newsfirstkannada.com

‘ನನ್ನ ಜೀವನದಲ್ಲಿ ಆ ಇಬ್ಬರಿಗೆ ಮಾತ್ರ ಬಾಸ್​ ಅಂತ ಕರೀತಿನಿ’; ಕಿಚ್ಚ ಸುದೀಪ್ ಹೇಳಿದ್ದು ಯಾರ ಬಗ್ಗೆ?​

Share :

Published July 9, 2024 at 6:23am

Update July 9, 2024 at 6:24am

  ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್ ನಿಜ ಜೀವನದ​ ಬಾಸ್ ಯಾರು?

  ಸಾಕಷ್ಟು ಅಭಿಮಾನಿಗಳಿಗೆ ನಟ ಕಿಚ್ಚ ಸುದೀಪ್ ಎಂದರೆ ಪಂಚ ಪ್ರಾಣ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಕಿಚ್ಚ ಸುದೀಪ್ ಮಾತು

ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್ ಅವರು ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈಗಾಗಲೇ ನಟ ಕಿಚ್ಚ ಸುದೀಪ್​ ಅವರು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇನ್ನೂ ಕಿಚ್ಚ ಸುದೀಪ್​ ಅವರು ಅದೆಷ್ಟೋ ನಟ ಹಾಗೂ ನಟಿಯರಿಗೆ ಸುದೀಪ್ ಅವರೇ ಫೇವರಿಟ್. ಸಾಕಷ್ಟು ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಎಂದರೆ ಪಂಚ ಪ್ರಾಣ.

ಇದನ್ನೂ ಓದಿ: ದರ್ಶನ್ ಮಾಸ್ ಹೀರೋ.. ಜನ ಥಿಯೇಟರ್​ಗೆ ಬಂದೇ ಬರ್ತಾರೆ -ಬೇರೆಯದ್ದೇ ಇದೆ ಶಾಸ್ತ್ರಿ ರೀ-ರಿಲೀಸ್ ಲೆಕ್ಕಾಚಾರ..!

ಆದರೆ ನಟ ಸುದೀಪ್​ ಅವರು ತಮ್ಮ ಜೀವನದಲ್ಲಿ ಇಬ್ಬರು ವ್ಯಕ್ತಿಗಳಿಗೆ ಮಾತ್ರ ಬಾಸ್ ಅಂತಾ ಕರೆಯುತ್ತಾರಂತೆ. ಈ ಬಗ್ಗೆ ಖುದ್ದು ಕಿಚ್ಚ ಸುದೀಪ್​ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಹೌದು, ಕಲಾ ಮಾಧ್ಯಮ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಸುದೀಪ್ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಅವರು ಈ ಸಂದರ್ಶನದಲ್ಲಿ ನಟ ಕಿಚ್ಚ ಸುದೀಪ್ ಅವರಿಗೆ ಈ ಪ್ರಶ್ನೆ ಮಾಡಿದ್ದಾರೆ. ನಿಮ್ಮ ನೆಚ್ಚಿನ ಕಲಾವಿದರು ಯಾರು ಅಂತ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಟ ಸುದೀಪ್ ಅವರು, ನನ್ನ ಫೇವರಿಟ್ ಹೀರೋ ವಿಷ್ಣು ಸರ್. ಇದನ್ನು ಸಾಕಷ್ಟು ಬಾರಿ ಹೇಳಿದ್ದೇನೆ. ಜೀವನದಲ್ಲಿ ನಾನು ಇಬ್ಬರಿಗೆ ಮಾತ್ರ ಬಾಸ್ ಎಂದು ಕರೆದಿದ್ದು. ನಮ್ಮ ತಂದೆಗೆ, ಅದನ್ನು ಇವತ್ತಿಗೂ ಕರೆಯುತ್ತೇನೆ. ಹಾಗೂ ವಿಷ್ಣು ಸರ್​ಗೆ. ವಿಷ್ಣು ಅವರ ಪರ್ಸನಾಲಿಟಿ ಸಖತ್ ಇಷ್ಟ. ಅವರ ಗತ್ತು, ಇರೋ ರೀತಿ ಸಖತ್ ಇಷ್ಟ. ಅವರು ಯಾವಾಗಲೂ ನನ್ನ ಫೇವರಿಟ್ ಅಂತ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನ್ನ ಜೀವನದಲ್ಲಿ ಆ ಇಬ್ಬರಿಗೆ ಮಾತ್ರ ಬಾಸ್​ ಅಂತ ಕರೀತಿನಿ’; ಕಿಚ್ಚ ಸುದೀಪ್ ಹೇಳಿದ್ದು ಯಾರ ಬಗ್ಗೆ?​

https://newsfirstlive.com/wp-content/uploads/2023/07/kiccha-2.jpg

Load More