Advertisment

ಕಿಡ್ನಿ ದಾನ ಮಾಡಿ ಮೋಸ ಹೋದ ಆಟೋ ಡ್ರೈವರ್‌.. 30 ಲಕ್ಷ ರೂ. ಕೊಡ್ತೀನಿ ಅಂದವ್ರು ಮಾಡಿದ್ದೇನು ಗೊತ್ತಾ?

author-image
admin
Updated On
ಕಿಡ್ನಿ ದಾನ ಮಾಡಿ ಮೋಸ ಹೋದ ಆಟೋ ಡ್ರೈವರ್‌.. 30 ಲಕ್ಷ ರೂ. ಕೊಡ್ತೀನಿ ಅಂದವ್ರು ಮಾಡಿದ್ದೇನು ಗೊತ್ತಾ?
Advertisment
  • ಕಿಡ್ನಿ ದಾನ ಮಾಡಿದ್ರೂ 30 ಲಕ್ಷ ರೂ. ಹಣ ಕೊಡಲಿಲ್ಲ ಯಾಕೆ?
  • ಪಾಪ ಆಟೋ ಡ್ರೈವರ್ ಕಷ್ಟ ಕೇಳಿದ್ರೆ ಕರುಳು ಚುರುಕ್ ಅನ್ನುತ್ತೆ
  • ಆಪರೇಷನ್ ಥಿಯೇಟರ್‌ನಿಂದ ಹೊರ ಬಂದ ಮೇಲೆ ಮೋಸ ಬಯಲು

ವಿಜಯವಾಡ: ನಿಜಕ್ಕೂ ಇದು ಕರುಣಾಜನಕ ಕಥೆ.. ಯಾವ ಶತ್ರುವಿಗೂ ಈ ಸ್ಥಿತಿ ಬರಬಾರದು. ಇಂಥಾ ನಯವಂಚನೆಯ ಕೆಲಸವನ್ನ ಯಾರೂ ಮಾಡಬಾರ್ದು. ಪಾಪ ಈ ಆಟೋ ಡ್ರೈವರ್ ಕಷ್ಟ ಕೇಳಿದ್ರೆ ಎಂತವರ ಕರುಳು ಚುರುಕ್ ಅನ್ನೋದೇ ಇರಲ್ಲ. ಕಿರಾತಕರು, ಕಿಡಿಗೇಡಿಗಳು ಅದೆಂಥಾ ಮೋಸ ಮಾಡಿ ಇವರಿಗೆ ಪಂಗನಾಮ ಹಾಕಿದ್ದಾರೆ ಗೊತ್ತಾ. ಈ ಸ್ಟೋರಿ ಪೂರ್ತಿಯಾಗಿ ಓದಿ ನಿಮ್ಗೆ ಗೊತ್ತಾಗುತ್ತೆ.

Advertisment

ಇದನ್ನೂ ಓದಿ: ವಯಸ್ಸು 30, ಮದುವೆ 50.. ಅಬ್ಬಾ!! ಕಿಲಾಡಿ ಲೇಡಿಯ ಕಲ್ಯಾಣದ ಕಥೆಯೇ ರೋಚಕ; ಸಿಕ್ಕಿಬಿದ್ದಿದ್ದು ಹೇಗೆ? 

ಈತನ ಹೆಸರು ಮಧುಬಾಬು. ವಯಸ್ಸು 31. ಗುಂಟೂರಿನಲ್ಲಿ ಆಟೋ ಡ್ರೈವರ್‌ ಆಗಿ ಕೆಲಸ ಮಾಡಿಕೊಂಡು ಇದ್ದವನು. ತಾನಾಯ್ತು ತನ್ನ ಆಟೋ ಆಯ್ತು ಅಂತ ಇದ್ದವನಿಗೆ ಹಣಕಾಸಿನ ಸಮಸ್ಯೆ ಇತ್ತು. ಇದರ ಮಧ್ಯೆ ಸಾಲದ ಹೊರೆ ಬೇರೆ ಇತ್ತು. ಲೋನ್ ಆ್ಯಪ್‌ಗಳ ಸಾಲದ ಸುಳಿಗೆ ಸಿಲುಕಿದ್ದ ಆಟೋ ಡ್ರೈವರ್‌ಗೆ ಯಾರೋ ನಯವಂಚಕರು ಸಖತ್ ಮೋಸ ಮಾಡಿದ್ದಾರೆ.

publive-image

ಮಧುಬಾಬು ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವಾಗ ಒಂದು ದಿನ ಫೇಸ್‌ಬುಕ್‌ನಲ್ಲಿ ಜಾಹೀರಾತು ನೋಡಿದ್ದಾನೆ. ಅದರಲ್ಲಿ ಕಿಡ್ನಿ ದಾನ ಮಾಡಿದರೆ 30 ಲಕ್ಷ ರೂ. ನೀಡುವುದಾಗಿ ಜಾಹೀರಾತು ಕೊಟ್ಟಿದ್ದರು. ಆ ಜಾಹೀರಾತು ನಂಬಿದ ಮಧುಬಾಬು ಅದರಲ್ಲಿರುವ ಫೋನ್ ನಂಬರಿಗೆ ಕರೆ ಮಾಡಿದ್ದಾನೆ.

Advertisment

ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಹಳದಿ ಶಾಸ್ತ್ರ; ಬಾಲಿವುಡ್ ತಾರೆಯರ ರಂಗು ಹೇಗಿದೆ ನೋಡಿ! 

ಫೋನ್ ಸ್ವೀಕರಿಸಿದ ಅಪರಿಚಿತರು ಮತ್ತೊಬ್ಬ ಮಧ್ಯವರ್ತಿಯ ನಂಬರ್ ಕೊಟ್ಟಿದ್ದಾನೆ. ಅವನು ಮಧುಬಾಬು ಅವರನ್ನ ವಿಜಯವಾಡದ ವಿಜಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬರುವಂತೆ ಹೇಳಿದ್ದಾನೆ. ಅಲ್ಲಿ ಕಿಡ್ನಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಎಡಗಡೆಯ ಕಿಡ್ನಿ ತೆಗೆದುಕೊಳ್ಳುತ್ತೇವೆ ಎಂದವರು ಆಪರೇಷನ್ ಥಿಯೇಟರ್‌ನಲ್ಲಿ ಬಲಗಡೆಯ ಕಿಡ್ನಿ ಎಗರಿಸಿಬಿಟ್ಟಿದ್ದಾರೆ.

Advertisment

ಮಧುಬಾಬು ಕಿಡ್ನಿ ದಾನ ಮಾಡಿದರೂ ಹೇಳಿದಂತೆ 30 ಲಕ್ಷ ರೂಪಾಯಿ ಹಣವನ್ನು ಕೊಟ್ಟಿಲ್ಲ. ಕಿಡ್ನಿ ನೀಡೋದಕ್ಕೆ ಮೊದಲು ಆಮೇಲೆ ಓಡಾಟಕ್ಕೆ ಅಂತ ಬರೀ 50 ಸಾವಿರ ರೂಪಾಯಿ ಖರ್ಚು ಮಾಡಿದ್ದಾರಂತೆ. ಕಿಡ್ನಿ ಸ್ವೀಕರಿಸಿದ ವ್ಯಕ್ತಿಗೂ ಆಟೋ ಡ್ರೈವರ್ ಮಧುಬಾಬುಗೂ ಯಾವುದೇ ರಕ್ತ ಸಂಬಂಧ ಇಲ್ಲ. ಆದರೆ ರಕ್ತ ಸಂಬಂಧ ಇರುವಂತೆ ದಾಖಲೆ ಸೃಷ್ಟಿಸಿ ಕಿಡ್ನಿ ಪಡೆದಿದ್ದಾರೆ. ಕಿಡ್ನಿ ಪಡೆದ ಬಳಿಕ ಭರವಸೆ ನೀಡಿದಂತೆ 30 ಲಕ್ಷ ರೂಪಾಯಿ ನೀಡಲಿಲ್ಲ ಎಂದು ಮಧು ಬಾಬು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment