ಅಯೋಧ್ಯ ರಾಮಮಂದಿರಕ್ಕೆ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ
ಯುಪಿ ಪ್ರವಾಸಿಗರ ಸಂಖ್ಯೆಯಲ್ಲಿ ಕಾಶಿಯನ್ನು ಹಿಂದಿಕ್ಕಿದ ರಾಮಲಲ್ಲಾ
ಕಳೆದ ಆರು ತಿಂಗಳಲ್ಲಿ ರಾಮನ ದರ್ಶನ ಪಡೆದು ಪುನೀತರಾದವರೆಷ್ಟು?
ಲಖನೌ: ಉತ್ತರಪ್ರದೇಶ ಅಂದ ಕೂಡಲೇ ನಮಗೆ ನೆನಪಾಗುವುದು ವಿಶ್ವದ ಅತ್ಯಂತ ಪುರಾತನ ನಗರಿಯಾಗಿರುವ ಕಾಶಿ. ಕಾಶಿಗೆ ವರ್ಷಕ್ಕೆ ಲಕ್ಷಾಂತರ, ಕೋಟ್ಯಾಂತರ ಭಕ್ತರು ಬಂದು ವಿಶ್ವನಾಥನ ದರ್ಶನ ಪಡೆಯುತ್ತಾರೆ. ಸದ್ಯ ವಾರಣಸಿಯನ್ನು ಹಿಂದಿಕ್ಕಿದೆ ಅಯೋಧ್ಯ ರಾಮಮಂದಿರ, ಈ ವರ್ಷದ ಆರಂಭಿಕ ಆರು ತಿಂಗಳಲ್ಲಿ 11 ಕೋಟಿ ದೇಶಿ ಹಾಗೂ ವಿದೇಶಿ ಭಕ್ತರು ಅಯೋಧ್ಯ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ಅಯೋಧ್ಯಗೆ ಹೋಲಿಸಿದರೆ ಕಾಶಿಗೆ ಭೇಟಿ ಕೊಟ್ಟ ಭಕ್ತರ ಸಂಖ್ಯೆ 4.61 ಕೋಟಿಯಷ್ಟಿದೆ.
ಇದನ್ನೂ ಓದಿ: ಪ್ರಧಾನಿ ಮನೆಗೆ ಬಂದ ಹೊಸ ಅತಿಥಿ.. ಮೋದಿ ಕೆನ್ನೆಗೆ ಮುತ್ತಿಕ್ಕಿದ ದೀಪಜ್ಯೋತಿ
ಉತ್ತರಪ್ರದೇಶದ ಪ್ರವಾಸೋದ್ಯಮ ಇಲಾಖೆ ಈ ಒಂದು ಅಂಕಿಅಂಶವನ್ನು ಬಹಿರಂಗಗೊಳಿಸಿದೆ. ರಾಜ್ಯಕ್ಕೆ ಕಳೆದ ಆರು ತಿಂಗಳಲ್ಲಿ ಭೇಟಿ ನೀಡಿದ ಪ್ರವಾಸಿಗರ ಅಂಕಿ ಅಂಶ ತೆರೆದಿಟ್ಟಿರುವ ಪ್ರವಾಸೋದ್ಯಮ ಇಲಾಖೆ, ಈ ಆರು ತಿಂಗಳಲ್ಲಿ ಅಯೋಧ್ಯ ಹಾಗೂ ಕಾಶಿ ಸೇರಿಸಿ ಒಟ್ಟು ಉತ್ತರಪ್ರದೇಶಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಒಟ್ಟಾರೆಯಾಗಿ 33 ಕೋಟಿಗೆ ತಲುಪಿದೆ.
ಇದನ್ನೂ ಓದಿ: port blair: ಅಂಡಮಾನ್ ನಿಕೋಬಾರ್ ರಾಜಧಾನಿಗೆ ಹೊಸ ನಾಮಕರಣ; ಏನಿದರ ವಿಶೇಷ? ಕಾರಣ ಇಲ್ಲಿದೆ!
ಒಟ್ಟು 32 ಕೋಟಿ 98 ಲಕ್ಷ 18 ಸಾವಿರದ 122 ಮಂದಿ ಭಕ್ತರು ಈ ಭಾರಿ ಉತ್ತರಪ್ರದೇಶದ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. 2022ಕ್ಕೆ ಹೋಲಿಕೆ ಮಾಡಿ ನೋಡಿದಾಗ, ಉತ್ತರಪ್ರದೇಶಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. 2022ರ ಇಡೀ ವರ್ಷದಲ್ಲಿ ಉತ್ತರಪ್ರದೇಶಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ ಒಟ್ಟು 31.86 ಕೋಟಿ ಎಂದು ಉತ್ತರಪ್ರದೇಶದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆಯ ಸಚಿವ ಜೈವೀರ್ ಸಿಂಗ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ