newsfirstkannada.com

‘ಪಾಕ್​ ಜೆರ್ಸಿ ಮೇಲೆ ವಿರಾಟ್ ಕೊಹ್ಲಿ ಹೆಸರು ತುಂಬಿ ಹೋಗುತ್ತೆ’ -ಮಾಜಿ ಪ್ಲೇಯರ್ ಹೀಗಂದಿದ್ಯಾಕೆ?

Share :

Published June 9, 2024 at 1:48pm

  ಎಲ್ಲರು ಅಚ್ಚರಿ ಪಡುವಂತ ಹೇಳಿಕೆ ನೀಡಿದ ಮಾಜಿ ಪ್ಲೇಯರ್

  ಇಂದು ರಾತ್ರಿ 8 ಗಂಟೆಗೆ ನಡೆಯಲಿರೋ ಹೈವೋಲ್ಟೇಜ್ ಮ್ಯಾಚ್

  ಪಾಕ್ ವಿರುದ್ಧದ ಪಂದ್ಯ ವೀಕ್ಷಣೆಗೆ ಕಾಯುತ್ತಿರುವ ಅಭಿಮಾನಿಗಳು​

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್​ ಕೊಹ್ಲಿಗೆ ಪಾಕಿಸ್ತಾನದಲ್ಲಿ ಅತ್ಯಂತ ದೊಡ್ಡ ಫ್ಯಾನ್ಸ್​ ಫಾಲೋಯಿಂಗ್ ಇದೆ. ಇಲ್ಲಿವರೆಗೆ ಪಾಕ್​ನಲ್ಲಿ ಒಂದು ಪಂದ್ಯವನ್ನು ಆಡದ ಕೊಹ್ಲಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಪ್ಲೇಯರ್ ಅಜರ್ ಅಲಿ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಗೆಲ್ತಿವೋ, ಬಿಡ್ತಿವೋ ಅನ್ನೋದು ಸೆಕೆಂಡ್ರಿ.. ಪಾಕಿಸ್ತಾನದ ವಿರುದ್ಧ ಸೋಲಬಾರ್ದು; ಕುತೂಹಲ ಕೆರಳಿಸಿದ ಮ್ಯಾಚ್!

ಪಾಕಿಸ್ತಾನದ ಮಾಜಿ ಪ್ಲೇಯರ್ ಅಜರ್ ಅಲಿ

ಪಾಕಿಸ್ತಾನದ ರಾವಲ್ಪಿಂಡಿ, ಮುಲ್ತಾನ್, ಲಾಹೋರ್ ಹಾಗೂ ಕರಾಚಿ ಸೇರಿದಂತೆ ಯಾವುದೇ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ಅಖಾಡಕ್ಕೆ ಇಳಿದರೆ ಸ್ಟೇಡಿಯಂ ಎಲ್ಲ ಹಸಿರು ಜರ್ಸಿಯಿಂದ ತುಂಬಿ ಹೋಗುತ್ತದೆ. ಆದರೆ ಆ ಹಸಿರು ಜೆರ್ಸಿ ಹಿಂದೆ ಬಾಬರ್ ಅಜಂ, ಶಾಹೀನ್ ಆಫ್ರಿದಿ ಎಂದು ಪಾಕ್ ಆಟಗಾರರ ಹೆಸರು ಇರುವುದಿಲ್ಲ. ಬದಲಿಗೆ ವಿರಾಟ್​ ಕೊಹ್ಲಿ ಹೆಸರು ಹಾಗೂ 18 ನಂಬರ್ ಇರುತ್ತದೆ ಎಂದು ಅಜರ್ ಅಲಿ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಬಿಜೆಪಿ ಮುಖಂಡ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ಸಾವು

ಪಾಕಿಸ್ತಾನ ಸೂಪರ್ ಲೀಗ್ (PSL) ನಡೆಯುವಾಗಲೂ ಸಾಕಷ್ಟು ಅಭಿಮಾನಿಗಳು ವಿರಾಟ್​ ಕೊಹ್ಲಿ ಹೆಸರಿರುವ ಜರ್ಸಿಗಳನ್ನು ಧರಿಸಿಕೊಂಡು ಬಂದಿದ್ದರು. ಕೊಹ್ಲಿ ಹೆಸರು ಇರುವ ಪಾಕಿಸ್ತಾನದ ಜೆರ್ಸಿ ಹಾಕಿಕೊಂಡು ಫ್ಯಾನ್ಸ್​ ಅಭಿಮಾನ ಮೆರೆಯುತ್ತಿರುತ್ತಾರೆ. ಹೀಗಾಗಿ ಒಂದು ವೇಳೆ ಪಾಕಿಸ್ತಾನದ ಗ್ರೌಂಡ್​​ನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದರೆ ಇಡೀ ಸ್ಟೇಡಿಯಂ ಎಲ್ಲ ವಿರಾಟ್ ಕೊಹ್ಲಿ ಹೆಸರಿರುವ ಪಾಕಿಸ್ತಾನದ ಜೆರ್ಸಿಯಿಂದ ತುಂಬಿ ಹೋಗುತ್ತದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಪಾಕ್​ ಜೆರ್ಸಿ ಮೇಲೆ ವಿರಾಟ್ ಕೊಹ್ಲಿ ಹೆಸರು ತುಂಬಿ ಹೋಗುತ್ತೆ’ -ಮಾಜಿ ಪ್ಲೇಯರ್ ಹೀಗಂದಿದ್ಯಾಕೆ?

https://newsfirstlive.com/wp-content/uploads/2024/06/VIRAT_KOHLI_JERSY.jpg

Load More