newsfirstkannada.com

ಮತ್ತೊಂದು ಭೀಕರ ದುರಂತ.. ಪ್ರಸಿದ್ಧ ಸಿದ್ದೇಶ್ವರನಾಥ್ ಮಂದಿರದಲ್ಲಿ ಕಾಲ್ತುಳಿತ; ಜೀವ ಕಳೆದುಕೊಂಡವರೆಷ್ಟು?

Share :

Published August 13, 2024 at 6:19pm

Update August 13, 2024 at 6:20pm

    ಬಿಹಾರದ ಸಿದ್ದೇಶ್ವರನಾಥ್ ಮಂದಿರಕ್ಕೆ ಹರಿದು ಬಂದ ಭಕ್ತಸಾಗರ

    ಜನಸಂದಣಿ ನಿಯಂತ್ರಣಕ್ಕೆ ಬಾರದೆ ದೇಗುಲದಲ್ಲಾಯ್ತು ಕಾಲ್ತುಳಿತ

    ಕಾಲ್ತುಳಿತದಲ್ಲಿ ಭಕ್ತರ ದುರ್ಮರಣ.. ಹಲವು ಮಂದಿಗೆ ಗಂಭೀರ ಗಾಯ

ಪಾಟ್ನಾ: ಸದ್ಯ ಶ್ರಾವಣಮಾಸ ಶುರುವಾಗಿದೆ. ಶಿವನ ದೇವಸ್ಥಾನಗಳಲ್ಲಿ ಭಕ್ತಸಾಗರ ಹರಿದು ಬರುತ್ತಿದೆ. ಪೂಜೆ ಪುನಸ್ಕಾರಗಳು ಜೋರಾಗಿ ನಡೆಯುತ್ತಿವೆ. ಇದೇ ಭಕ್ತಿ ಪರವಶತೆ ಬಿಹಾರದಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗಿ ಹೋಗಿದೆ. ಬಿಹಾರದ ಜಹನಾಬಾದ್​ ಜಿಲ್ಲೆಯಲ್ಲಿರುವ ಸಿದ್ಧೇಶ್ವರನಾಥ್ ಮಂದಿರಕ್ಕೆ ರವಿವಾರದಂದು ಭಕ್ತಸಾಗರವೇ ಹರಿದು ಬಂದಿದೆ. ಪ್ರವೇಶ ಹಾಗೂ ನಿರ್ಗಮನದ ಸಮಯದಲ್ಲಿ ಜನರ ನಡುವೆ ಸುಳಿದಾಡಲು ಆಗದದಷ್ಟು ಜನಸಂದಣಿಯಾಗಿದ್ದರಿಂದ ಕಾಲ್ತುಳಿತವಾಗಿ 7 ಮಂದಿ ಭಕ್ತರ ಜೀವ ಕಳೆದುಕೊಂಡ ಘಟನೆ ನಡೆದಿದೆ.

ಇದನ್ನೂ ಓದಿ: ನಿವೃತ್ತ ಇಂಜಿನಿಯರ್ ಲಕ್ಷ, ಲಕ್ಷ​ ಹಣ ಗುಳುಂ ಮಾಡಿದ ಬ್ಯಾಂಕ್ ಮ್ಯಾನೇಜರ್​; ಯಾಕೆ ಅಂತ ಕೇಳಿದ್ದಕ್ಕೆ ಮರ್ಡರ್‌!

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಈಗ ದೊಡ್ಡ ಸದ್ದು ಮಾಡುತ್ತಿದೆ. ಮಹಾದೇವನ ದರ್ಶನಕ್ಕೆ ಬಂದವರು ನಡರಾತ್ರಿ 11.30ರ ಸುಮಾರಿಗೆ ಭಕ್ತಸಾಗರ ಹೆಚ್ಚಾದ ಕಾರಣದಿಂದಾಗಿ ಕಾಲ್ತುಳಿತ ಸಂಭವಿಸಿದೆ. ಮೃತಪಟ್ಟ 7 ಜನರಲ್ಲಿ ಆರು ಜನರು ಮಹಿಳೆಯರೇ ಎಂದು ತಿಳಿದು ಬಂದಿದೆ. ಮತ್ತೊಂದು ವಿಷಯವಂದ್ರೆ ಮೃತಪಟ್ಟ 7 ಜನರೂ ಕೂಡ ಕನ್ವರ್ ಯಾತ್ರೆಗೆ ಅಂತ ಬಂದಿದ್ದ ಕನ್ವರಿಯಾಗಳು ಎಂದು ದೇವಸ್ಥಾನ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ರೇಪ್ ಮಾಡಿ ಮುಖಕ್ಕೆ ಗುದ್ದಿದ.. ವೈದ್ಯೆಯ ಕಣ್ಣಿಗೆ ಹೊಕ್ಕ ಚಸ್ಮಾ ಗ್ಲಾಸ್; ಕೊಲ್ಕತ್ತಾ ಕಿರಾತಕನ ಮತ್ತಷ್ಟು ಕ್ರೌರ್ಯ ಬಯಲು

ಬಿಹಾರದ ಸಿಎಂ ನಿತೀಶ್ ಕುಮಾರ್​ ಘಟನೆಯ ಕುರಿತು ನೋವು ವ್ಯಕ್ತಪಡಿಸಿದ್ದಾರೆ. ಮೃತ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಇನ್ನು ಮೃತಪಟ್ಟವರನ್ನು ಪ್ಯಾರೆ ಪಾಸ್ವಾನ್, ನಿಶಾದೇವಿ, ಪೂನಮ್ ದೇವಿ ನಿಶಾ ಕುಮಾರಿ ಹಾಗೂ ಸುಶೀಲಾ ದೇವಿ ಎಂದು ಗುರುತಿಸಲಾಗಿದೆ. ಒಬ್ಬ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೊಂದು ಭೀಕರ ದುರಂತ.. ಪ್ರಸಿದ್ಧ ಸಿದ್ದೇಶ್ವರನಾಥ್ ಮಂದಿರದಲ್ಲಿ ಕಾಲ್ತುಳಿತ; ಜೀವ ಕಳೆದುಕೊಂಡವರೆಷ್ಟು?

https://newsfirstlive.com/wp-content/uploads/2024/08/sidheswaranath-temple.jpg

Load More