newsfirstkannada.com

ಗ್ಯಾಂಗ್​ ವಾರ್​​ನಲ್ಲಿ ಇಬ್ಬರು ಸ್ಥಳದಲ್ಲೇ ಸಾವು; ಮತ್ತೋರ್ವ ಆಸ್ಪತ್ರೆಯಲ್ಲಿ ಕಣ್ಮುಚ್ಚಿದ.. ಬೆಚ್ಚಿಬಿದ್ದ ಶಿವಮೊಗ್ಗ..!

Share :

Published May 9, 2024 at 12:47pm

Update May 9, 2024 at 12:48pm

  ಶಿವಮೊಗ್ಗದಲ್ಲಿ ರೌಡಿಶೀಟರ್ಸ್​ ಭಯಾನಕ ಗ್ಯಾಂಗ್ ವಾರ್

  ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಂದು ಗ್ಯಾಂಗ್​ನ ರೌಡಿ ಸಾವು

  ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ನಡೆದಿದ್ದ ‘ರೌಡಿ ಕಾಳಗ’

ಶಿವಮೊಗ್ಗದ ಜನನಿಬಿಡ ಪ್ರದೇಶ ಮೀನು ಮಾರುಕಟ್ಟೆ ಬಳಿ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಗ್ಯಾಂಗ್ ವಾರ್ ಶುರುವಾಗಿತ್ತು. ಹಳೇ ದ್ವೇಷದ ಹಿನ್ನೆಲೆ ನಡು ರಸ್ತೆಯಲ್ಲೇ ನಡೆದ ಗ್ಯಾಂಗ್​​ ವಾರ್​ನಲ್ಲಿ ಇಬ್ಬರು ರೌಡಿಶೀಟರ್​ಗಳು ಬರ್ಬರ ಹತ್ಯೆ ಆಗಿದ್ದರು. ಇದೇ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ರೌಡಿ ಶೀಟರ್ ಖುರೇಶಿ ಕೂಡ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:ಧರ್ಮಶಾಲಾದಲ್ಲಿ RCB ಪ್ಲೇ ಆಫ್ ಭವಿಷ್ಯ.. ಇವತ್ತಿನ ಐದು ಚಾಲೆಂಜ್ ಗೆದ್ದರೆ ಮತ್ತಷ್ಟು ಸಸಾರ..!

ಆಗಿದ್ದೇನು..?
ರೌಡಿಶೀಟರ್ ಯಾಶೀನ್ ಖುರೇಶಿ ಮಟನ್ ಸ್ಟಾಲ್​ನಲ್ಲಿ ಇದ್ದಿದ್ದನ್ನ ಖಚಿತ ಪಡಿಸಿಕೊಂಡ ಶೋಹಿಲ್ ಹಾಗೂ ಗೌಸ್ ತಂಡ ಏಕಾಏಕಿ ಬಂದು ಲಾಂಗು, ಮಚ್ಚಿನಿಂದ ಖುರೇಶಿ ಮೇಲೆ ಹಲ್ಲೆ ಮಾಡಿತ್ತು. ಈ ಘಟನೆಯಿಂದ ರೊಚ್ಚಿಗೆದ್ದ ಖುರೇಶಿ ಕಡೆ ಹುಡುಗರು, ಶೋಹಿಲ್ ಮತ್ತು ಗೌಸ್ ಗ್ಯಾಂಗ್ ಮೇಲೆ ಪ್ರತಿ ದಾಳಿ ಮಾಡಿ ಮಾರಕಾಸ್ತ್ರ, ಚಪ್ಪಡಿ ಕಲ್ಲು, ಸೈಕಲ್ ಎತ್ತಿ ಹಾಕಿ ಇಬ್ಬರನ್ನ ಮುಗಿಸಿತ್ತು. ಇಬ್ಬರ ಕೊಲೆಯಾಗುತ್ತಿದ್ದಂತೆ ಜೊತೆಗೆ ಬಂದಿದ್ದ ಪುಡಿ ರೌಡಿ ಗ್ಯಾಂಗ್ ಅಲ್ಲಿಂದ ಎಸ್ಕೇಪ್ ಆಗಿದೆ.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

ಇತ್ತ ಹಲ್ಲೆಗೊಳಗಾದ ಖುರೇಶಿಯನ್ನ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಯಾಸಿನ್ ಖುರೇಶಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ರೌಡಿಗಳ ಕಾಳಗದಲ್ಲಿ ಸೇಬು ಹಾಗು ಗೌಸ್ ಸ್ಥಳದಲ್ಲಿಯೆ ಸಾವನ್ನಪ್ಪಿದ್ದರು. ಇದೀಗ ಖುರೇಶಿ ಕೂಡ ಮೃತಪಟ್ಟಿದ್ದಾನೆ. ಪ್ರಕರಣವನ್ನು ಗಂಭೀರ ವಿಚಾರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.  ಮಾದಕ ವಸ್ತುಗಳ ಮಾರಾಟ ಜಾಲ ಪ್ರಕರಣದಲ್ಲಿ ಭಾಗಿ ಆಗಿರುವ ಶಂಕೆ ಇದೆ. ನಾಲ್ಕು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಇಬ್ಬರು ರೌಡಿಶೀಟರ್​ಗಳ ಬರ್ಬರ ಹತ್ಯೆ.. ನಡು ಬೀದಿಯಲ್ಲಿ ಹೆಣವಾದ ಸೇಬು, ಗೌಸು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ಯಾಂಗ್​ ವಾರ್​​ನಲ್ಲಿ ಇಬ್ಬರು ಸ್ಥಳದಲ್ಲೇ ಸಾವು; ಮತ್ತೋರ್ವ ಆಸ್ಪತ್ರೆಯಲ್ಲಿ ಕಣ್ಮುಚ್ಚಿದ.. ಬೆಚ್ಚಿಬಿದ್ದ ಶಿವಮೊಗ್ಗ..!

https://newsfirstlive.com/wp-content/uploads/2024/05/SMG-GANG-WAR.jpg

Load More