ಅಂಡಮಾನ್ ನಿಕೋಬಾರ್ ರಾಜಧಾನಿಯ ಹೆಸರು ಬದಲಿಸಿದ ಕೇಂದ್ರ ಸರ್ಕಾರ
ವಸಾಹತುಶಾಹಿ ಗುರುತುಗಳ ಸಂಕೋಲೆಯಿಂದ ಕಳಚಿಕೊಳ್ಳಲು ಈ ದಿಟ್ಟ ನಿರ್ಧಾರ
ರಾಜಪಥ್ ಅನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಿದ್ದ ಮೋದಿ ಸರ್ಕಾರ
ನವದೆಹಲಿ: ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಗುಲಾಮಿತನ ಸಂಕೇತದ ಒಂದೊಂದೇ ಸಂಕೋಲೆಗಳನ್ನು ಕಳಚಿ ಎಸೆಯುತ್ತಿದೆ. ಬ್ರಿಟಿಷ್ ಆಡಳಿತದ ಕಾಲದಿಂದಲೂ ಈ ದೇಶದಲ್ಲಿ ಅನೇಕ ಗುಲಾಮಿತನದ ಸಂಕೇತಗಳಿದ್ದವು. ಅದರಲ್ಲಿ ರಾಜಪಥ್ ಕೂಡ ಒಂದಾಗಿತ್ತು ರಾಜಪಥ್ ಹೆಸರನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಿದ್ದ ಮೋದಿ ಸರ್ಕಾರ ಈಗ ಅಂಡಮಾನ್ ನಿಕೋಬಾರ್ ರಾಜಧಾನಿಯಾಗಿರುವ ಪೋರ್ಟ್ಬ್ಲೇರ್ ಹೆಸರನ್ನು ಕೂಡ ಮರುನಾಮಕರಣ ಮಾಡುತ್ತಿದೆ.
ಇದನ್ನೂ ಓದಿ: 6 ತಿಂಗಳ ಬಳಿಕ ಅರವಿಂದ್ ಕೇಜ್ರಿವಾಲ್‌ಗೆ ಬಿಡುಗಡೆ ಭಾಗ್ಯ; ಪಂಜರದ ಗಿಳಿಗೆ ಹಾಕಿರೋ ಷರತ್ತುಗಳೇನು ಗೊತ್ತಾ?
ಈ ಬಗ್ಗೆ ಖುದ್ದು ಅಮಿತ್ ಶಾ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.ಪ್ರಧಾನಿ ಮೋದಿಯವರ ದೂರದೃಷ್ಟಿಯ ಪ್ರೇರಣೆಯಿಂದ ಹಾಗೂ ವಸಹಾತುಶಾಹಿ ಸಂಕೋಲೆಗಳಿಂದ ಮುಕ್ತವಾಗುವು ಉದ್ದೇಶದಿಂದ ಇಂದು ನಾವು ಅಂಡಮಾನ್ ನಿಕೋಬಾರ್ ರಾಜಧಾನಿ ಪೋರ್ಟ್ಬ್ಲೇರ್ನ್ನು ಶ್ರೀವಿಜಯಪುರಂ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದೇವೆ.
ಇದನ್ನೂ ಓದಿ: ಬ್ಯಾನ್ ಆದ್ರೂ ಭಾರತಕ್ಕೆ ಕಳ್ಳದಾರಿಯಲ್ಲಿ ಬರುತ್ತಿದೆ ಚೀನಾ ಬೆಳ್ಳುಳ್ಳಿ.. ಇದನ್ನು ತಿಂದ್ರೆ ಕ್ಯಾನ್ಸರ್ ಬರುತ್ತೆ ಹುಷಾರ್!
ಈ ಹಿಂದೆ ಇದ್ದಿದ್ದ ಹೆಸರು ವಸಹಾತುಶಾಹಿಯ ಗುರುತಾಗಿತ್ತು. ಶ್ರೀವಿಜಯಪುರಂ ಸ್ವಾತಂತ್ರ್ಯ ಸಂಗ್ರಾಮದ ಹಲವು ಗೆಲುವುಗಳ ಗುರುತು ಹಾಗೂ ಅಂಡಮಾನ್ ನಿಕೋಬಾರ್ ಸ್ವಾತಂತ್ರ್ಯ ಹೋರಾಟದಲ್ಲಿ ಬಹುಪ್ರಮುಖ ಪಾತ್ರವಹಿಸಿದೆ. ಸ್ವಾತಂತ್ರ್ಯ ಸಂಗ್ರಾಮ ಹಾಗೂ ಭಾರತದ ಇತಿಹಾಸದಲ್ಲಿ ಅಂಡಮಾನ್ ನಿಕೋಬಾರ್ ಸಾಟಿಯಿಲ್ಲದ ಸ್ಥಾನ ಪಡೆದಿದೆ. ಈ ಹಿಂದೆ ಚೋಳ ಸಾಮ್ರಾಜ್ಯದ ನೌಕಾನೆಲೆಯಾಗಿ ಸೇವೆ ಸಲ್ಲಿಸಿದ್ದ ಈ ನೆಲ ಈಗ ನಮಗೆ ಅಭಿವೃದ್ಧಿಯ ಆಶಾಭಾವದ ನೆಲೆಯಾಗಿ ನಿಂತಿದೆ.
Inspired by the vision of PM @narendramodi Ji, to free the nation from the colonial imprints, today we have decided to rename Port Blair as “Sri Vijaya Puram.”
While the earlier name had a colonial legacy, Sri Vijaya Puram symbolises the victory achieved in our freedom struggle…
— Amit Shah (@AmitShah) September 13, 2024
ಇದೇ ನೆಲದಲ್ಲಿ ನಮ್ಮ ದೇಶದ ತಿರಂಗಾ ಮೊಟ್ಟ ಮೊದಲ ಬಾರಿಗೆ ಗಗನದಲ್ಲಿ ಪಟಪಟಿಸಿದ್ದು ನೇತಾಜಿ ಸುಭಾಷ್ ಚಂದ್ರ ಭೋಸ್ ಅವರಿಂದ. ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ವೀರ ಸಾವರ್ಕರ್ ಕರಿನೀರಿನ ಶಿಕ್ಷೆ ಅನುಭವಿಸಿದ ಜೈಲು ಕೂಡ ಇಲ್ಲಿಯೇ ಇದೆ ಎಂದು ಪೋಸ್ಟ್ ಮಾಡಿದ್ದಾರೆ. ಅಂಡಮಾನ್ ನಿಕೋಬಾರ್ನ ರಾಜಧಾನಿ ಇನ್ಮುಂದೆ ಶ್ರೀವಿಜಯಪುರಂ ಎಂದು ಕರೆಸಿಕೊಳ್ಳಲಿದೆ. ಈ ಮೂಲಕ ದೇಶದ ಮತ್ತೊಂದು ವಸಾಹತುಶಾಹಿಯ ಸಂಕೇತವೊಂದು ಕಳಚಿಬಿದ್ದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ