Avani Lekhara: ಚಿನ್ನದ ಪದಕ ಗೆದ್ದು ದಾಖಲೆ ಬರೆದ ಪ್ಯಾರಾ ಒಲಿಂಪಿಯನ್.. ಯಾರು ಈ ಅವನಿ ಲೇಖರ?

author-image
Bheemappa
Updated On
Avani Lekhara: ಚಿನ್ನದ ಪದಕ ಗೆದ್ದು ದಾಖಲೆ ಬರೆದ ಪ್ಯಾರಾ ಒಲಿಂಪಿಯನ್.. ಯಾರು ಈ ಅವನಿ ಲೇಖರ?
Advertisment
  • ಅವನಿ ಲೇಖರ ಸ್ಪೋರ್ಟ್ಸ್​ ಆಡಲು ಹೋದರೆ ಮೆಡಲ್ ಪಕ್ಕಾ!
  • ಭಾರತ ಸರ್ಕಾರದಿಂದ ಯಾವ್ಯಾವ ಗೌರವ ಪಡೆದುಕೊಂಡಿದ್ದಾರೆ?
  • ಈಗಾಗಲೇ ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಅವನಿ ಲೇಖರ

ಅವನಿ ಲೇಖರ ಇಡೀ ದೇಶವೇ ಮೆಚ್ಚುವಂತ ಪ್ರತಿಭೆ. ತನ್ನ ಮೃದು ಸ್ವಭಾವದ ಆಟದಿಂದಲೇ ಯಾವಾಗಲೂ ಜನ ಮನ ಗೆಲ್ಲುವ ಸ್ಪರ್ಧಿ. ಸದ್ಯ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್​​ನ 10 ಮೀಟರ್ ವಿಭಾಗದ ಏರ್​ ರೈಫಲ್​​ ಶೂಟಿಂಗ್​ನಲ್ಲಿ ಅವನಿ ಲೇಖರ ಗೋಲ್ಡ್​ ಮೆಡಲ್​ಗೆ ಮುತ್ತಿಕ್ಕಿದ್ದಾರೆ. ಟೋಕಿಯೋ ಬಳಿಕ 2ನೇ ಬಾರಿಗೆ ಪ್ಯಾರಿಸ್​​ನಲ್ಲಿ ದೇಶದ ಕೀರ್ತಿ ಉತ್ತುಂಗಕ್ಕೆ ಕೊಂಡೊಯ್ಯದಿದ್ದಾರೆ. ಯಾರು ಈ ಅವನಿ ಲೇಖರ.

ಅವನಿ ಲೇಖರ ರಾಜಸ್ಥಾನದ ಜೈಪುರ ಮೂಲದವರು. 2001 ನವೆಂಬರ್​ 8 ರಂದು ಜನಿಸಿದರು. ಇವರು ಹುಟ್ಟುತ್ತಲೆ ಚೆನ್ನಾಗಿ ಇದ್ದರು. ನಡೆದಾಡುತ್ತಿದ್ದರು, ಓಡಾಡುತ್ತಿದ್ದರು. ಸಾಮಾನ್ಯರಂತೆ ಇದ್ದರು. ಆದರೆ ವಿಧಿಯಾಟ 2012ರ ರಸ್ತೆ ಅಪಘಾತ ಒಂದರಲ್ಲಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡರು. ಮಗಳಿಗೆ 2 ಕಾಲುಗಳು ಇಲ್ಲ ಎನ್ನುವುದು ತಂದೆಗೆ ಊಹಿಸಿಕೊಳ್ಳಲು ಆಗಲಿಲ್ಲ. ಹೀಗಾಗಿ ಮಗಳಿಗಾಗಿ ತಂದೆ ಕಠಿಣ ಶ್ರಮ ವಹಿಸಿ ಅವರನ್ನು ಅರ್ಚರಿ, ಏರ್​ ರೈಫಲ್​​ ಶೂಟಿಂಗ್​ ಸ್ಫರ್ಧಿಯಾಗಿ ಮಾಡಿದರು.

ಇದನ್ನೂ ಓದಿ:ಒಲಿಂಪಿಕ್ಸ್​ನ ಯುವ ಪ್ಲೇಯರ್​ಗೆ ಕೋಟಿ ರೂಪಾಯಿ ಅನೌನ್ಸ್​.. ವಿಡಿಯೋ ಕಾಲ್ ಮಾಡಿ ಮಾತಾಡಿದ CM

publive-image

ಕಾಲುಗಳು ಇಲ್ಲ ಎನ್ನುವುದನ್ನೇ ತಂದೆ, ಪುತ್ರಿಗೆ ಮರೆಯಿಸಿ ಬಿಟ್ಟರು. ತನ್ನ ಸಾಧನೆ ಏನಿದ್ದರು ದೇಶಕ್ಕಾಗಿ, ದೇಶ ಸೇವೆಗೆ ಸಲ್ಲಿಸುವುದು ಎಂದು ಮಗಳ ಮನಸಲ್ಲಿ ದೃಢವಾಗಿ ಬೇರೂರುವಂತೆ ಮಾಡಿದರು. ಪಿಸಿಕಲಿ, ಮಾನಸಿಕವಾಗಿ ಸ್ಫೋರ್ಟ್ಸ್​ ಕಡೆ ಹೆಚ್ಚು ಗಮನ ಹರಿಸುವಂತೆ ಧೈರ್ಯ ಹೇಳಿದರು. ಹೀಗಾಗಿಯೇ ಅವನಿ ಲೇಖರ ಯಾವುದೇ ದೇಶಕ್ಕೆ ಕ್ರೀಡೆಗೆ ಎಂದು ಹೋಗಲಿ ಪದಕವಂತೂ ಗೆದ್ದುಕೊಂಡು ಬಂದೇ ಬರುತ್ತಾರೆ.

ಶೂಟರ್​ ಅಭಿನವ್ ಬಿಂದ್ರಾ ಪ್ರೇರಣೆ

ಶೂಟರ್​ ಅಭಿನವ್ ಬಿಂದ್ರಾ ಅವರ ಸಾಧನೆಗಳಿಂದ ಪ್ರೇರಿತರಾದ ಅವನಿ ಲೇಖರ ಬಿಲ್ಲುಗಾರಿಕೆ (Archery) ಜೊತೆಗೆ 2015ರಿಂದ ಶೂಟಿಂಗ್‌ ಕಡೆ ಇನ್ನಷ್ಟು ಮನಸು ಮಾಡಿದರು. ಹೀಗಾಗಿ ತನ್ನ ನಿರಂತರ ಪ್ರಯತ್ನದಿಂದ ಬಹುಬೇಗನೆ ಶೂಟಿಂಗ್​​ನಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಣತಿ ಸಾಧಿಸಿದರು. ಶೂಟಿಂಗ್​ ಜೊತೆ ಜೊತೆಗೆ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ರಾಜಸ್ಥಾನದ ವಿಶ್ವವಿದ್ಯಾಲಯದಲ್ಲಿ 5 ವರ್ಷದ ಕಾನೂನು ಪದವಿ ಪಡೆದುಕೊಂಡಿದ್ದಾರೆ.

2020ರ ಟೋಕಿಯೋ ಪ್ಯಾರ ಒಲಿಂಪಿಕ್ಸ್​​ನಲ್ಲಿ ಅವನಿ ಲೇಖರ ಮಹತ್ವದ ಸಾಧನೆ ಮಾಡಿದರು. ಭಾರತದ ಮೊಟ್ಟ ಮೊದಲ ಮಹಿಳಾ ಶೂಟರ್​ ಅವನಿ ಲೇಖರ, ಪ್ಯಾರ ಒಲಿಂಪಿಕ್ಸ್​ನಲ್ಲಿ ಬಂಗಾರ ಹಾಗೂ ಕಂಚಿನ ಪದಕ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದರು. ಈ ಸಾಧನೆಯನ್ನು ಗಮನಿಸಿದ ಭಾರತ ಸರ್ಕಾರ ಅವನಿ ಲೇಖರ ಅವರಿಗೆ ಪದ್ಮಶ್ರೀ ಹಾಗೂ ಖೇಲ್​ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಅವನಿ ಲೇಖರ ಗೆದ್ದಂತ ಪ್ರಮುಖ ಪ್ರಶಸ್ತಿಗಳು

  • 2024 ಪ್ಯಾರಿಸ್​ ಪ್ಯಾರ ಒಲಿಂಪಿಕ್ಸ್​- ಚಿನ್ನದ ಪದಕ
  • 2020 ಟೋಕಿಯೋ ಪ್ಯಾರ ಒಲಿಂಪಿಕ್ಸ್​- ಚಿನ್ನದ ಪದಕ
  • 2020 ಟೋಕಿಯೋ ಪ್ಯಾರ ಒಲಿಂಪಿಕ್ಸ್- ಕಂಚು
  • 2022 ಏಷಿಯನ್ ಪ್ಯಾರ ಗೇಮ್ಸ್​- ಚಿನ್ನದ ಪದಕ
  • 2022 ವರ್ಲ್ಡ್​​ಕಪ್​ ಫ್ರಾನ್ಸ್​- ಚಿನ್ನದ ಪದಕ
  • 2022 ವರ್ಲ್ಡ್​​ಕಪ್​ ಫ್ರಾನ್ಸ್​- ಚಿನ್ನದ ಪದಕ
  • 2022 ವರ್ಲ್ಡ್​​ಕಪ್​ ಸೌತ್ ಕೋರಿಯಾ- ಬೆಳ್ಳಿ ಪದಕ

ಇದನ್ನೂ ಓದಿ:ಪಾಂಡ್ಯ ಮೇಲೆ ನತಾಶಾ ಆಪ್ತರಿಂದ ಸ್ಫೋಟಕ ಆರೋಪ.. ಸಂಸಾರದ ಹಳಿ ತಪ್ಪಿದ್ರಾ ಸ್ಟಾರ್ ಕ್ರಿಕೆಟರ್​?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment