newsfirstkannada.com

×

ಅಯೋಧ್ಯೆಯ ಹನುಮಾನ್ ಮಂದಿರದ ಅರ್ಚಕನ ಕತ್ತು ಸೀಳಿ ಬರ್ಬರ ಕೊಲೆ; ಬೆಚ್ಚಿಬಿದ್ದ ಯೋಗಿ ನಾಡು..!

Share :

Published October 19, 2023 at 2:06pm

Update October 19, 2023 at 2:08pm

    ರಾಮಜನ್ಮಭೂಮಿ ಸಂಕೀರ್ಣದ ಕೊಠಡಿಯಲ್ಲಿ ಶವ ಪತ್ತೆ

    ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ

    ಪೊಲೀಸರಿಂದ ತನಿಖೆ ಶುರು, ಓರ್ವ ಶಂಕಿತ ಅರೆಸ್ಟ್

ಅಯೋಧ್ಯೆಯ ಹನುಮಾನ್‌ಗರ್ಹಿ (Hanumangarhi) ದೇವಾಲಯದ ಅರ್ಚಕನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಇಡೀ ಉತ್ತರ ಪ್ರದೇಶ ಬೆಚ್ಚಿಬಿದ್ದಿದೆ.

44 ವರ್ಷದ ರಾಮ್ ಸಹ್ರೆಯ್ ದಾಸ್ (Ram Sahrey Das) ಅವರ ಭೀಕರವಾಗಿ ಕೊಲೆ ಮಾಡಲಾಗಿದೆ. ಇಂದು ಬೆಳಗ್ಗೆ ರಾಮಜನ್ಮಭೂಮಿ ಸಂಕೀರ್ಣದ ಕೊಠಡಿಯಲ್ಲಿ ಅರ್ಚಕರ ಶವ ಪತ್ತೆಯಾಗಿದೆ. ಕೊಲೆಯಲ್ಲಿ ಇಬ್ಬರು ಆರೋಪಿಗಳ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ಸಂಬಂಧ ಓರ್ವ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬನಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ.. ಪರಿಚಯಸ್ಥರೇ ಕೊಲೆ ಮಾಡಿರುವ ಶಂಕೆ ಇದೆ. ತನಿಖೆ ಆರಂಭಿಸಿರುವ ಅಧಿಕಾರಿಗಳು, ಅರ್ಚಕರ ಕೋಣೆಗೆ ಬಲವಂತವಾಗಿ ಯಾರೂ ಪ್ರವೇಶ ಮಾಡಿದಂತೆ ಕಂಡು ಬಂದಿಲ್ಲ ಎಂದು ಅಯೋಧ್ಯೆ ಎಸ್‌ಎಸ್‌ಪಿ ರಾಜ್ ಕರಣ್ ನಯ್ಯರ್ ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಿ ಇಬ್ಬರು ಶಿಷ್ಯರೊಂದಿಗೆ ಹನುಮಾನ್‌ ದೇವಸ್ಥಾನದ ಪಕ್ಕದ ಕೋಣೆಯಲ್ಲಿ ತಂಗಿದ್ದರು. ಈ ಪ್ರಕರಣದಲ್ಲಿ ಇಬ್ಬರೂ ಪ್ರಮುಖ ಆರೋಪಿಗಳಾಗಿದ್ದಾರೆ.

ಒಬ್ಬ ಶಂಕಿತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಇನ್ನೊಬ್ಬ ನಾಪತ್ತೆಯಾಗಿದ್ದಾನೆ. ಎರಡನೇ ಶಂಕಿತನ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಪೊಲೀಸ್ ಅಧಿಕಾರಿಗಳಿಗೆ ಬೆಳಗ್ಗೆ 7 ಗಂಟೆ ಸುಮಾರಿಗೆ ಘಟನೆ ಬಗ್ಗೆ ಮಾಹಿತಿ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯ ಹನುಮಾನ್ ಮಂದಿರದ ಅರ್ಚಕನ ಕತ್ತು ಸೀಳಿ ಬರ್ಬರ ಕೊಲೆ; ಬೆಚ್ಚಿಬಿದ್ದ ಯೋಗಿ ನಾಡು..!

https://newsfirstlive.com/wp-content/uploads/2023/10/Hanumangarhi-Temple.jpg

Load More