newsfirstkannada.com

ಧರ್ಮಶಾಲಾದಲ್ಲಿ RCB ಪ್ಲೇ ಆಫ್ ಭವಿಷ್ಯ.. ಇವತ್ತಿನ ಐದು ಚಾಲೆಂಜ್ ಗೆದ್ದರೆ ಮತ್ತಷ್ಟು ಸಸಾರ..!

Share :

Published May 9, 2024 at 12:09pm

    ಧರ್ಮಶಾಲಾದಲ್ಲಿ ಆರ್​ಸಿಬಿ v/s ಪಂಜಾಬ್ ದಂಗಲ್​​

    ಸತತ 4ನೇ ವಿಕ್ಟರಿ ಮೇಲೆ ರೆಡ್​ ಆರ್ಮಿ ಹದ್ದಿನ ಕಣ್ಣು

    ಧರ್ಮಶಾಲಾದಲ್ಲಿ RCB ಗಿದೆ ಪಂಚ ಚಾಲೆಂಜಸ್​

ಆರ್​ಸಿಬಿಗೆ ಹ್ಯಾಟ್ರಿಕ್ ಗೆಲುವಿನ ಸಿಂಚನ ಕಂಡಿದೆ. ಇದೇ ಹುಮ್ಮಸ್ಸಿನಲ್ಲಿ ಪಂಜಾಬ್​​​​​​​ ಕಿಂಗ್ಸ್​ ಬೇಟೆಯಾಡುವ ತವಕದಲ್ಲಿದೆ. ಅದಕ್ಕೆ ಪಂಚ ಧರ್ಮಶಾಲಾ ಸಂಕಟ ಎದುರಾಗಿದೆ. ಈ ಸಂಕಟವನ್ನು ಮೀರಿ ನಿಂತರಷ್ಟೇ ಆರ್​ಸಿಬಿಗೆ ಸತತ 4ನೇ ಗೆಲುವು ಸಾಧ್ಯ.

ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್​ಸಿಬಿ ಪಾಳಯದಲ್ಲಿ ಫುಲ್​ ಜೋಶ್ ತುಂಬಿದೆ. ಹ್ಯಾಟ್ರಿಕ್ ವಿಕ್ಟರಿ ಆಟಗಾರರ ವಿಶ್ವಾಸವನ್ನ ಹೆಚ್ಚಿಸಿದೆ. ಎಲ್ಲಾ ವಿಭಾಗದಲ್ಲಿ ಸಾಂಘಿಕ ಹೋರಾಟ ನಡೆಸಿ ಎದುರಾಳಿಗೆ ನಡುಕ ಹುಟ್ಟಿಸಿದೆ. ಸದ್ಯಕ್ಕಂತೂ ರೆಡ್​ ಆರ್ಮಿಯನ್ನ ಟಚ್​ ಮಾಡೋದೆ ಕಷ್ಟ. ಬ್ಯಾಕ್ ಟು ಬ್ಯಾಕ್ ಗೆಲುವಿನ ಸರಮಾಲೆ ಕಟ್ತಿರೋ ಫಾಫ್ ಡುಪ್ಲೆಸಿ ಆ್ಯಂಡ್ ಗ್ಯಾಂಗ್,​​ ಇಂದು ಪಂಜಾಬ್ ಕಿಂಗ್ಸ್ ಸಂಹಾರಕ್ಕೆ ಹವಣಿಸ್ತಿದೆ. ಆದರೆ ಧರ್ಮಶಾಲಾ ವಾರ್ ಗೆಲ್ಲೋದು ಅಂದುಕೊಂಡಷ್ಟು ಸುಲಭವಿಲ್ಲ. ಯಾಕಂದ್ರೆ ಐದು ಟಫ್​ ಚಾಲೆಂಜಸ್ ಎದುರಾಗಿವೆ. ಇವುಗಳನ್ನ ಮೆಟ್ಟಿನಿಂತರಷ್ಟೇ ಧರ್ಮಶಾಲಾ ದಂಗಲ್​​ನಲ್ಲಿ ವಿಕ್ಟರಿ ಆರ್​ಸಿಬಿಯದ್ದಾಗಲಿದೆ.

ಇದನ್ನೂ ಓದಿ:ಚಿಕ್ಕ ಮಗುವಿಗೆ ನಿಂದಿಸಿದಂತೆ ರಾಹುಲ್​ರನ್ನ ಅವಮಾನಿಸಿದ ಮಾಲೀಕ.. ಭಾರೀ ಆಕ್ರೋಶ..!

ಪವರ್​​​​ಪ್ಲೇನಲ್ಲಿ ಬೌನ್ಸ್​​, ಸ್ವಿಂಗ್​​​​ ಚಾಲೆಂಜ್​​​..!
ಆರ್​ಸಿಬಿ-ಪಂಜಾಬ್​​ ನಡುವಿನ ಪಂದ್ಯವನ್ನ ಹೈಬ್ರಿಡ್​ ಪಿಚ್​​ನಲ್ಲಿ ಆಡಿಸಲಾಗುತ್ತೆ. ದೇಶದಲ್ಲಿ ಮೊದಲ ಬಾರಿ ಈ ಪ್ರಯೋಗ ಮಾಡಲಾಗಿದ್ದು, ಚೆಂಡು ಹೆಚ್ಚು ಬೌನ್ಸ್ ಆಗುತ್ತೆ. ಜತೆಗೆ ಸ್ವಿಂಗ್​ ನೆರವು ಇದೆ. ಹೀಗಾಗಿ ಆರ್​ಸಿಬಿ ಪವರ್​ಪ್ಲೇನಲ್ಲಿ ಎಚ್ಚರಿಕೆಯಿಂದ ಆಡಬೇಕಿದೆ. ಎದುರಾಳಿ ತಂಡದಲ್ಲಿ ಕಗಿಸೋ ರಬಾಡ ಹಾಗೂ ಅರ್ಷ್​ದೀಪ್ ಸಿಂಗ್​ ರಂತ ಫೈರಿ ಫಾಸ್ಟ್​ ಬೌಲರ್​ಗಳಿದ್ದಾರೆ. ಇವರಿಗೆ ತಕ್ಕ ಜವಾಬು ನೀಡಬೇಕಿದೆ.

ಸ್ಪಿನ್ನರ್ಸ್​ ವಿರುದ್ಧ ಎಚ್ಚರಿಕೆಯ ಆಟ ಅಗತ್ಯ..!
ಹಿಮತಪ್ಪಲಿನಲ್ಲಿರೋ ಧರ್ಮಶಾಲಾ ಮೈದಾನ ಸ್ಪಿನ್ನರ್ಸ್​ ಸ್ವರ್ಗತಾಣ. ಸಿಎಸ್​ಕೆ ಹಾಗೂ ಪಂಜಾಬ್​ ನಡುವಿನ ಪಂದ್ಯದಲ್ಲೇ ಪ್ರೂವ್ ಆಗಿದೆ. ಕಳೆದ ಪಂದ್ಯದಲ್ಲಿ ಸ್ಪಿನ್ನರ್ಸ್​ ಒಟ್ಟು 8 ವಿಕೆಟ್ ಬೇಟೆಯಾಡಿದ್ರು. ಇಂದು ಕೂಡ ಸ್ಪಿನ್ನರ್ಸ್​ ಮೇನ್ ರೋಲ್ ಪ್ಲೇ ಮಾಡುವ ಸಾಧ್ಯತೆ ದಟ್ಟವಾಗಿದೆ. ಪಂಜಾಬ್​ ತಂಡದಲ್ಲಿ ಹರ್​ಪ್ರೀತ್​ ಬ್ರಾರ್​​​ ಹಾಗೂ ರಾಹುಲ್ ಚಹಲ್​ರಂತ ಕ್ವಾಲಿಟಿ ಸ್ಪಿನ್ನರ್​ಗಳಿದ್ದಾರೆ. ಇವರ ವಿರುದ್ಧ ಆರ್​ಸಿಬಿ ಬ್ಯಾಟರ್ಸ್​ ಎಚ್ಚರಿಕೆಯ ಆಟವಾಡಬೇಕಿದೆ. ಸ್ವಲ್ಪ ಯಾಮಾರಿದ್ರು ಸೋಲಿನ ಕೂಪಕ್ಕೆ ಬೀಳೋದು ಪಕ್ಕಾ.

ಇದನ್ನೂ ಓದಿ:ಚಿಕನ್ ಪ್ರಿಯರೇ ಹುಷಾರ್.. ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ

ಸಣ್ಣ ಮೈದಾನ.. ಹಿಟ್ಟರ್ಸ್​ಗೆ ಕಡಿವಾಣ ಹಾಕೋದ್ಯಾರು?
ಧರ್ಮಶಾಲಾ ಹೇಳಿ ಕೇಳಿ ಸಣ್ಣ ಮೈದಾನ. ಸ್ಟ್ರೇಟ್​​​​​​​​​ ಬೌಂಡರಿ 60 ಮೀಟರ್​ ಇದ್ರೆ ಸ್ಕ್ವೇರ್ ಲೆಗ್ ಬೌಂಡರಿ 56 ಮೀಟರ್​​ ಇದೆ. ಹೀಗಾಗಿ ಇಲ್ಲಿ ರನ್ ಹೊಳೆ ಹರಿಯಲಿದೆ. ಜಾನಿ ಬೇಸ್ಟೋವ್​​​, ರಿಲೀ ರೋಸೌವ್​​​ ಹಾಗೂ ಲೀವಿಂಗ್​ಸ್ಟೋನ್​ರಂತ ಬಿಗ್ ಹಿಟ್ಟರ್​ಗಳಿದ್ದಾರೆ. ಇವರು ನೆಲಕಚ್ಚಿ ನಿಂತರೆ ರನ್​​​ ಭರಾಟೆ ನಡೆಯಲಿದೆ. ಸೋ ಇವರು ಬಾಲಬಿಚ್ಚದಂತೆ ಕ್ಯಾಪ್ಟನ್ ಡುಪ್ಲೆಸಿ ತಕ್ಕ ಸ್ಟ್ರಾಟಜಿ ರೂಪಿಸಬೇಕಿದೆ.

ಶಶಾಂಕ್​​-ಅಶುತೋಷ್​​​​-ಆರ್ಭಟಕ್ಕೆ ಹಾಕಬೇಕು ಬ್ರೇಕ್​​..!
ಪಂಜಾಬ್​​​ ತಂಡದಲ್ಲಿ ಬೆಂಕಿ-ಬಿರುಗಾಳಿ ಶಶಾಂಕ್ ಸಿಂಗ್ ಹಾಗೂ ಅಶುತೋಷ್​ ಶರ್ಮಾ ಇದ್ದಾರೆ. ಇಬ್ಬರೂ ಸಾಲಿಡ್​​ ಟಚ್​​ನಲ್ಲಿದ್ದಾರೆ. ಇಬ್ಬರು ಹೆಗಲಿಗೆ ಹೆಗಲುಕೊಟ್ಟು ತಂಡವನ್ನ ಗೆಲುವಿನ ದಡ ಸೇರಿಸ್ತಿದ್ದಾರೆ. ಈ ಜೋಡೆತ್ತು ಯಾವುದೇ ಕ್ಷಣದಲ್ಲಿ ಪಂದ್ಯದ ಚಿತ್ರಣ ಬದಲಿಸಬಲ್ಲರು. ಹೀಗಾಗಿ ಗೇಮ್ ಚೇಂಜರ್​​ ಶಶಾಂಕ್ ಹಾಗೂ ಅಶುತೋಷ್​ ಆರ್ಭಟಕ್ಕೆ ಇಂದು ಬೇಗನೇ ಬ್ರೇಕ್ ಹಾಕಬೇಕಿದೆ.

ಮ್ಯಾಕ್ಸ್​ವೆಲ್​​​-ಗ್ರೀನ್​​ ಬ್ಯಾಡ್​ಫಾರ್ಮ್​ ಆತಂಕ..?
ಸತತ ಗೆಲುವಿನ ನಡುವೆಯೂ ಡೇಂಜರಸ್ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಕ್ಯಾಮರೂನ್​ ಬ್ಯಾಡ್​ಫಾರ್ಮ್​ ತಂಡಕ್ಕೆ ಆತಂಕ ಹೆಚ್ಚಿಸಿದೆ. ಗ್ರೀನ್ ಅಬ್ಬರ ಬೌಲಿಂಗ್ ಮಾತ್ರ ಸೀಮಿತವಾಗಿದೆ. ಬ್ಯಾಟ್​ ಸದ್ದೇ ಮಾಡ್ತಿಲ್ಲ. ಮ್ಯಾಕ್ಸ್​ವೆಲ್ ಅಂತೂ ಟೂರ್ನಿಯುದ್ದಕ್ಕೂ ಕಳಪೆ ಆಟವಾಡ್ತಿದ್ದಾರೆ. ಇಬ್ಬರು ಇಂದು ಕಮ್​ಬ್ಯಾಕ್ ಮಾಡಲೇಬೇಕಿದೆ.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

ಇದಿಷ್ಟೇ ಅಲ್ಲದೇ, 2ನೇ ಇನ್ನಿಂಗ್ಸ್​​ ವೇಳೆ ಹೆಚ್ಚು ಇಬ್ಬನಿ ಕೂಡ ಇರಲಿದೆ. ಹೀಗಾಗಿ ಆರ್​ಸಿಬಿ ಟಾಸ್​​ ಗೆದ್ರೆ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವುದು ಉತ್ತಮ. ಈ ಎಲ್ಲಾ ಚಾಲೆಂಜಸ್​​​​​ ಅನ್ನ ಆರ್​ಸಿಬಿ ಮೆಟ್ಟಿ ನಿಂತಿದ್ದೆ ಆದ್ರೆ ಆರ್​ಸಿಬಿಗೆ ಗೆಲುವು ಫಿಕ್ಸ್​​​. ಹಾಗಾಗಲಿ ಅನ್ನೋದೆ ಎಲ್ಲ ಅಭಿಮಾನಿಗಳ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಧರ್ಮಶಾಲಾದಲ್ಲಿ RCB ಪ್ಲೇ ಆಫ್ ಭವಿಷ್ಯ.. ಇವತ್ತಿನ ಐದು ಚಾಲೆಂಜ್ ಗೆದ್ದರೆ ಮತ್ತಷ್ಟು ಸಸಾರ..!

https://newsfirstlive.com/wp-content/uploads/2024/05/RCB-35.jpg

Load More