newsfirstkannada.com

PHOTOS: ಅಯೋಧ್ಯೆ ರಾಮಮಂದಿರದ ಗರ್ಭಗುಡಿ, ಪ್ರಾಕಾರದ ಲೇಟೆಸ್ಟ್ ಫೋಟೋ ಬಿಡುಗಡೆ

Share :

Published January 18, 2024 at 2:00pm

Update January 18, 2024 at 2:11pm

    ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಫೋಟೋ ರಿಲೀಸ್

    ಗರ್ಭಗುಡಿಯಲ್ಲಿ ಇಂದೇ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಆರಂಭ

    ಅಯೋಧ್ಯೆ ರಾಮಮಂದಿರದ ಸ್ಟಾಂಪ್ ಬಿಡುಗಡೆ ಮಾಡಿದ ಪ್ರಧಾನಿ

ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರದ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ರಾಮಮಂದಿರದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿಸಲಿದ್ದು, ರಾಮಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ದೈವಿಕ ನಗರಿ ಅಯೋಧ್ಯೆ ಸಕಲ ರೀತಿಯಲ್ಲೂ ಸಜ್ಜಾಗಿದೆ.

ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಲೇಟೆಸ್ಟ್ ಫೋಟೋಗಳನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿ ರಾಮಮಂದಿರದ ಗರ್ಭಗುಡಿಯ ದೃಶ್ಯವನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಪಾರ್ಲೆ-ಜಿ ಬಿಸ್ಕೆಟ್​ನಿಂದ ಅರಳಿದ ರಾಮ ಮಂದಿರ! ಈ ಪ್ರತಿಕೃತಿಗೆ 20 ಕೆಜಿ ಬಿಸ್ಕೆಟ್​ ಬಳಸಿದ ಭಕ್ತ

ಇದರ ಜೊತೆಗೆ ಅಯೋಧ್ಯೆಯ ರಾಮ ಮಂದಿರದ ಪ್ರಾಕಾರದ ಫೋಟೋಗಳನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ರಿಲೀಸ್ ಮಾಡಿದೆ.

ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಇಂದೇ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 20 ಇಂಚು ಎತ್ತರದ ವೇದಿಕೆಯ ಮೇಲೆ 51 ಇಂಚು ಎತ್ತರ ಇರುವ ರಾಮಲಲ್ಲಾ ‌ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಬಳಿಕ ವಿವಿಧ ಪೂಜೆ, ಪುನಸ್ಕಾರಗಳನ್ನು ಅರ್ಚಕರು ನೆರವೇರಿಸಲಿದ್ದಾರೆ. ಗಣೇಶ ಅಂಬಿಕಾ ಪೂಜೆ, ವರುಣ ಪೂಜೆ, ಚರ್ತುವೇದತಾ ಪುಣ್ಯಹವಚನ, ಮಾತೃಕಾಪೂಜಾನ, ಸಪ್ತ ಧೃತಮಾತೃಕಾ ಪೂಜಾ, ಆಯುಷ್ ಮಂತ್ರ ಜಪ, ನಾಂಧಿ ಶ್ರದ್ಧಾ ಸೇರಿದಂತೆ ವಿವಿಧ ಪೂಜೆಗಳು ನೆರವೇರಲಿದೆ.

ರಾಮಮಂದಿರದ ಸ್ಟಾಂಪ್ ಬಿಡುಗಡೆ
ರಾಮಮಂದಿರದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರಾಮಮಂದಿರದ ಸ್ಟಾಂಪ್ ಬಿಡುಗಡೆ ಮಾಡಿದರು. ದೆಹಲಿಯ ಲೋಕಕಲ್ಯಾಣ್ ಮಾರ್ಗದ ನಿವಾಸದಲ್ಲಿ ಪ್ರಧಾನಿ ಮೋದಿ ಅವರು ಶಬರಿ, ಜಟಾಯು, ಹನುಮಾನ್, ಗಣೇಶ ಸ್ಟಾಂಪ್‌ ಅನ್ನು ಬಿಡುಗಡೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ಅಯೋಧ್ಯೆ ರಾಮಮಂದಿರದ ಗರ್ಭಗುಡಿ, ಪ್ರಾಕಾರದ ಲೇಟೆಸ್ಟ್ ಫೋಟೋ ಬಿಡುಗಡೆ

https://newsfirstlive.com/wp-content/uploads/2024/01/Ramamandira-Garbagruha.jpg

Load More