newsfirstkannada.com

ಗೆಲ್ತಿವೋ, ಬಿಡ್ತಿವೋ ಅನ್ನೋದು ಸೆಕೆಂಡ್ರಿ.. ಪಾಕಿಸ್ತಾನದ ವಿರುದ್ಧ ಸೋಲಬಾರ್ದು; ಕುತೂಹಲ ಕೆರಳಿಸಿದ ಮ್ಯಾಚ್!

Share :

Published June 9, 2024 at 11:36am

Update June 9, 2024 at 11:37am

  ನಸ್ಸೌ ರಣರಂಗದಲ್ಲಿ ಇಂದು ಬದ್ಧವೈರಿಗಳ ನಡುವೆ ಬಿಗ್​ ಬ್ಯಾಟಲ್​

  ಅಂದು ಅಹ್ಮದಾಬಾದ್​ನಲ್ಲಿ ಭಾರತದ ಆಟಕ್ಕೆ ಪಾಕಿಸ್ತಾನ​​ ಉಡೀಸ್​

  8 ತಿಂಗಳ ಬಳಿಕ ಮತ್ತೆ ವಿಶ್ವಕಪ್​ನಲ್ಲಿ ಬದ್ಧವೈರಿಗಳ ಮುಖಾಮುಖಿ

T20 ವಿಶ್ವಕಪ್​ ಟೂರ್ನಿಯಲ್ಲಿ ಇಂದು ನಡೀತಾ ಇರೋದು ಸೂಪರ್​ ಸಂಡೇಯ ಸೂಪರ್​ ಕದನ. ಈ ಒಂದು ಪಂದ್ಯ ನೋಡಲು ಇಡೀ ಕ್ರಿಕೆಟ್​ ಲೋಕ ತುದಿಗಾಲಲ್ಲಿ ನಿಂತಿದೆ. ಯಾಕಂದ್ರೆ, ಇಂದು ರಣರಂಗದಲ್ಲಿ ಎದುರು ಬದುರಾಗಿ ಹೋರಾಡ್ತಿರೋದು ಟೀಮ್​ ಇಂಡಿಯಾ ಹಾಗೂ ಪಾಕಿಸ್ತಾನ. ಈ ಹೈವೋಲ್ಟೇಜ್​ ಕದನದ ಫೀವರ್, ನಿರೀಕ್ಷೆಯೂ ಮಾಡದ ರೀತಿಯಲ್ಲಿ​ ಕ್ರಿಕೆಟ್​ ಲೋಕವನ್ನ ಆವರಿಸಿದೆ.

ವಿಶ್ವ ಕ್ರಿಕೆಟ್​​ ಲೋಕವೇ ಕುತೂಹಲದ ಕಣ್ಣಿನಿಂದ ಕಾಯ್ತಿರೋ ಪಂದ್ಯದ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ನ್ಯೂಯಾರ್ಕ್​​ನ ನಸ್ಸೌ ರಣರಂಗದಲ್ಲಿ ಇಂದು ಬದ್ಧವೈರಿಗಳ ನಡುವೆ ಬಿಗ್​ ಬ್ಯಾಟಲ್​ ನಡೆಯಲಿದೆ. ಬದ್ಧವೈರಿಗಳೆಂದೆ ಬಿಂಬಿತವಾಗಿರೋ ಟೀಮ್​ ಇಂಡಿಯಾ- ಪಾಕಿಸ್ತಾನ ತಂಡಗಳು ತೊಡೆತಟ್ಟಲು ಸಜ್ಜಾಗಿವೆ. ಇಡೀ T20 ವಿಶ್ವಕಪ್​​ ಟೂರ್ನಿಯದ್ದು ಒಂದು ತೂಕವಾದ್ರೆ, ಇಂದಿನ ಪಂದ್ಯದ್ದೇ ಒಂದು ತೂಕ. ನೋಡೋಕಷ್ಟೆ ಇದು ಕ್ರಿಕೆಟ್​ ಪಂದ್ಯ ಆದ್ರೆ, ಅಕ್ಷರಶಃ ವಾರ್ ಸ್ವರೂಪ ಪಡೆದಿರುತ್ತೆ.​

ಟೀಮ್​ ಇಂಡಿಯಾ ಜಯಭೇರಿ ಬಾರಿಸಿತ್ತು

ಅಕ್ಟೋಬರ್​​ 14, 2023. ಕಿಕ್ಕಿರಿದು ತುಂಬಿದ್ದ ಅಹ್ಮದಾಬಾದ್​ ನಮೋ ಮೈದಾನದಲ್ಲಿ ಇಂಡೋ- ಪಾಕ್​ ತಂಡಗಳು ತೊಡೆ ತಟ್ಟಿದ್ವು. ತವರಿನಂಗಳದಲ್ಲಿ ಪಾಕ್​ ಪಡೆಯನ್ನ ಉಡೀಸ್​ ಮಾಡಿದ್ದ ಟೀಮ್​ ಇಂಡಿಯಾ ಜಯಭೇರಿ ಬಾರಿಸಿತ್ತು. ಅದಾಗಿ ಸರಿ ಸುಮಾರು 8 ತಿಂಗಳ ಬಳಿಕ ಮತ್ತೆ ಕದನ ಕಣದಲ್ಲಿ ಮುಖಾಮುಖಿ ಆಗ್ತಿದ್ದು, ಪಾಕ್​ಗಿದು ಸೇಡಿನ ಸಮರವಾಗಿದ್ರೆ, ಭಾರತಕ್ಕಿದು ಪ್ರತಿಷ್ಠೆಯ ಸಮರವಾಗಿದೆ. ​

ಗೆಲುವೊಂದೆ ಗುರಿ, ಸೋಲು ಅನ್ನೋ ಪದವನ್ನೇ ಸಹಿಸಲ್ಲ..!

ಉಭಯ ತಂಡಗಳ ಆಟಗಾರರು ಮೈದಾನದಲ್ಲಿ ಫ್ರೆಂಡ್ಲಿ ಆಗೇ ಇರ್ತಾರೆ. ಆದ್ರೆ, ಮೈದಾನ ಹೊರಗೆ ಇರೋ ಅಭಿಮಾನಿಗಳಿಗೆ ಈ ಪಂದ್ಯ ಒಂದು ಯುದ್ಧ. ಪ್ರತಿಷ್ಠೆಯ ಕಾಳಗ. ಸೋಲು ಅನ್ನೋ ಪದವನ್ನೇ ಫ್ಯಾನ್ಸ್​ ಸಹಿಸಲ್ಲ. ಫ್ಯಾನ್ಸ್​ ಪಾಲಿಗೆ ಕ್ರಿಕೆಟ್​ ಫೀಲ್ಡ್​ ಇಲ್ಲಿ ರಣರಂಗವಾದ್ರೆ, ಆಟಗಾರರು ಇಲ್ಲಿ ರಣಕಲಿಗಳು.. ಬ್ಯಾಟ್​ & ಬಾಲ್​ ಇಲ್ಲಿ ಅಸ್ತ್ರಗಳು.. ವಿಶ್ವಕಪ್​ ಗೆಲ್ತಿವೋ, ಬಿಡ್ತಿವೋ ಅನ್ನೋದು ಸೆಕೆಂಡೆರಿ.. ಈ ಪಂದ್ಯದಲ್ಲಿ ಸೋಲಬಾರ್ದು ಅನ್ನೋದು ಉಭಯ ತಂಡಗಳ ಅಭಿಮಾನಿಗಳ ನಿರೀಕ್ಷೆಯಾಗಿರುತ್ತೆ.

ಇದನ್ನೂ ಓದಿ: T20 World Cup; ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಬರೆಯಲಿರೋ ಕಿಂಗ್ ಕೊಹ್ಲಿ.. ರೆಕಾರ್ಡ್ ಯಾವುದು?

ಇಂದು ನಡೆಯೋ ಇಂಡೋ-ಪಾಕ್​ ಕ್ರಿಕೆಟ್​ ಪಂದ್ಯದ ಕ್ರೇಜ್​ ಹೇಗಿದೆ ಅಂದ್ರೆ, ಹಿಂದೆಂದೂ ಕ್ರಿಕೆಟ್​ ಮ್ಯಾಚ್​ ನೋಡದವರೂ ಕೂಡ ಇಂದು ಟಿವಿ ಮುಂದೆ ಕೂರಲು ಸಜ್ಜಾಗಿದ್ದಾರೆ. ಆಡೋ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಈ ಮ್ಯಾಚ್​ನ ಕಿಚ್ಚು ಹಚ್ಚಿದೆ. ಕರ್ನಾಟಕದಲ್ಲಂತೂ ಪಂದ್ಯದ ಆರಂಭಕ್ಕೆ ಕಾತುರತೆ ಹೆಚ್ಚಾಗ್ತಿದೆ.

ಇದನ್ನೂ ಓದಿ: ಭಾರೀ ಮಳೆಯ ಮುನ್ಸೂಚನೆ.. ಜೂನ್ 11ರವರೆಗೆ ಅಲರ್ಟ್​ ಆಗಿರುವಂತೆ ಖಡಕ್ ವಾರ್ನಿಂಗ್

ಪಾಕ್​ ಆಕ್ರಮಿತ ಭಾರತದ ಗಡಿ ವಿವಾದ

ಇಂಡೋ- ಪಾಕ್​ ನಡುವಿನ ಪಂದ್ಯ ಕೇವಲ ಕ್ರಿಕೆಟ್​ ಫೀಲ್ಡ್​ಗೆ ಸೀಮಿತವಾಗಿದ್ರೆ, ಇಂತಾ ಕ್ರೇಜ್​ ಬರ್ತಿತ್ತೋ ಇಲ್ವೋ ಗೊತ್ತಿಲ್ಲ.. ಆದ್ರೆ, ಭಾರತ -ಪಾಕಿಸ್ತಾನ ನಡುವಿನ ರಾಜಕೀಯ ಸಮಸ್ಯೆಗಳು, ಪಾಕ್​ ಉಗ್ರರ ಅಟ್ಟಹಾಸ, ಪಾಕ್​ ಆಕ್ರಮಿತ ಭಾರತದ ಗಡಿ ವಿವಾದ.. ಈ ಎಲ್ಲಾ ಕಾರಣಗಳಿಂದ ಇಂಡೋ- ಪಾಕ್​​ ಪಂದ್ಯ ಅಂದ್ರೆ, ಅದು ಯುದ್ಧದ ಸ್ವರೂಪ ಪಡೆಯುತ್ತೆ. ಇಂದೂ ಕೂಡ ಅದೇ ಕ್ರೇಜ್​ ಎಲ್ಲೆಡೆಯಿದೆ.

ಇದನ್ನೂ ಓದಿ: TDP, JDUಗೆ ಸಿಂಹಪಾಲು ಸಿಗಲಿದೆಯಾ.. ಮೋದಿ ಜೊತೆ ಇಂದು ಯಾರೆಲ್ಲ ಪ್ರಮಾಣ ವಚನ ಸ್ವೀಕರಿಸ್ತಾರೆ?

ಇಂಡೋ- ಪಾಕ್​ ತಂಡಗಳು ರೆಗ್ಯುಲರ್​ ಆಗಿ ಮುಖಾಮುಖಿಯಾಗಲ್ಲ. ಒಂದು ಐಸಿಸಿ ಟೂರ್ನಿ ನಡೆಯಬೇಕು ಅಥವಾ ಏಷ್ಯಾಕಪ್​ ನಡೀಬೇಕು. ಇದೀಗ 8 ತಿಂಗಳ ಅಂತರದಲ್ಲಿ ಮತ್ತೊಮ್ಮೆ, ಹೈವೋಲ್ಟೇಜ್​ ಕದನಕ್ಕೆ ರಣಕಣ ಸಜ್ಜಾಗಿದೆ. ಆಟಗಾರರು ಬ್ಯಾಟ್, ಬಾಲ್​ ಹಿಡಿದು ಆರ್ಭಟಿಸಲು ರೆಡಿಯಾಗಿದ್ದಾರೆ. ರಣರೋಚಕ ಕಾದಾಟವನ್ನ ನೋಡಲು ಫ್ಯಾನ್ಸ್​ ಕೂಡ ತುದಿಗಾಲಲ್ಲಿ ನಿಂತಿದ್ದು, ದೇಶದೆಲ್ಲೆಡೆ ಟೀಮ್​ ಇಂಡಿಯಾ ಗೆಲ್ಲಲಿ ಅನ್ನೋ ಪ್ರಾರ್ಥನೆ ಜೋರಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಗೆಲ್ತಿವೋ, ಬಿಡ್ತಿವೋ ಅನ್ನೋದು ಸೆಕೆಂಡ್ರಿ.. ಪಾಕಿಸ್ತಾನದ ವಿರುದ್ಧ ಸೋಲಬಾರ್ದು; ಕುತೂಹಲ ಕೆರಳಿಸಿದ ಮ್ಯಾಚ್!

https://newsfirstlive.com/wp-content/uploads/2023/09/IND_PAK-2.jpg

Load More