Baa Baa Black Sheep: ಮಾಸ್- ಗಾಡ್ ಅವತಾರದಲ್ಲಿ ಕಿಚ್ಚನ ಎಂಟ್ರಿ.. ಮ್ಯಾಕ್ಸ್ ಟೀಸರ್ ಸ್ಪೆಷಲ್‌ ಏನು?

author-image
admin
Updated On
Baa Baa Black Sheep: ಮಾಸ್- ಗಾಡ್ ಅವತಾರದಲ್ಲಿ ಕಿಚ್ಚನ ಎಂಟ್ರಿ.. ಮ್ಯಾಕ್ಸ್ ಟೀಸರ್ ಸ್ಪೆಷಲ್‌ ಏನು?
Advertisment
  • ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಮ್ಯಾಕ್ಸ್
  • ವಿಕ್ರಾಂತ್ ರೋಣ ಬಳಿಕ ಕಿಚ್ಚನ ಬಹುನಿರೀಕ್ಷಿತ ಸಿನಿಮಾ
  • ಮ್ಯಾಕ್ಸ್‌ ಟೀಸರ್‌ನಲ್ಲಿರುವ ಡೈಲಾಗ್ ತುಣುಕುಗಳು ವೈರಲ್‌!

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಮ್ಯಾಕ್ಸ್ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ‘ನನ್ನ ಜೀವನದಲ್ಲಿ ಆ ಇಬ್ಬರಿಗೆ ಮಾತ್ರ ಬಾಸ್​ ಅಂತ ಕರೀತಿನಿ’; ಕಿಚ್ಚ ಸುದೀಪ್ ಹೇಳಿದ್ದು ಯಾರ ಬಗ್ಗೆ?​ 

publive-image

ಬಾ ಬಾ ಬ್ಲ್ಯಾಕ್‌ ಶಿಪ್‌ ಹ್ಯಾವು ಎನಿ ಕ್ಲೂ ಅಂತ ಶುರುವಾಗಿರೋ ಟೀಸರ್‌ನಲ್ಲಿ ನೀನು ನನ್ನ ರಾಂಗ್ ಮಾಡಿದೆ ನಾನು ನಿನ್ನ ಗೇಮ್ ಎಂಡ್ ಮಾಡುತ್ತೇನೆ ಎಂದು ಸುದೀಪ್ ಅಬ್ಬರಿಸಿದ್ದಾರೆ. ವಿಕ್ರಾಂತ್ ರೋಣ ಬಳಿಕ ಬರ್ತಿರೋ ಕಿಚ್ಚನ ಸಿನಿಮಾ ಮ್ಯಾಕ್ಸ್ ಆಗಿದೆ.

ಇದನ್ನೂ ಓದಿ: ಕಾಲು ಜಾರಿ ಬಿದ್ದ ಬಿಗ್‌ಬಾಸ್ ಬೆಡಗಿ ದೀಪಿಕಾ ದಾಸ್.. ಮುಗ್ಗರಿಸಿ ಬಿದ್ದು ಮುಖಕ್ಕೆ ಪೆಟ್ಟು; ವಿಡಿಯೋ ವೈರಲ್! 

ಮಾಸ್- ಗಾಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರನ್ನು ಕಂಡು ಅಭಿಮಾನಿಗಳು ಹಬ್ಬ ಆಚರಿಸುತ್ತಿದ್ದಾರೆ. ಟೀಸರ್‌ನಲ್ಲಿನ ಆ್ಯಕ್ಷನ್ ದೃಶ್ಯಗಳು ಮೈ ಜುಂ ಎನ್ನಿಸುವಂತಿದ್ದು ಮಾಸ್ ಅಭಿಮಾನಿಗಳ ಕಣ್ಮನ ಸೆಳೆದಿದೆ.

publive-image

ಪ್ಯಾನ್-ಇಂಡಿಯಾ ಚಿತ್ರವಾದ ಮ್ಯಾಕ್ಸ್ ಒಂದು ಮಾಸ್ ಚಿತ್ರವಾಗಿದ್ದು, ಟೀಸರ್ ನಲ್ಲಿರುವ ಡೈಲಾಗ್ ತುಣುಕುಗಳು ಈಗಾಗಲೇ ಭರ್ಜರಿ ಸದ್ದು ಮಾಡಿ, ಸಿನಿ ಪ್ರೇಕ್ಷಕರು ಚಿತ್ರದ ಬರುವಿಕೆಯನ್ನು ಎದುರು ನೋಡುವಂತೆ ಮಾಡಿದೆ.

publive-image
ವಿಜಯ್ ಕಾರ್ತಿಕೇಯ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಮ್ಯಾಕ್ಸ್ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ಬಣ್ಣ ಹಚ್ಚಿದ್ದಾರೆ.

ಮ್ಯಾಕ್ಸ್‌ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಲೈಪುಲಿ ಎಸ್ ತನು ವಿ‌ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಾಗೂ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment