/newsfirstlive-kannada/media/post_attachments/wp-content/uploads/2024/04/KL-Rahul_Athiya-Shetty.jpg)
ಟಿ20 ವಿಶ್ವಕಪ್​ಗೆ ಮುನ್ನವೇ ಟೀಮ್​ ಇಂಡಿಯಾದ ಸ್ಟಾರ್​​​ ವಿಕೆಟ್​​​ ಕೀಪರ್ ಕೆ.ಎಲ್​ ರಾಹುಲ್​​ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಸ್ಟಾರ್​ ಕ್ರಿಕೆಟರ್​​ ಕೆ.ಎಲ್​​ ರಾಹುಲ್​​, ಬಾಲಿವುಡ್ ನಟಿ ಅಥಿಯಾ ಶೆಟ್ಟಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಕಳೆದ ವರ್ಷ ಜನವರಿಯಲ್ಲಿ ಮುಂಬೈನ ಖಂಡಾಲಾದ ಖಾಸಗಿ ಫಾರ್ಮ್ ಹೌಸ್‌ನಲ್ಲಿ ಬಾಲಿವುಡ್​ ನಟ ಸುನೀಲ್​​ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಹಾಗೂ ಕನ್ನಡಿಗ ಕ್ರಿಕೆಟರ್​ ಕೆ.ಎಲ್ ರಾಹುಲ್ ಮದುವೆ ಆಗಿದ್ದರು. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲೇ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
/newsfirstlive-kannada/media/post_attachments/wp-content/uploads/2024/04/KL-Rahul_Athiya-Shetty-1.jpg)
ಇನ್ನು, ಮದುವೆ ಆಗಿ ಒಂದು ವರ್ಷ ಕಳೆಯುತ್ತಿದ್ದಂತೆಯೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಈ ಬಗ್ಗೆ ಖುದ್ದು ತಂದೆ ಸುನೀಲ್​ ಶೆಟ್ಟಿ ಅವರೇ ಮೌನಮುರಿದಿದ್ದಾರೆ. ನನ್ನ ಮಗಳು ಗರ್ಭಿಣಿಯಾಗಿದ್ದಾಳೆ. ರಾಹುಲ್​​​​, ಅಥಿಯಾ ದಂಪತಿ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ಕೆ.ಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚಿಗೆ ಜೈಪುರದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ರಾಹುಲ್​ ಮುನ್ನಡೆಸುವ ಲಕ್ನೋ ತಂಡವನ್ನು ಬೆಂಬಲಿಸಲು ಅಥಿಯಾ ಶೆಟ್ಟಿ ಆಗಮಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us