Advertisment

ಭೀಕರ ಪ್ರವಾಹದ ನೀರಿಗೆ ಬಿದ್ದ ಶಾಸಕ.. 14 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ; ರೆಡ್ ಅಲರ್ಟ್ ಅನೌನ್ಸ್

author-image
Bheemappa
Updated On
ಭೀಕರ ಪ್ರವಾಹದ ನೀರಿಗೆ ಬಿದ್ದ ಶಾಸಕ.. 14 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ; ರೆಡ್ ಅಲರ್ಟ್ ಅನೌನ್ಸ್
Advertisment
  • ಭಾರೀ ಮಳೆ, ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ಬ್ರಹ್ಮಪುತ್ರ ನದಿ
  • ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ, 2 ಲಕ್ಷದ 74 ಸಾವಿರ ಜನ ಸಂತ್ರಸ್ತರು ಆಗಿದ್ದಾರೆ
  • ಇನ್ನೂ ಮಳೆ ಆಗುವ ನಿರೀಕ್ಷೆ.. ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚನೆ

ಮಳೆ ಸುಂದರವೇ.. ಆದ್ರೆ ಅದರ ಜೊತೆಗೆ ಸರಸ ಆಡೋಕೆ ಹೋದ್ರೆ ಅಪಾಯಕಾರಿ. ಜಲಪಾತಗಳಲ್ಲಿ, ನದಿಗಳಲ್ಲಿ ಸಾಹಸ ಮಾಡೋದಕ್ಕೆ ಹೋಗಿ ಅದೆಷ್ಟೋ ಜೀವಗಳೂ ಬಲಿಯಾಗಿವೆ. ಆದ್ರೂ ಕೆಲವರು ಮತ್ತೆ ಮತ್ತೆ ಸಾಹಸಕ್ಕೆ ಕೈ ಹಾಕಿ ತಮ್ಮ ಜೀವಕ್ಕೆ ಸಂಚಕಾರ ತರಿಸಿಕೊಳ್ತಿದ್ದಾರೆ.

Advertisment

ಇದನ್ನೂ ಓದಿ: ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಮಗುವಿನ ಮೃತದೇಹ.. ಬೆಳಗ್ಗೆ ಉಯ್ಯಾಲೆಯಲ್ಲಿ ಪ್ರತ್ಯಕ್ಷ..! ಗಾಬರಿಬಿದ್ದ ಜನ

ಮಹಾರಾಷ್ಟ್ರದ ಪುಣೆಯ ಬಳಿಕ ಲೋನವಾಲಾದಲ್ಲಿರೋ ಭುಶಿ ಡ್ಯಾಮ್ ಪಕ್ಕದ ಜಲಪಾತ ವೀಕ್ಷಣೆಯ ವೇಳೆ ಕುಟುಂಬವೊಂದು ಕೊಚ್ಚಿ ಹೋಗಿತ್ತು. ಮಕ್ಕಳು ಸೇರಿದಂತೆ ಐವರು ನೀರುಪಾಲಾಗಿದ್ರು. ಇದೀಗ ಇದೇ ರೀತಿ ಮತ್ತೊಂದು ಜೀವ ಹೋಗಿದೆ.

ಇದನ್ನೂ ಓದಿ:ಡಾಲಿ ಧನಂಜಯ್- ಉಪ್ಪಿ ನಡುವೆ ಬಿಗ್ ವಾರ್​.. ಕೆಂಪೇಗೌಡ ಟೈಟಲ್ ಸಿಕ್ಕಿದ್ದು ಯಾರಿಗೆ?

Advertisment

publive-image

ಹರಿಯೋ ನೀರಿಗೆ ಹಾರಿ ಯುವಕನ ಹುಚ್ಚು ಸಾಹಸ

ತುಮಿಹಿ ಘಾಟ್​ನ ವಾಟರ್​ಫಾಲ್ಸ್ ಕೆಲವು ಗೆಳೆಯರು ಟ್ರಿಪ್​ಗೆ ಬಂದಿದ್ರು. ಮಳೆಯಲ್ಲಿ ಸಖತ್ ಎಂಜಾಯ್ ಮಾಡ್ತಿದ್ರು. ಈ ವೇಳೆ 38 ವರ್ಷದ ಸ್ವಪ್ನಿಲ್ ಧಾವ್ಡೆ ಎಂಬಾತ ಬಂಡೆಯ ಮೇಲಿಂದ ಸೀದಾ ನೀರಿಗೆ ಜಿಗಿದೇ ಬಿಟ್ಟಿದ್ದಾನೆ. ಆದ್ರೆ ಕೆಳಗೆ ಬೀಳ್ತಿದ್ದಂತೆ ನೀರಿನ ಹರಿವಿನಲ್ಲಿ ಕಂಟ್ರೋಲ್ ತಪ್ಪಿದೆ. ನೋಡನೋಡ್ತಿದ್ದಂತೆಯೇ ನೀರಿನಲ್ಲಿ ಆತ ಕೊಚ್ಚಿ ಹೋಗಿದ್ದೇನೆ. ಗೆಳೆಯರು ಕಾಪಾಡಬೇಕು ಅಂತಾ ಅಂದುಕೊಳ್ಳುವಷ್ಟರಲ್ಲಿ ಜಲವ್ಯೂಕ್ಕೆ ಆತ ಸಿಲುಕಿಬಿಟ್ಟಿದ್ದ. ನೀರಿನ ಸೆಳೆತ ಆ ಜೀವವನ್ನ ಕೊಚ್ಚಿ ಕೊಂಡೊಯ್ದಿತ್ತು. ಈತನ ಮೃತದೇಹ ಪತ್ತೆಯಾಗಿತ್ತು. ಹುಚ್ಚು ಸಾಹಸವೇ ಸಾವನ್ನ ಆಹ್ವಾನಿಸಿತ್ತು.

ಇನ್ನು, ದುರಂತ ಈ ಎರಡು ಘಟನೆಗಳು ನಡೆದಿರೋದು ಪುಣೆಯಲ್ಲಿಯೇ.. ಲೋನವಾಲಾದಲ್ಲಿ ಐವರು ಸಾವನ್ನಪ್ಪಿದ್ರೆ, ತುಮಿಹಿ ಘಾಟ್​ನ ವಾಟರ್​ಫಾಲ್ಸ್​ನಲ್ಲಿ ಯುವಕ ಸಾವನ್ನಪ್ಪಿದ್ದಾನೆ.

ನದಿಪಾತ್ರದ ಜನರಿಗೆ ಜಲಸಂಕಷ್ಟ ಶುರು

ಅಸ್ಸಾಂನಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರೋ ಮಳೆಗೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಅದರಲ್ಲೂ ಬ್ರಹ್ಮಪುತ್ರ ಹಾಗೂ ಅದರ ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪರಿಣಾಮ ನದಿಪಾತ್ರದ ಜನರಿಗೆ ಜಲಸಂಕಷ್ಟ ಶುರುವಾಗಿದೆ. ಒಟ್ಟು 14 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿಯಿದ್ದು, 2.74 ಲಕ್ಷ ಜನ ಸಂತ್ರಸ್ತರಾಗಿದ್ದಾರೆ. ಎನ್‌ಡಿಆರ್‌ಎಫ್ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ. ​

Advertisment

ಇವ್ರು ಅಸ್ಸಾಂನ ಶಾಸಕ ಸುಶಾಂತ್​​ ಬೋರ್ಗೋಯಿ. ದಿರುಘರ್​ ಬಳಿ, ಸುರಿದ ಮಳೆ ಏಟಿಗೆ.. ಶಾಸಕ ಸಿಕ್ಕಿ ಒದ್ದಾಡಿದ್ದಾರೆ. ನೀರಲ್ಲಿ ಬಿದ್ದ ಅವ್ರನ್ನ ಸಹಚರರು ಎತ್ತಿ ಬೋಟ್​ ಹತ್ತಿಸಿದ್ರು. ಒದ್ದೆಯಾದ ಬಟ್ಟೆಗಳನ್ನ ಹಿಂಡಿಕೊಳ್ತಾ ಶಾಸಕ ದಡ ಸೇರಿದ್ರು.

ಇದನ್ನೂ ಓದಿ: ರೋಹಿತ್ ಶರ್ಮಾ ಟೀಮ್​ ಬಗ್ಗೆ KL ರಾಹುಲ್ ಏನಂದ್ರು..? ವಿಶ್ವಕಪ್ ಗೆಲುವಿನ ಬಗ್ಗೆ ಕನ್ನಡಿಗನ ಮನದ ಮಾತುಗಳು

Advertisment


">July 1, 2024

7 ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ

7 ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಸ್ಸಾಂನ ಬಳಿಕ ಅರುಣಾಚಲ ಪ್ರದೇಶ, ತ್ರಿಪುರ, ಪಶ್ಚಿಮ ಬಂಗಾಳ, ಗುಜರಾತ್ ಹಾಗೂ ಮೇಘಾಲಯದಲ್ಲಿ ಮುಂದಿನ ಮೂರು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭರ್ಜರಿ ಮಳೆಯಾಗುವ ನಿರೀಕ್ಷೆ ಇದ್ದು, ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.


">April 1, 2024

ವರುಣನಬ್ಬರ ಮತ್ತಷ್ಟು ಹೆಚ್ಚು ಮುನ್ಸೂಚನೆ ಸಿಕ್ಕಿದೆ. ನದಿಗಳಲ್ಲಿ, ಡ್ಯಾಮ್​ಗಳಲ್ಲಿ ನೀರಿನ ಮಟ್ಟ ಏರಿಕೆಯಾಗ್ತಿರೋದ್ರಿಂದ ಜನರಲ್ಲಿ ಆತಂಕ ಹೆಚ್ಚಾಗ್ತಿದೆ. ಆರಂಭವೇ ಹೀಗಿದೆ.. ಇನ್ನೂ ಮುಂದಿನ ದಿನಗಳು ಹೇಗಿರಲಿವೆಯೋ ಅನ್ನೋ ಭೀತಿ ಜನರದ್ದು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment