ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಸುಪ್ರೀಂಕೋರ್ಟ್
ದೆಹಲಿ ಅಬಕಾರಿ ನೀತಿ ಪರಿಷ್ಕರಣೆ ಕೇಸ್‌ನಲ್ಲಿ ಕೇಜ್ರಿವಾಲ್ ಬಂಧನ
ತಿಹಾರ್ ಜೈಲಿನಿಂದ ಹೊರ ಬಂದರೂ ದೆಹಲಿ ಸಿಎಂಗೆ ತಪ್ಪದ ಸಂಕಷ್ಟ!
ನವದೆಹಲಿ: ಕೊನೆಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆ ಆಗುತ್ತಿದ್ದಾರೆ. ಸತತ 6 ತಿಂಗಳ ಸೆರೆವಾಸದ ಬಳಿಕ ಸುಪ್ರೀಂಕೋರ್ಟ್ ಕೇಜ್ರಿವಾಲ್ ಅವರಿಗೆ ಜಾಮೀನು ಕರುಣಿಸಿದೆ. ಶೀಘ್ರವೇ ದೆಹಲಿ ಸಿಎಂ ತಿಹಾರ್ ಜೈಲಿನಿಂದ ಹೊರ ಬರುತ್ತಾ ಇದ್ದು, ಆಪ್ ಆದ್ಮಿ ಪಕ್ಷದ ನಾಯಕರು ಅದ್ಧೂರಿ ಸ್ವಾಗತ ಕೋರಲು ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ: ಜೈಲಿನಿಂದ ಬಂದ ಬೆನ್ನಲ್ಲೇ 10 ಗ್ಯಾರಂಟಿ ಘೋಷಣೆ ಮಾಡಿದ ಕೇಜ್ರಿವಾಲ್.. ಇವೆಲ್ಲ ಉಚಿತ.. ಉಚಿತ..!
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 10 ಲಕ್ಷ ರೂಪಾಯಿಯ 2 ಮುಚ್ಚಳಿಕೆ ಬರೆದುಕೊಡಲು ಸೂಚನೆ ನೀಡಬೇಕು. ಇದರ ಜೊತೆಗೆ ಕೆಲವೊಂದು ಷರತ್ತುಗಳೊಂದಿಗೆ ಸುಪ್ರೀಂಕೋರ್ಟ್ ಸಿಬಿಐ ದಾಖಲಿಸಿದ್ದ ಕೇಸ್‌ನಲ್ಲಿ ಜಾಮೀನು ಕರುಣಿಸಿದೆ.
ದೆಹಲಿ ಅಬಕಾರಿ ನೀತಿ ಪರಿಷ್ಕರಣೆ ಕೇಸ್‌ನಲ್ಲಿ ಕಳೆದ ಮಾರ್ಚ್ 21 ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಇಷ್ಟು ದಿನ ತಿಹಾರ್ ಜೈಲಿನಲ್ಲಿದ್ದರೂ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿರಲಿಲ್ಲ. ಕೇಜ್ರಿವಾಲ್ ಅವರಿಗೆ ಜಾಮೀನು ಘೋಷಣೆ ಮಾಡುತ್ತಿದ್ದಂತೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಎಎಪಿ ಮುಖಂಡರು ಸಂಭ್ರಮ ಆಚರಣೆ ಆರಂಭಿಸಿದ್ದಾರೆ. ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ, ಸಂಸದ ರಾಘವ್ ಚಡ್ಡಾ ಅವರು ಸತ್ಯಮೇವ ಜಯತೆ. ವೆಲ್ ಕಮ್ ಬ್ಯಾಕ್ ಅರವಿಂದ್ ಕೇಜ್ರಿವಾಲ್ ಎಂದು ಟ್ವೀಟ್ ಸಂಭ್ರಮಿಸಿದ್ದಾರೆ.
ಕೇಜ್ರಿವಾಲ್‌ಗೆ ಹಾಕಿರೋ ಷರತ್ತುಗಳೇನು?
6 ತಿಂಗಳ ಬಳಿಕ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಏನೋ ಸಿಕ್ಕಿದೆ. ಜಾಮೀನಿನ ಮೇಲೆ ಕೇಜ್ರಿವಾಲ್ ಅವರು ಜೈಲಿನಿಂದ ಬಿಡುಗಡೆ ಆಗುತ್ತಿದ್ದಾರೆ. ಆದ್ರೆ ಸುಪ್ರೀಂಕೋರ್ಟ್ ಕೆಲವು ಕಠಿಣ ಷರತ್ತುಗಳನ್ನು ದೆಹಲಿ ಸಿಎಂಗೆ ವಿಧಿಸಿದೆ.
ಇದನ್ನೂ ಓದಿ: ಜೈಲಿನಿಂದ ರಿಲೀಸ್ ಆದ ಕೇಜ್ರಿವಾಲ್‌ಗೆ ಆರತಿ ಬೆಳಗಿ ಸ್ವಾಗತ.. ಬರ್ತಿದ್ದಂತೆಯೇ ಕೊಟ್ಟ ಹೇಳಿಕೆ ಏನು?
ಜಾಮೀನಿನ ಮೇಲೆ ಬಿಡುಗಡೆಯಾಗಲಿರುವ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಸಿಎಂ ಕಚೇರಿಗೆ ಹೋಗುವಂತೆ ಇಲ್ಲ. ದೆಹಲಿ ಸಿಎಂ ಅಧಿಕಾರ ಬಳಸಿ ಯಾವುದೇ ಕಡತಗಳಿಗೆ ಸಹಿ ಮಾಡುವಂತೆ ಇಲ್ಲ ಅನ್ನೋ ಖಡಕ್ ಸೂಚನೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ