newsfirstkannada.com

ಪ್ರಯಾಣಿಕರೇ ದಯವಿಟ್ಟು ಗಮನಿಸಿ.. ಬೆಂಗಳೂರಿಂದ ಸೀದಾ ಅಯೋಧ್ಯೆಗೆ ವಿಮಾನ ಪ್ರಯಾಣ!

Share :

Published January 17, 2024 at 3:36pm

Update January 17, 2024 at 3:37pm

  ಬೆಂಗಳೂರಿಂದ ನೇರ ಅಯೋಧ್ಯೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ

  ಲಕ್ನೋಗೆ ಹೋಗಿ ಬಳಿಕ ಅಯೋಧ್ಯೆಗೆ ರಸ್ತೆ ಮಾರ್ಗವಾಗಿ ಹೋಗಬೇಕಿತ್ತು

  ಬೆಂಗಳೂರು-ಅಯೋಧ್ಯೆ, ಕೋಲ್ಕತ್ತಾ-ಅಯೋಧ್ಯೆ ನೇರ ವಿಮಾನಯಾನ

ಅಯೋಧ್ಯೆ: ರಾಮಜನ್ಮಭೂಮಿಗೆ ತೆರಳುವ ಬೆಂಗಳೂರು ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಇಂದಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಅಯೋಧ್ಯೆ ತೆರಳಬಹುದಾಗಿದೆ. ದೇಶದ ವಿವಿಧ ನಗರಗಳಿಂದ ಅಯೋಧ್ಯೆಗೆ ತೆರಳುವ ವಿಮಾನಸೇವೆಗೆ ಚಾಲನೆ ನೀಡಲಾಗಿದೆ.

ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಬೆಂಗಳೂರು-ಅಯೋಧ್ಯೆ, ಕೋಲ್ಕತ್ತಾ-ಅಯೋಧ್ಯೆ ನೇರ ವಿಮಾನಯಾನಕ್ಕೆ ಹಸಿರು ನಿಶಾನೆ ತೋರಿದರು. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಿಮಾನ ಮೊದಲ ಬಾರಿಗೆ ಬೆಂಗಳೂರಿನಿಂದ ನೇರ ಅಯೋಧ್ಯೆಯನ್ನು ತಲುಪಿದೆ.

ಇದಕ್ಕೂ ಮೊದಲು ಅಯೋಧ್ಯೆಗೆ ತೆರಳುವ ಪ್ರಯಾಣಿಕರು ಉತ್ತರಪ್ರದೇಶದ ಲಕ್ನೋಗೆ ಹೋಗಿ ಬಳಿಕ ಅಯೋಧ್ಯೆಗೆ ರಸ್ತೆ ಮಾರ್ಗವಾಗಿ ಹೋಗಬೇಕಾಗಿತ್ತು. ಈಗ ಬೆಂಗಳೂರಿನಿಂದ ಸೀದಾ ಅಯೋಧ್ಯೆಗೆ ವಿಮಾನಯಾನ ಸೇವೆ ಆರಂಭವಾಗಿದೆ. ಮೊದಲ ವಿಮಾನದಲ್ಲಿ ಅಯೋಧ್ಯೆಗೆ ಬಂದ ಬೆಂಗಳೂರು ಪ್ರಯಾಣಿಕರು ಅಯೋಧ್ಯೆ ತಲುಪಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಯ್ಯೋ.. 1,265 ಕೆ.ಜಿ ತೂಕದ ಲಾಡು! ಅಯೋಧ್ಯೆಗೆ ಒಂದೇ ದಿನದಲ್ಲಿ ತಯಾರಾಯ್ತು ಈ ನೈವೇದ್ಯ!

ಇದುವರೆಗೂ ದೆಹಲಿ, ಮುಂಬೈನಿಂದ ಅಯೋಧ್ಯೆಗೆ ನೇರ ವಿಮಾನ ಸಂಚಾರದ ವ್ಯವಸ್ಥೆ ಇತ್ತು. ಈಗ ದಕ್ಷಿಣ, ಪೂರ್ವ ಭಾಗದಿಂದ ಅಯೋಧ್ಯೆಗೆ ಸಂಚರಿಸುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಕ್ಕೆ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಚಾಲನೆ ನೀಡಿದ್ದಾರೆ.

ವಿಮಾನದ ಟಿಕೆಟ್ ದರ ಎಷ್ಟು?
ಬೆಂಗಳೂರಿನಿಂದ ಈಗಾಗಲೇ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಯೋಧ್ಯೆ ತಲುಪಿದೆ. ಇನ್ಮುಂದೆ ಅಯೋಧ್ಯೆಗೆ ಪ್ರಯಾಣ ಮಾಡುವವರು ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ನಾಳೆ, ನಾಡಿದ್ದು ಟಿಕೆಟ್ ಬುಕ್ ಮಾಡುವವರಿಗೆ 14ರಿಂದ 19 ಸಾವಿರದವರೆಗೆ ಟಿಕೆಟ್ ದರ ಇರಲಿದೆ. ಜನವರಿ 22ರ ಬಳಿಕ ಟಿಕೆಟ್ ದರ 6ರಿಂದ 8 ಸಾವಿರ ನಿಗದಿಯಾಗುವ ಸಾಧ್ಯತೆ ಇದೆ.

ಬರೀ ವಿಮಾನವಷ್ಟೇ ಅಲ್ಲ ವಿಶೇಷ ರೈಲು ಸಿಗಲಿದೆ
ವಿಮಾನದ ಜೊತೆಗೆ ಭಾರತೀಯ ರೈಲ್ವೆ ಇಲಾಖೆ ಅಯೋಧ್ಯೆಗೆ ತೆರಳುವ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ. ಇದೇ ಜನವರಿ 22 ರಿಂದ ಅಯೋಧ್ಯೆಗೆ ಅಸ್ತಾ ವಿಶೇಷ ರೈಲು ಓಡಿಸಲು ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಈ ವಿಶೇಷ ರೈಲುಗಳು ದೇಶದ 66 ವಿವಿಧ ಭಾಗಗಳಿಂದ ಸಂಚರಿಸಲಿದೆ. ದೆಹಲಿಯ ನಾಲ್ಕು ರೈಲ್ವೇ ನಿಲ್ದಾಣ, ತಮಿಳುನಾಡಿನ 9 ರೈಲ್ವೇ ನಿಲ್ದಾಣದಿಂದ ಹೊರಡುವ ರೈಲುಗಳು ಹೊರಡಲಿದೆ. ಕರ್ನಾಟಕದ ಬೆಂಗಳೂರು, ಮೈಸೂರಿನಿಂದ ಮಹಾರಾಷ್ಟ್ರದ 7 ರೈಲು ನಿಲ್ದಾಣದಿಂದ ಅಯೋಧ್ಯೆಗೆ ವಿಶೇಷ ರೈಲುಗಳ ಸಂಚಾರ ಮಾಡಲಿವೆ.

ರೌಂಡ್ ಟ್ರಿಪ್‌ಗೆ ಟಿಕೆಟ್ ಬುಕ್ ಮಾಡಲು ರೈಲ್ವೇ ಇಲಾಖೆಯಿಂದ ಅವಕಾಶ ಮಾಡಿಕೊಡಲಾಗಿದೆ. ರೈಲಿನ ಬಗ್ಗೆ ಭದ್ರತೆಯ ಕಾರಣದಿಂದ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್‌ನಲ್ಲಿ ಈ ಮಾಹಿತಿ ಸಿಗಲ್ಲ. ಐಆರ್‌ಸಿಟಿಸಿ ಮೂಲಕ ರೈಲ್ವೇ ಟಿಕೆಟ್ ಬುಕ್ಕಿಂಗ್ ಮಾಡಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ಪ್ರಯಾಣಿಕರೇ ದಯವಿಟ್ಟು ಗಮನಿಸಿ.. ಬೆಂಗಳೂರಿಂದ ಸೀದಾ ಅಯೋಧ್ಯೆಗೆ ವಿಮಾನ ಪ್ರಯಾಣ!

https://newsfirstlive.com/wp-content/uploads/2024/01/Bangalore-to-Ayodhya-Airport.jpg

Load More