆಕಾಂಕ್ಷಿಗಳಿಂದ ಪ್ರತಿಭಟನೆ
ಬೆಳಗಾವಿ ಅಂಜುಮನ್ ಕಾಲೇಜಿನಲ್ಲಿ ಭಾರೀ ಯಡವಟ್ಟು
ಮತ್ತೆ KAS ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ
ಬೆಂಗಳೂರು: ಹಲವು ಗೊಂದಲ, ಪ್ರತಿಭಟನೆಗಳ ಮಧ್ಯೆ ಇವತ್ತು KAS ಪ್ರಿಲಿಮ್ಸ್ ಪರೀಕ್ಷೆ ನಡೆದಿದೆ. ಪರೀಕ್ಷೆ ಮುಂದೂಡುವಂತೆ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ರು, ಸರ್ಕಾರ ತನ್ನ ನಿರ್ಧಾರ ಬದಲಿಸಲಿಲ್ಲ. ಆದ್ರೆ ಸರಿಯಾಗಿ ಪರೀಕ್ಷೆ ನಡೆಸಬೇಕಿದ್ದ ಸರ್ಕಾರ ಯಡವಟ್ಟು ಮಾಡಿಕೊಂಡಿದ್ದು, ಆಕಾಂಕ್ಷಿಗಳು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: KAS ಪರೀಕ್ಷೆ ವೇಳೆ ನಡೆಯಿತು ಯಡವಟ್ಟು.. ಭಾರೀ ಗೊಂದಲ; ಜಿಲ್ಲಾಧಿಕಾರಿ ದಿಢೀರ್ ಭೇಟಿ
ಹೌದು.. ವಿರೋಧ ಹಾಗೂ ಗೊಂದಲದ ನಡುವೆ ಇವತ್ತು ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ನಡೆದಿದೆ. 2023-24ನೇ ಸಾಲಿನ 40 ಕೆಎಎಸ್ 40 ಕೆಎಎಸ್ ಹುದ್ದೆ ಸೇರಿ ಒಟ್ಟು 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಪರೀಕ್ಷೆಯನ್ನು ನಡೆಸಲಾಗಿದೆ. ಪರೀಕ್ಷೆ ಮುಂದೂಡಿ ಎಂದು ಸರ್ಕಾರದ ವಿರುದ್ಧ ಆಕಾಂಕ್ಷಿಗಳು ಹೋರಾಟ ಪ್ರತಿಭಟನೆ ಮಾಡಿದ್ರೂ, ತನ್ನ ನಿರ್ಧಾರವನ್ನು ಬದಲಿಸದ ಸರ್ಕಾರ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ.
ಕೆಎಎಸ್ ಪರೀಕ್ಷೆಯ ವೇಳೆ ಮತ್ತೊಂದು ಯಡವಟ್ಟು
ಪ್ರಶ್ನೆ ಪತ್ರಿಕೆ ಅದಲು, ಬದಲು.. ಪ್ರತಿಭಟನೆಯ ಕಿಚ್ಚು
ರಾಜ್ಯಾದ್ಯಂತ ಇವತ್ತು ಕೆಎಎಸ್ ಪರೀಕ್ಷೆ ನಡೆಸಲಾಗಿದೆ. ಬೆಳಗಾವಿ ಅಂಜುಮನ್ ಕಾಲೇಜಿನಲ್ಲಿ ಭಾರೀ ಯಡವಟ್ಟಾಗಿದೆ. ಪರೀಕ್ಷೆಯ ಪ್ರಶ್ನೆ ಪತ್ರಿಕೆ ನೀಡಲು 15 ನಿಮಿಷ ತಡ ಹಾಗೂ OMR ಶೀಟ್ ಅದಲು ಬದಲಾಗಿದೆ ಎಂದು ಅಭ್ಯರ್ಥಿಗಳು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ.
ಇದೇ ವೇಳೆ ಪೊಲೀಸ್ ಅಧಿಕಾರಿಗಳ ಜೊತೆಗೆ ಆಕಾಂಕ್ಷಿಗಳು ವಾಗ್ವಾದ ನಡೆಸಿದ್ದು, ಕಾಲೇಜು ಆವರಣದಲ್ಲಿ ಗೊಂದಲ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಸ್ಥಳಕ್ಕಾಗಮಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಅಭ್ಯರ್ಥಿಗಳ ಮನವೊಲಿಸಿ ಪರೀಕ್ಷೆ ಬರೆಯುವಂತೆ ಮನವಿ ಮಾಡಿದರು. ಬಳಿಕ ಮಾತನಾಡಿ, ಓಎಂಆರ್ ಶೀಟ್ ಅದಲು, ಬದಲಾದ ಬಗ್ಗೆ ತನಿಖೆ ಮಾಡ್ತಿವಿ ಅಂತ ಹೇಳಿದರು.
ಇದನ್ನೂ ಓದಿ: ಬ್ರ್ಯಾಂಡೆಡ್ ಟೀ ಶರ್ಟ್, ಶೂ, ಡ್ರೈಫ್ರೂಟ್ಸ್.. ವಿಲ್ಸನ್ ಗಾರ್ಡನ್ ನಾಗನ ಲಕ್ಸುರಿ ಲೈಫ್ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!
ಬಳ್ಳಾರಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ
ಮತ್ತೊಂದೆಡೆ, KAS ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಬಳ್ಳಾರಿಯ ಪರೀಕ್ಷಾ ಸೆಂಟರ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಅಂತ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಪರೀಕ್ಷೆ ಆರಂಭಕ್ಕೂ ಮುನ್ನವೇ ಪ್ರಶ್ನೆ ಪತ್ರಿಕೆಯ ಸೀಲ್ ಓಪನ್ ಆಗಿದೆ ಅಂತ ಆರೋಪಿಸಿ ಅಭ್ಯರ್ಥಿಗಳು ಬಳ್ಳಾರಿಯ ಸೆಂಟ್ ಜಾನ್ ಹೈಸ್ಕೂಲ್‌ನ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ ಜೊತೆಗೆ ಮತ್ತೊಮ್ಮೆ ಪರೀಕ್ಷೆ ನಡೆಸಲು ಆಗ್ರಹಿಸಿದ್ದಾರೆ.
ಹೀಗೆ ಕೆಲವೆಡೆ ವಿರೋಧ ಹಾಗೂ ಗೊಂದಲಗಳ ನಡುವೆ ಕೆಎಎಸ್ ಪರೀಕ್ಷೆ ನಡೆದಿದೆ. ಆದ್ರೆ ಪ್ರಶ್ನೆ ಪತ್ರಿಕೆ ಅದಲು, ಬದಲು, ಸೋರಿಕೆ ಆರೋಪ ಕೇಳಿಬಂದಿರೋದು ದುರದೃಷ್ಟಕರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ