newsfirstkannada.com

ವಾಹನ ಸವಾರರು ಓದಲೇಬೇಕಾದ ಸ್ಟೋರಿ; ಈ ಕೆಲಸ ಮಾಡದೆ ಹೋದ್ರೆ ಬೀಳುತ್ತೆ ಭಾರೀ ದಂಡ!

Share :

Published May 10, 2024 at 6:04am

  ವಾಹನ ಸವಾರರ ನಿರಾಸಕ್ತಿಗೆ ಸಾರಿಗೆ ಇಲಾಖೆ ದಂಡಾಸ್ತ್ರದ ಚಾಟಿ

  2019ಕ್ಕಿಂತ ಮೊದಲು ಕೊಂಡುಕೊಂಡ ವಾಹನಗಳಿಗೆ ರೂಲ್ಸ್​

  ಕಡೆಯ ದಿನದ ಆದೇಶ ಹೊರಡಿಸಿದ ರಾಜ್ಯ ಸಾರಿಗೆ ಇಲಾಖೆ

ಬೆಂಗಳೂರು: ಈ ಹಿಂದೆಯೇ HSRP ನಂಬರ್ ಪ್ಲೇಟ್ ಅಳವಡಿಕೆಗೆ ರಾಜ್ಯ ಸಾರಿಗೆ ಇಲಾಖೆ ಡೆಡ್​ಲೈನ್​ ಕೊಟ್ಟಿತ್ತು. ಇದರ ಜೊತೆ ಜೊತೆಗೆ ಅಫಿಶಿಯಲ್ ವೆಬ್​ ​ಸೈಟ್​​ ಬಿಡುಗಡೆ ಮಾಡಿ ನಿಮ್ಮ ನಂಬರ್​ ಪ್ಲೇಟ್​ಗಾಗಿ ರಿಜಿಸ್ಟ್ರೇಷನ್​ ಮಾಡ್ಕೊಳ್ಳಿ ಅಂದಿತ್ತು. ಆದ್ರೆ ವಾಹನ ಸವಾರರು ಮಾತ್ರ ಡೋಂಟ್​ ಕೇರ್​ ಅಂದಿದ್ರು. ಸದ್ಯ ಈ ನಿರಾಸಕ್ತಿಗೆ ಸಾರಿಗೆ ಇಲಾಖೆ ದಂಡಾಸ್ತ್ರದ ಚಾಟಿ ಬೀಸಿದೆ.

ಇದನ್ನೂ ಓದಿ: ಗ್ಯಾಂಗ್​ ವಾರ್​​ನಲ್ಲಿ ಇಬ್ಬರು ಸ್ಥಳದಲ್ಲೇ ಸಾವು; ಮತ್ತೋರ್ವ ಆಸ್ಪತ್ರೆಯಲ್ಲಿ ಕಣ್ಮುಚ್ಚಿದ.. ಬೆಚ್ಚಿಬಿದ್ದ ಶಿವಮೊಗ್ಗ..!

2019 ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲಾ ಮಾದರಿಯ ವಾಹನಗಳಿಗೆ ಒಂದು ಸೂಚನೆ. ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳನ್ನು ಹಾಕಿಸಿಕೊಳ್ಳದೇ ಇದ್ರೇ ಕೂಡಲೇ ಹಾಕಿಕೊಳ್ಳಿ. ಇಲ್ಲ ಅಂದ್ರೆ ದಂಡ ಬಿಳುತ್ತೆ ಹುಷಾರ್​. ಹೌದು, 2019ಕ್ಕೂ ಮುನ್ನ ರಿಜಿಸ್ಟರ್​ ಆದಂತಹ ವಾಹನಗಳಿಗೆ ಕೇಂದ್ರ ಸರ್ಕಾರ ಹೆಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿತ್ತು. ಈ ಬಗ್ಗೆ 2024ರ ಫೆಬ್ರವರಿ 17ರವರೆಗೆ ಸಾರಿಗೆ ಇಲಾಖೆ ಗಡುವು ವಿಧಿಸಿತ್ತು. ಆದರೆ, ವಾಹನ ಮಾಲೀಕರು ನಿರಾಸಕ್ತಿ ತೋರಿದ ಹಿನ್ನೆಲೆ ಮೇ 31ರವರೆಗೆ ವಿಸ್ತರಣೆ ಮಾಡಲಾಗಿತ್ತು. ನಿಗದಿಪಡಿಸಿರುವ ಗಡುವು ಅಂತ್ಯವಾಗಲು ಇನ್ನು 21 ದಿನಗಳಷ್ಟೇ ಬಾಕಿ. ಆದರೆ, ಈವರೆಗೆ 34 ಲಕ್ಷ ವಾಹನಗಳಿಗೆ ಮಾತ್ರ ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಅಳವಡಿಕೆಯಾಗಿದೆ. ಹೀಗಾಗಿ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ನಿರ್ಧಾರಿಸಿದ್ದು, ದಂಡಾಸ್ತ್ರದ ಮೊರೆ ಹೋಗಿದೆ.

ಆರ್​ಟಿಓ ನೋಂದಣಿ ಪ್ರಕಾರ ರಾಜ್ಯದಲ್ಲಿ 2.15 ಕೋಟಿ ಹಳೇ ವಾಹನಗಳಿವೆ. 2019ರಿಂದ ಹಿಂದಿನ 15 ವರ್ಷದಲ್ಲಿ ನೋಂದಣಿಯಾಗಿರುವ ವಾಹನಗಳ ಲೆಕ್ಕ ತೆಗೆದುಕೊಂಡ್ರೆ ಅಂದಾಜು 1.70 ಕೋಟಿ ವಾಹನಗಳಿವೆ. ಇನ್ನೂ, 1.56 ಕೋಟಿ ವಾಹನಗಳಿಗೆ ಹೆಚ್ಎಸ್ಆರ್​ಪಿ ಪ್ಲೇಟ್​​ ಅಳವಡಿಸಬೇಕಿದೆ. ಈಗಾಗಲೇ ಮೂರು ಬಾರಿ ಸಾರಿಗೆ ಇಲಾಖೆ ಡೆಡ್ಲೈನ್ ವಿಸ್ತರಣೆ ಮಾಡಿದೆ. ಹೀಗಾಗಿ, ಜೂನ್ 1ರಿಂದ HSRP ನಂಬರ್ ಪ್ಲೇಟ್ ಇಲ್ಲ ಅಂದರೆ ದಂಡ ಫಿಕ್ಸ್. ಮೊದಲ ಬಾರಿಗೆ ವಾಹನ ಪತ್ತೆಯಾದ್ರೆ 500 ರೂ. ದಂಡ, ಎರಡನೇ ಬಾರಿ ಸಿಕ್ಕಿಬಿದ್ದರೆ 1000 ರೂ. ದಂಡ ವಿಧಿಸಲು ಇಲಾಖೆ ಮುಂದಾಗಿದೆ.

ಒಟ್ಟಿನಲ್ಲಿ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಣಿ ಮಾಡಿಕೊಂಡ ದ್ವಿಚಕ್ರ, ತ್ರಿಚಕ್ರ, ಲಘು, ಮಧ್ಯಮ, ಭಾರಿ ವಾಹನ ಸೇರಿ ಎಲ್ಲಾ ವಾಹನಗಳಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್ ಕಂಡು ಬಾರದೇ ಇದ್ದಲ್ಲಿ ದಂಡಂ ದಶಗುಣಂ ಮೊರೆ ಹೋಗಲು ಸಾರಿಗೆ ಇಲಾಖೆ ಪ್ಲಾನ್​ ಮಾಡಿದ್ದು, ಇನ್ನಾದ್ರೂ ವಾಹನ ಸವಾರರು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದಲ್ಲಿ ಜೇಬಿಗೆ ಕತ್ತರಿ ಬೀಳೋದು ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಹನ ಸವಾರರು ಓದಲೇಬೇಕಾದ ಸ್ಟೋರಿ; ಈ ಕೆಲಸ ಮಾಡದೆ ಹೋದ್ರೆ ಬೀಳುತ್ತೆ ಭಾರೀ ದಂಡ!

https://newsfirstlive.com/wp-content/uploads/2023/07/Traffic-rules.jpg

Load More